ಸತ್ತ ವ್ಯಕ್ತಿಗೂ ವಯಸ್ಸಿನ ದೃಢೀಕರಣ ನೀಡುವರೇ??

ಮಧುಗಿರಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ಕಳ್ಳಾಟ: ಸತ್ತ ವ್ಯಕ್ತಿಗೆ ವಯಸ್ಸಿನ ದೃಡೀಕರಣ ಪತ್ರ

ತುಮಕೂರು :
ಹಣದ ದುರಾಸೆಗೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ವಯಸ್ಸಿನ ನಕಲಿ ದೃಢೀಕರಣ ಪತ್ರ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣಕ್ಕಾಗಿ ಅಂಗವಿಕರ ಹಾಗೂ ವಯಸ್ಸಿನ ದೃಡೀಕರಣ ಪತ್ರ ನೀಡುತ್ತಾರೆ ಎಂದು ಆರೋಪಗಳು ಕೇಳಿಬಂದರೂ ಅವು ಬೆಳಕಿಗೆ ಬರುತ್ತಿರಲಿಲ್ಲ,ಹಣದ ಆಸೆಗೆ ಸಾರ್ವಜನಿಕ ಆಸ್ಪತ್ರೆ ವೈದ್ಯರೇ ನಕಲಿ ದೃಡೀಕರಣ ಪತ್ರ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

 

 

 

 

 

 

ಮಧುಗಿರಿ ಪಟ್ಟಣದ ಲಿಂಗೇನಹಳ್ಳಿ ಬಡಾವಣೆಯ ಹನುಮಂತರಾಯಪ್ಪ 4 ವರ್ಷಗಳ ಹಿಂದೆ ನಿಧನರಾಗಿದ್ದರು ಇವರ ಮಗ ಮಹೇಶ್ ಆಸ್ಪತ್ರೆ ಭ್ರಷ್ಟಾಚಾರ ಬಯಲಿಗೆಳೆಯಲು ಆಸ್ಪತ್ರೆ ನೌಕರ ಎಂದು ಹೇಳಿಕೊಳ್ಳುವ ರಾಜಣ್ಣ ಎಂಬುವವನ ಬಳಿ 5000 ಹಣ ಹಾಗೂ ಮೃತತಂದೆಯ ಆಧಾರ್ ಕಾರ್ಡ್ ನೀಡಿದ್ದಾನೆ ಹಣ ಪಡೆದ ರಾಜಣ್ಣ ಸತ್ತಿರುವ ಹನುಮಂತರಾಯಪ್ಪನ ಹೆಸರಿನಲ್ಲಿ ಇಬ್ಬರು ವೈದ್ಯರ ಸಹಿ ಹಾಗು ಕಚೇರಿ ಮೊಹರಿನೊಂದಿಗೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಸಿದಂತೆ ರಾಜಣ್ಣ ಹಾಗೂ ಇಬ್ಬರು ವೈದ್ಯರ ವಿರುದ್ದ ಮಹೇಶ್ ಮಧುಗಿರಿ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!