ಇತಿಹಾಸದ ಪುಟ ಸೇರಲಿದೆ ತುಮಕೂರು ಗ್ರಾಮಾಂತರದ ಪಂಚರತ್ನ ರಥಯಾತ್ರೆ

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪಂಚರತ್ನ ರಥ ಯಾತ್ರೆಯು ಡಿಸೆಂಬರ್ 29ರಂದು ಆಗಮಿಸಲಿದ್ದು ಇದಕ್ಕೆ ಸಂಬಂಧಿಸಿದಂತೆ ಅದ್ದೂರಿ ಸಿದ್ದತೆಯನ್ನು ಮಾಡಿಕೊಂಡಿರುವುದಾಗಿ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಮಾದ್ಯಮಗೋಷ್ಠಿ ನಡೆಸಿ ತಿಳಿಸಿದ್ದಾರೆ.

 

 

 

 

 

 

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆಗೆ ಪ್ರಪ್ರಥಮವಾಗಿ ಆಗಮಿಸಲಿದ್ದು, ಅಲ್ಲಿ ಸರಳ ರೀತಿಯಲ್ಲಿ ಬರಮಾಡಿಕೊಂಡು ಅಲ್ಲಿಂದ ಹೆಬ್ಬೂರಿಗೆ ಕರೆದುಕೊಂಡು ಹೋಗಿ, ಅಲ್ಲಿ ಕುಮಾರಣ್ಣನವರಿಗೆ ಅದ್ಧೂರಿಯಾದ ಸ್ವಾಗತವನ್ನು ಹೆಬ್ಬೂರಿನಲ್ಲಿ ಆಯೋಜಿಸಲಾಗಿದೆಂದು ತಿಳಿಸಿದರು.

 

 

 

 

ಈ ಕ್ಷೇತ್ರದಲ್ಲಿ ನೆಚ್ಚಿನ ನಾಯಕನಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗಾಗಿ ವಿಶೇಷ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಂದು ತಿಳಿಸಿದರು.

 

 

 

 

 

 

 

 

ಇನ್ನು ನಾಳೆ ನಡೆಯುವ ಪಂಚರತ್ನ ರಥ ಯಾತ್ರೆಯು ಹೆಬ್ಬೂರು, ನಾಗವಲ್ಲಿ, ಹೊನ್ನುಡಿಕೆ ,ಹೊನ್ನಡಿಕೆ ಹ್ಯಾಂಡ್ ಪೋಸ್ಟ್ ಗೂಳೂರು, ಪಂಡಿತನಹಳ್ಳಿ , ಉರ್ಡಿಗೆರೆ, ಬೆಳಗುಂಬ ಮಾರ್ಗವಾಗಿ ಯಲ್ಲಾಪುರದವರೆಗೂ ಪಂಚರತ್ನ ರಥಯಾತ್ರೆ ಸಾಗಲಿದ್ದು ಯಾತ್ರೆ ಯುದ್ಧಕ್ಕು ವಿವಿಧ ಕಲಾತಂಡಗಳು ಸೇರಿದಂತೆ 50,000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

 

 

 

 

ಇನ್ನು ಪಂಚರತ್ನ ರಥ ಯಾತ್ರೆಗೆ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು, ರೈತರು ಸೇರಿದಂತೆ ಗ್ರಾಮಾಂತರ ಕ್ಷೇತ್ರದ  ಸಾರ್ವಜನಿಕರಿಂದ ಅದ್ದೂರಿ ಸ್ವಾಗತಕ್ಕೆ ವೇದಿಕೆಯು ಸಹ ಸಿದ್ಧಗೊಂಡಿದ್ದು.

 

 

 

 

 

 

 

ಹೆಬ್ಬುರಿನಲ್ಲಿ ಯಾತ್ರೆ ಆಗಮಿಸುವ ವೇಳೆ 25000 ಹೆಚ್ಚು ಜನರಿಂದ ವಿಭಿನ್ನ ಸ್ವಾಗತ ಮಾಡಲು ನಿರ್ಧರಿಸಲಾಗಿದೆ ಎಂದರು. ಈ ರೀತಿಯಾದ ಸ್ವಾಗತ ತಾವುಗಳು ಬೇರೆಲ್ಲೂ ನೋಡಿರದಂತಹ ಸ್ವಾಗತವನ್ನು ಮತ್ತು ರಸ್ತೆಯುದಕ್ಕೂ ವಿಭಿನ್ನ ರೀತಿಯಲ್ಲಿ ರಥ ಯಾತ್ರೆ ಸಾಗಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿಯೂ ತಿಳಿಸಿದರು. ಅದರಂತೆ  ಪ್ಯಾರಾ ಗ್ಲೈಡಿಂಗ್ ಮೂಲಕ ಹೂವಿನ ಮಳೆ ಸುರಿಸುವುದು,   ಡ್ರೋನ್‌ಗಳ ಮೂಲಕ ವಿಶೇಷ ಷೋ ಮತ್ತು ನಮ್ಮ ಪಕ್ಷದ ಚಿಹ್ನೆಯನ್ನು ಮೂಡಿಸುವುದು (ಇದು ದೇಶದಲ್ಲಿಯೇ ಪ್ರಪ್ರಥಮ) ಎಂಬ ಹೆಗ್ಗಳಿಗೆ ನಮ್ಮದು ಎಂದರು.

 

 

 

 

 

 

 

ಇದರ ಮುಂದುವರೆದ ಭಾಗವಾಗಿ ಬಲೂನ್ ಶೋ , ಅಂಬ್ರೆಲಾ ಶೋ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವಿಶೇಷ ಕಾರ್ಯಕ್ರಮ ಹಾಗೂ ಯಲ್ಲಾಪುರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.

 

 

 

 

 

ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ಮಾಹಿತಿ ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ರವರ ಕುರಿತಂತೆ  ವಿಶೇಷ ಲೇಸರ್‌ ಶೋ (ಮೈಸೂರು ದಸರಾದಲ್ಲಿ ನಡೆಯುವ ಷೋ ನಂತೆ)  ವಿನೂತನ ಕಾರ್ಯಕ್ರಮದೊಂದಿಗೆ  ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆಂದು ತಿಳಿಸಿದರು.

 

 

 

 

ಪಂಚರತ್ನ ರಥಯಾತ್ರೆಯ ಉದ್ದಕ್ಕೂ ವಿವಿಧ ರೀತಿಯಲ್ಲಿ ಸ್ವಾಗತ ಕೋರಲು ಪಕ್ಷದ ಕಾರ್ಯಕರ್ತರು ಮುಖಂಡರು ಅಣಿಯಾಗಿದ್ದು 200ಕ್ಕು ಹೆಚ್ಚು ಜೆಸಿಬಿ ಮೂಲಕ ಹೂ ಮಳೆ ಸುರಿಸಲಾಗುವುದು ಹಾಗೂ  ಲಕ್ಷ ದೀಪೋತ್ಸವ ಕಾರ್ಯಕ್ರಮ , 500 ಆಟೋ ಹಾಗೂ 500 ಕಾರ್ ಗಳ ಮೂಲಕ ಅದ್ದೂರಿಯಾಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನ ನಡೆಸಲು ಸಕಲ ಸಿದ್ಧತೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

 

ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ

 

ತುಮಕೂರಿನ ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದರು.

 

 

ಇನ್ನು ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹಾಲನೂರು ಅನಂತ್ ಕುಮಾರ್, ಟಿ ಆರ್ ನಾಗರಾಜು ಹಾಗೂ ಇತರರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!