ತುಮಕೂರು: ತುಮಕೂರು ನಗರದಲ್ಲಿ ದಿನೇ ದಿನೇ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ತುಮಕೂರು ನಗರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಬಹುಕೋಟಿಗಳ ಸರದಾರ ಆಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ರವರು ತುಮಕೂರು ನಗರದ ಸ್ಥಳೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಇನ್ನು ಆಟಿಕ ಬಾಬು ರವರು ಚುನಾವಣೆಗೆ ಸ್ಪರ್ಧಿಸಲು ಮುಂದಾಗುತ್ತಿದಂತೆ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲಕ್ಕೆ ಈಡಾಗಿರುವುದು ಕಂಡುಬಂದಿರುವ ಬೆನ್ನಲ್ಲೇ ತುಮಕೂರು ನಗರ ಜೆಡಿಎಸ್ ಪಕ್ಷದ ಆಕಾಂಕ್ಷಿ ಎನ್ ಗೋವಿಂದರಾಜು ರವರ ಬೆಂಬಲಿಗರು ಅಟಿಕ ಬಾಬು ರವರ ಕಾರನ್ನು ಅಡ್ಡಗಟ್ಟಿರುವ ಘಟನೆ ತುಮಕೂರು ನಗರದ ಟೌನ್ ಟೌನ್ ಹಾಲ್ ನಲ್ಲಿ ಕಳೆದ ರಾತ್ರಿ ನಡೆದಿದೆ.
ಇನ್ನು ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಟೌನ್ ಹಾಲ್ ನಲ್ಲಿರುವ ದರ್ಗಾ ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೊರಬಂದ ಬೊಮ್ಮನಹಳ್ಳಿ ಬಾಬು ರವರನ್ನ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ಹಿಂಬಾಲಕರು ಹಾಗೂ ಕಾರ್ಯಕರ್ತರು ಗೋವಿಂದರಾಜು ರವರು ತಮ್ಮ ಬಳಿ ಹಣ ಪಡೆದಿರುವ ವಿಡಿಯೋ ತೋರಿಸಿ ಎಂದು ಪಟ್ಟು ಹಿಡಿದು ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ಹಿನ್ನಲೆಯಲ್ಲಿ ಕೆಲ ವ್ಯಕ್ತಿಗಳು ಅಟಿಕ ಬಾಬು ರವರ ರಕ್ಷಣೆಗೆ ಮುಂದಾದಾಗ ಸುಹೈಲ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಇನ್ನು ದೊಡ್ಡ ಮಟ್ಟದಲ್ಲಿ ಗೋವಿಂದರಾಜು ಬೆಂಬಲಿಗರು ಅಟ್ಟಿಕಾ ಬಾಬು ರವರ ಕಾರನ್ನು ಸುತ್ತುವರಿದ ಹಿನ್ನೆಲೆಯಲ್ಲಿ ಅಟಿಕ ಬಾಬು ರವರು ಮತ್ತೊಂದು ಕಾರಿನಲ್ಲಿ ತೆರಳುವ ಪ್ರಸಂಗ ಬಂದಿದೆ, ಜೊತೆಗೆ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದ್ದೇ ಅವರು ಹೋದಲ್ಲಿ ಬಂದಲ್ಲೆಲ್ಲಾ ಗೋವಿಂದರಾಜು ರವರು ತನ್ನ ಬಳಿ 6 ಕೋಟಿ ಪಡೆದಿರುವುದಾಗಿ ಹೇಳುತ್ತಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಟಿಕ ಬಾಬು ರವರನ್ನ ತೆರಳಲು ದಾರಿ ಬಿಡಿಸಲು ಹರಸಾಹಸವೆ ಪಡುವಂತಾಯಿತು.
ಇನ್ನು ಬೃಹತ್ ಮಟ್ಟದ ಜೆಡಿಎಸ್ ಕಾರ್ಯಕರ್ತರು ಅಟಿಕ ಬಾಬು ರವರಿಗೆ ಗೆರಾವ್ ಹಾಕಿದ್ದು ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಪರಿಸ್ಥಿತಿಯನ್ನ ತಿಳಿಗೊಳಿಸಿದರು.
6 ಕೋಟಿ ಡೀಲ್ ಹಿಂದಿದೆಯ ರಹಸ್ಯ…..????
ಇನ್ನು ಆಟಿಕ ಬಾಬು ರವರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎನ್ ಗೋವಿಂದರಾಜುರವರು ತಮ್ಮ ಕುಟುಂಬ ವರ್ಗದವರ ಮೂಲಕ 6 ಕೋಟಿ ಹಣವನ್ನು ಪಡೆದು ಕ್ಷೇತ್ರವನ್ನ ಬಿಟ್ಟು ಕೊಡುವುದಾಗಿ ಅಟಿಕಾ ಬಾಬು ರವರಿಗೆ ಗೋವಿಂದರಾಜುರವರು ಮಾತು ನೀಡಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಗೋವಿಂದರಾಜು ಹಿಂಬಾಲಕರು ಹಣ ಪಡೆದಿರುವ ವಿಷಯಕ್ಕೆ ಸಾಕ್ಷಿ ತೋರಿಸುವಂತೆ ಬಾಬು ರವರ ಕಾರಿಗೆ ಮುತ್ತಿಗೆ ಹಾಕಿರುವುದು ಎಲ್ಲ ವಿಷಯಕ್ಕೂ ಪುಷ್ಟಿ ನೀಡುವಂತಿದೆ.
ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜು ರವರು ಯಾವುದೇ ಸ್ಪಷ್ಟನೆ ನೀಡದೆ ಸುಮ್ಮನೆ ಇರುವುದು ಸಹ ಕಾರ್ಯಕರ್ತರಲ್ಲೂ ಸಹ ಗೊಂದಲ ಉಂಟಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.