ಹಾಲನೂರು ಲೇಪಾಕ್ಷ ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆ‌ಯಿಂದ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ : ಗೌರಿಶಂಕರ್

ತುಮಕೂರು : ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತನಾಗಿ, ಮುಖಂಡನಾಗಿ ಗುರುತಿಸಿಕೊಂಡಿದ್ದ ಹಾಲನೂರು ಲೇಪಾಕ್ಷ್‌ ರವರು ಜೆಡಿಎಸ್‌ ಪಕ್ಷದ ತತ್ವ ಸಿದ್ಧಾಂತ, ಜನಪರ ಕಾರ್ಯಗಳು, ಕುಮಾರಸ್ವಾಮಿಯವರ ಮುಂದಿನ ಕಾರ್ಯಯೋಜನೆಗಳು, ಪಂಚರತ್ನ ರಥ ಯಾತ್ರೆ ಹಾಗೂ ಇನ್ನೂ ಮುಂತಾದ ಕಾರ್ಯಗಳಿಂದ ಪ್ರೇರಣೆಯಾಗಿ ಬಿಜೆಪಿ ಪಕ್ಷದಿಂದ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪನವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

 

 

 

 

ಹಾಲನೂರು ಲೇಪಾಕ್ಷರವರು ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿ, 2 ಭಾರಿ ವಿಧಾನಪರಿಷತ್‌ (ಶಿಕ್ಷಕರ ಕ್ಷೇತ್ರ)ದಿಂದ ಚುನಾಯಿತರಾಗಲು ಶ್ರಮಿಸಿ, ಟಿಕೇಟ್‌ ಕೇಳಲಾಗಿದ್ದು, ತಮಗೆ 2 ಭಾರಿಯೂ ಬಿಜೆಪಿ ಟಿಕೇಟ್‌ ನೀಡುವುದಾಗಿ ಹೇಳಿ ಭರವಸೆಯನ್ನು ಕೊಟ್ಟು, ಕೊನೆ ಕ್ಷಣಗಳಲ್ಲಿ ಟಿಕೇಟ್‌ ಕೈ ತಪ್ಪಿಸಿ ಬೇರೊಬ್ಬರಿಗೆ ಮಣೆ ಹಾಕಿರುವ ಸಂಸ್ಕೃತಿಯನ್ನು ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ವತಃ ಅವರೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

 

 

 

 

ಇನ್ನು ತನಗೆ ಬಿಜೆಪಿಯಲ್ಲಿ ಜಿ.ಎಸ್.ಬಸವರಾಜುರವರು ಮೊದಲ್ಗೊಂಡು  ,ಎ.ನಾರಯಣಸ್ವಾಮಿ, ಸುರೇಶ್‌ ಗೌಡ್ರು, ತಿಪ್ಪಾರೆಡ್ಡಿ, ಇವರುಗಳು  ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರಿಗೆ ಒತ್ತಡ ತಂದು ನನ್ನಗೆ ಟಿಕೇಟ್‌ ಕೈ ತಪ್ಪುವಂತೆ ಮಾಡಿದ್ದರು ಎಂದರು, ಅದಕ್ಕೂ ಮುಂಚಿತವಾಗಿ ಬಿ.ಎಸ್.ವೈ. ಅವರು ನನಗೆ ಪರಿಷತ್‌ ಟಿಕೇಟ್‌ ಅನ್ನು ನೀಡಿದ್ದರೂ ಸಹ ಇವರುಗಳೆಲ್ಲ ಬಂದು ನನ್ನನ್ನು ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಿದ್ದಲ್ಲದೇ, ಬಿ.ಎಸ್.ವೈ. ಅವರು ಮುಂದೊಂದು ದಿನ ತನಗೆ ಪಕ್ಷದಲ್ಲಿ ಉನ್ನತ ಹುದ್ದೆ, ಮಂಡಳಿಯ ಅಧ್ಯಕ್ಷರು ಹಾಗೂ ಇನ್ನಿತರೆ ಯಾವುದಾದರೂ ಪದವಿಯನ್ನು ನೀಡುವುದಾಗಿಯೂ ಹೇಳಿದ್ದರೂ, ಆದರೆ ಯಾವುದೊಂದನ್ನು ಮಾಡಿರಲಿಲ್ಲ, ಈ ಎಲ್ಲಾ ಕಾರಣಗಳಿಂದಲೂ ಸಹ ನಾನು ಬೇಸತ್ತು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.

 

 

 

 

 

 

ಇನ್ನುಳಿದಂತೆ ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್‌ ರವರು ಮತನಾಡಿ ಹಾಲನೂರು ಲೇಪಾಕ್ಷರವರು ವೀರಶೈವ ಸಮಾಜದ ಪ್ರಮುಖ ನಾಯಕರಲ್ಲೊಬ್ಬರು, ಅವರು ರುಪ್ಸಾ ಅಧ್ಯಕ್ಷರೂ ಆಗಿದ್ದು, ಅವರ ಹಿಂದೆ ದೊಡ್ಡ ಬಳಗವೇ ಇದೆ, ಇವರ ವರ್ಚಸ್ಸು ನಮ್ಮ ಪಕ್ಷಕ್ಕೆ ಅವಶ್ಯಕವೂ ಆಗಿದೆ ಜೊತೆಗೆ ಇವರಿಗೆ ಪಕ್ಷದಲ್ಲಿ ಉನ್ನತ ಸ್ಥಾನವನ್ನು ಅತೀ ಶೀಘ್ರದಲ್ಲಿಯೇ ನೀಡಲಾಗುವುದೆಂದು ತಿಳಿಸಿದರು.

 

 

 

 

 

 

 

ಇದೇ ಸಂದರ್ಭದಲ್ಲಿ ಹಾಲನೂರು ಲೇಪಾಕ್ಷರವರೊಂದಿಗೆ ಸುಮಾರು 25ಕ್ಕೂ ಅಧಿಕ ಮಂದಿ ಜೆಡಿಎಸ್‌ ಪಕ್ಷದ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖ ಬಿಜೆಪಿ ತೊರೆದು ಜೆಡಿಎಸ್‌ ಸರ್ಪಡೆಗೊಂಡರು. ಸೇರ್ಪಡೆಯಾದವರಲ್ಲಿ ಕೆಲವರು ಮಾತನಾಡುತ್ತಾ ತಾವು ಭ್ರಷ್ಠ ಬಿಜೆಪಿಯನ್ನು ತೊರೆದು ಜೆಡಿಎಸ್‌ ಸೇರ್ಪಡೆಗೊಳ್ಳುತ್ತಿರುವುದಕ್ಕೆ ತಮಗೆ ಖುಷಿ ತಂದಿದೆ ಎಂದರು.

 

 

 

 

 

 

ಇನ್ನು ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನಗರ ಜೆಡಿಎಸ್‌ ಅಭ್ಯರ್ಥಿ ಎನ್.ಗೋವಿಂದರಾಜು, ಆರ್.ಸಿ.ಆಂಜಿನಪ್ಪ, .ಕೆ.ವಿಜಯ್‌ ಗೌಡರು, ಬೆಳ್ಳಿ ಲೋಕೇಶ್‌, ಟಿ.ಆರ್.ನಾಗರಾಜು, ದೇವರಾಜು ಹಾಗೂ ಇನ್ನು ಇತರೆ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!