ಜೆಡಿಎಸ್ ಪಕ್ಷವು ಅತ್ಯಂತ ಮಹತ್ವಪೂರ್ಣ ಯೋಜನೆಯಗಳಾದ ಶಿಕ್ಷಣ, ಆರೋಗ್ಯ, ರೈತರ ಕಾಳಜಿ, ವಸತಿ, ಯುವ ನವ ಮಾರ್ಗ ಮತ್ತು ಮಹಿಳಾ ಸಬಲೀಕರಣದ ಕುರಿತಂತೆ ರಾಜ್ಯಾದ್ಯಂತ ಜನರಿಗೆ ಅರಿವು ಮೂಡಿಸುವುದು ಮತ್ತು ತಮ್ಮ ಪಕ್ಷದ ಮಹತ್ವಪೂರ್ಣ ಪ್ರಣಾಳಿಕೆಯನ್ನಾಗಿ ಮಾಡಿಕೊಂಡು ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿರುವ ಜನರಿಗೆ ತಲುಪಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನಾಗಿ ಪಂಚರತ್ನ ಯಾತ್ರೆಯನ್ನು ನಡೆಸುತ್ತಿದ್ದು.
ಇದರ ಭಾಗವಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಇದುವರೆವಿಗೆ 35 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ, ಅಪಾರ ಜನ ಮನ್ನಣೆಯನ್ನು ಗಳಿಸುತ್ತಿದ್ದಾರೆ, ಇದರ ಹಿನ್ನಲೆಯಲ್ಲಿಯೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತೆರಳಿದ ಸಂದರ್ಭಗಳಲ್ಲಿ ಕುಮಾರಸ್ವಾಮಿಗೆ ವಿಶೇಷ ಮತ್ತು ವಿಭಿನ್ನ ಅದ್ಧೂರಿ ಸ್ವಾಗತವನ್ನು ತಮ್ಮ ಕಾರ್ಯಕರ್ತರು, ಪಕ್ಷದ ಮುಖಂಡರು ಮಾಡಿಕೊಂಡು ಬರುತ್ತಿದ್ದಾರೆ.
ಅದರಂತೆಯೇ ಪಂಚರತ್ನ ರಥ ಯಾತ್ರೆಯು ರಾಜ್ಯದ ಗಮನ ಸೆಳೆದಿರುವುದು ಹೆಚ್.ಡಿ.ಕುಮಾರಸ್ವಾಮಿಯವರಿಗೆ ಬೃಹತ್ ವಿಶೇಷ ಹಾರಗಳನ್ನು ಹಾಕುತ್ತಿರುವುದು, ಅದರಲ್ಲಿಯೂ ಎಲ್ಲವೂ ಸ್ವತಃ ಜನರಿಂದಲೇ ತಯಾರಾದಂತಹ ಹಾರಗಳು ಇವಾಗಿವೆ.
ಅದರಲ್ಲಿಯೂ ವಿಶೇಷವಾಗಿ ಕ್ಯಾರಟ್ ಹಾರ, ಹಿತುಕಿದ ಬೇಳೆ ಹಾರ, ಶಾಲಾ ಬ್ಯಾಗ್ ಹಾರ, ಹಲಸಿನ ಹಣ್ಣಿನ ಹಾರ, ರಾಖಿ ಹಾರ, ಕಾಯಿನ್ ಗಳ ಹಾರ, ಸೌತೆಕಾಯಿ ಹಾರ, ವಿವಿಧ ಬಗೆಗಳ ತರಕಾರಿ ಹಾರ, ಬೃಹತ್ ಹೂವಿನ ಹಾರ, ಮುಸುಕಿನ ಜೋಳದ ಹಾರ, ಹೀಗೆ ನಾನಾ ವಿಧಗಳ 500ಕ್ಕೂ ಹೆಚ್ಚು ರೀತಿಯಾದ ಹಾರಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹಾಕಿರುವುದು ದೇಶದಲ್ಲಿಯೇ ಪ್ರಪ್ರಥಮವೆಂದು ಹೇಳಲಾಗಿದೆ.
ಈ 500ಕ್ಕೂ ಹೆಚ್ಚು ವಿವಿಧ ಬಗೆಯ ಹಾರಗಳಿಗೆ ಸಂಬಂಧಿಸಿದಂತೆ ಏಷ್ಯ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ರವರು ಕುಮಾರಸ್ವಾಮಿಯವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಪಂಚರಾತ್ನ ಯಾತ್ರೆಯು ಮುಗಿಸಿ ಕುಣಿಗಲ್ ಕ್ಷೇತ್ರಕ್ಕೆ ತೆರಳುವ ಮುಂಚಿತವಾಗಿ ಅವರಿಗೆ ಸಮರ್ಪಿಸಿದ್ದಾರೆ.
ಇನ್ನು ಕುಮಾರಸ್ವಾಮಿಯವರಿಗೆ ಪಂಚರತ್ನ ರಥ ಯಾತ್ರೆಯ ಸಂಬಂಧ ವಿವಿಧ ಭಾಗಗಳ ಜನರ ಕಷ್ಟ, ನೋವು ನಲಿವುಗಳನ್ನು ಆಲಿಸಿಕೊಂಡು, ಸಾಗುತ್ತಿದ್ದು, ತಮ್ಮ ಸರ್ಕಾರ ಬಂದರೇ ಜನರ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿಯೇ ನಿವಾರಿಸುವಲ್ಲಿ ಅತ್ಯಂತ ಶ್ರಮವಹಿಸುವುದಾಗಿಯೂ ಸಹ ವಾಗ್ದಾನ ಮಾಡುತ್ತಿದ್ದಾರೆ.
ಯಾವುದೇ ಏನೇ ಆದರೂ ಒಬ್ಬ ಮಾಜಿ ಮುಖ್ಯಮಂತ್ರಿಗಳಿಗೆ ಹಾಕುತ್ತಿರುವ ವಿಭಿನ್ನ ಬಗೆಯ ಹಾರಗಳಿಗೆ ಸಂಬಂಧಿಸಿದಂತೆ ಈ ರಥ ಯಾತ್ರೆಯು ಇತಿಹಾಸದ ಪುಟ ಸೇರಿರುವ ಕಾರಣಕ್ಕೆ ಕಾರ್ಯಕರ್ತರಲ್ಲಿ ಹರ್ಷ ಮೂಡಿದೆ.