ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಖ್ಯಾತಿಗಳಿಸಿರುವ ಹಾಗೂ ಯಶಸ್ವಿಪೂರ್ಣವಾಗಿ ಸಹಕಾರಿ ಕ್ಷೇತ್ರವನ್ನು ನಿಭಾಯಿಸುತ್ತಿರುವ ಸಹಕಾರಿ ಬ್ಯಾಂಕ್‌ವೊಂದನ್ನು ಅತ್ಯುನ್ನತ ಶ್ರೇಣಿಗೇರಿಸಿರುವ ಕೀರ್ತಿ ಹತ್ತು ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟಿಹಾಕಿ ಸಾವಿರಾರು ಜನರಿಗೆ ತಮ್ಮ ಉದ್ದಿಮೆಗಳಲ್ಲಿ ಕೆಲಸ ನೀಡಿರುವುದಲ್ಲದೇ ಹತ್ತಾರು ಸಹಕಾರ ಕ್ಷೇತ್ರಗಳನ್ನು ಕಟ್ಟಿ ಬೆಳೆಸಿರುವ ಹಿರಿಯ ವ್ಯಕ್ತಿಯೂ ಆಗಿರುವ ಎನ್.ಆರ್.ಜಗದೀಶ್ ಅವರಿಗೆ ತಮ್ಮ ಮುಪ್ಪಿನ ಸಮಯದಲ್ಲಿ ಬಂಧನದ ಭೀತಿ ಎದುರುಗಾಗಿದೆ.
ಇದು ತುಮಕೂರಿನ ಜನತೆಗೆ ಅಚ್ಚರಿಯ ಸಂಗತಿ ಹಾಗೂ ಆಶ್ಚರ್ಯಕರ ಸಂಗತಿಯೂ ಹೌದು, ಏಕೆಂದರೆ ತುಮಕೂರಿನ ಅತ್ಯಂತ ಪ್ರಖ್ಯಾತಿ ಹೊಂದಿರುವ ಟಿ.ಜಿ.ಎಂ.ಸಿ. ಬ್ಯಾಂಕ್‌ನ್ನು ಸ್ಥಾಪಿಸಿ ಅಂದಿನಿಂದ ಇಂದಿನವರೆವಿಗೂ ಸ್ಥಾಪಕ ಅಧ್ಯಕ್ಷರು ಹಾಗೂ ಕಾರ್ಯನಿರತ ಅಧ್ಯಕ್ಷರೂ ಆಗಿರುವ ಎನ್.ಆರ್.ಜಗದೀಶ್ ಅವರಿಗೆ ಬಂಧನದ ಭೀತಿ ಎದುರಾಗಿದೆ.
ತುಮಕೂರಿನ ಟಿ.ಜಿ.ಎಂ.ಸಿ. ಬ್ಯಾಂಕ್ ಅತ್ಯಂತ ಚಿಕ್ಕ ಪ್ರಮಾಣದಲ್ಲಿ ಹಾಗೂ ಧಾನ್ಯ ವರ್ಧಕರು ಹಾಗೂ ಕೆಲವು ಸಮಾಜದ ಗಣ್ಯರುಗಳ ಪರಿಶ್ರಮದಿಂದ ಕಟ್ಟಿ ಬೆಳೆಸಿರುವ ಈ ಬ್ಯಾಂಕ್ ನಲ್ಲಿ ಕೆಲವು ಅವ್ಯವಹಾರಗಳು, ಎನ್.ಪಿ.ಎ. ಸಾಲ, 2020-21ನೇ ಸಾಲಿನಲ್ಲಿ ಆರ್.ಬಿ.ಐ. ಅವರು ಬ್ಯಾಂಕ್‌ನ ಲೆಕ್ಕಗಳನ್ನು ಪರಿಶೀಲಿಸಿ ನೀಡಿರುತ್ತಾರೆ, ಆದರೆ ಅದನ್ನು ತಿರುಚಿ ಯಥಾವತ್ತನ್ನು ತಮ್ಮ ಷೇರುದಾರರಿಗೆ ಹಾಗೂ ಬ್ಯಾಂಕಿನ ಸದಸ್ಯರಿಗೆ, ಗ್ರಾಹಕರಿಗೆ ನೀಡದೇ ಮೋಸ ಮತ್ತು ವಂಚನೆ ಮಾಡಿರುವುದಾಗಿ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಇದಲ್ಲದೆ ಟಿಜಿಎಂಸಿ ಬ್ಯಾಂಕ್‌ನಿಂದ ಕೆಲವು ಚಾರಿಟಬಲ್ ಟ್ರಸ್ಟ್ ಗಳಿಗೆ ಮತ್ತು ಕೆಲವು ಖಾತೆಗಳಿಗೆ ಅಕ್ರಮ ಹಣ ವರ್ಗಾವಣೆಯಾಗಿದ್ದು, ಅದರ ಕುರಿತು ಸತ್ಯಾಸತ್ಯೆಯು ಹೊರ ಬರಬೇಕೆಂದು ದಾವೆಯೊಂದು ತುಮಕೂರಿನ ನ್ಯಾಯಾಲಯದಲ್ಲಿ ಇತ್ತೀಚೆಗೆ ದಾಖಲಾಗಿದ್ದು ಅದರ ಸಂಬಂಧವಾಗಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿರುತ್ತದೆ, ಅದರ ಸಂಬಂಧವಾಗಿ ಎನ್.ಆರ್.ಜಗದೀಶ್ ಮತ್ತು ಇತರೆ 04 ಜನರ ಮೇಲೆ ಎಫ್.ಐ.ಆರ್. ದಾಖಲಾಗಿದ್ದು, ಎಲ್ಲರೂ ನಿರೀಕ್ಷಿಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು ಆದರೆ ಎಲ್ಲರ ಜಾಮೀನು ನ್ಯಾಯಾಲಯ ವಜಾ ಮಾಡಿದ್ದು, ಈ ಪ್ರಕರಣದ ಕುರಿತಾಗಿ ಬಂಧನದ ಭೀತಿಯಲ್ಲಿದ್ದಾರೆಂದು ಹೇಳಲಾಗಿದೆ.
ಅತ್ಯಂತ ಪ್ರಭಾವಿ, ಹಿರಿಯ ಮುತ್ಸದಿ, ಸಹಕಾರಿ ಧುರೀಣ, ಪ್ರಖ್ಯಾತ ಉದ್ಯಮಿ ಎನ್.ಆರ್.ಜಗದೀಶ್ ರವರು ಬಂಧನಕ್ಕೊಳಗಾಗುವರೇ ಎಂಬುದು ಕಾದು ನೋಡಬೇಕಾಗಿದೆ.