ಕೊರಟಗೆರೆ ತಾಲ್ಲೂಕಿನಲ್ಲಿ ಸವಿತಾ ಸಮಾಜದ ಬಂಧುಗಳಿಗೆ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆ ವತಿಯಿಂದ ಸಲೂನ್ ಕಿಟ್ ವಿತರಿಸಲಾಯಿತು. ಸಲೂನ್ ಮುಂದೆ ನೆಡಲಾದ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಯುವ ಪಡೆ ಜಿಲ್ಲಾಧ್ಯಕ್ಷರಾದ ಕಟ್ ವೆಲ್ ರಂಗನಾಥ್ ಮಾತನಾಡಿ ಇದು ಸರ್ಕಾರದ ವತಿಯಿಂದ ನೀಡಿದ ಸಲೂನ್ ಕಿಟ್ ಅಲ್ಲಾ, ಯುವ ಪಡೆ ಸದಸ್ಯರ ಪಂಡ್ ನಿಂದ ನೀಡಿದ ಸಲೂನ್ ಕಿಟ್ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಯುವ ಪಡೆ ವಿಸ್ತಾರವಾಗಿದ್ದು ಕೆಲವೇ ದಿನಗಳಲ್ಲಿನ ಹೋಬಳಿ ಮಟ್ಟದಲ್ಲಿ ಸಂಘಟನೆಯಾಗಲಿದೆ. ನಮ್ಮ ಉದ್ದೇಶ ಸವಿತಾ ಸಮಾಜದ ಯುವಕರನ್ನ ಸಮೂದಾಯದ ಸಂಘಟನೆಗೆ ಸೇರ್ಪಡೆ ಮಾಡುವುದೆ ನಮ್ಮ ಉದ್ದೇಶ, ಸಮೂದಾಯದ ನಿಂದನೆ ಹಾಗೂ ನಮ್ಮ ಬಂಧುಗಳಿಗೆ ಸಮಸ್ಯೆಗಳಾದಾಗ ಕಾನೂನಾತ್ಮಕ ಹೋರಾಟಗಳು ಮಾಡಿ ನ್ಯಾಯ ಕೊಡಿಸುವುದೆ ನಮ್ಮ ಉದ್ದೇಶ, ಮುಂದಿನ ಪೀಳಿಗೆಗೆ ನಮ್ಮ ಮಕ್ಕಳನ್ನ ಹೆಚ್ಚಿನ ಶಿಕ್ಷಣ ಕೊಡಿಸುವಲ್ಲಿ ನಾವುಗಳು ಯಶಸ್ವಿಯಾಗಬೇಕು. ಸವಿತಾ ಸಮಾಜ ರಾಜಕೀಯವಾಗಿ ಮೀಸಲಾತಿ ಕೇಳುವುದಕ್ಕಿಂತ ಮೊದಲು ತಾವುಗಳು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಬೇಕು.
ಈಗಾಗಲೇ ಮೀಸಲಾತಿ ವಿಚಾರವಾಗಿ ಸವಿತಾ ಸಮಾಜ ಧ್ವನಿ ಎತ್ತಿದೆ ಎಂದರು. ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಗಂಗಾರಾಜು ಮಾತಾನಾಡಿ ಸವಿತಾ ಸಮಾಜದ ಯುವಕರು ಸಂಘಟನೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ ಎಂದರು, ಕೊರಟಗೆರೆ ಸವಿತಾ ಸಮಾಜದ ಯುವ ಘಟಕದ ನೂತನ ಅಧ್ಯಕ್ಷರಾಗಿ ಬಿ.ಜೆ ನಟರಾಜು ರವರನ್ನ ಆಯ್ಕೆ ಮಾಡಲಾಹಿತು. ಕೊರಟಗೆರೆ ಪ್ರತಿನಿಧಿ ಉಮೇಶ್ ಮಾತನಾಡಿ ಸಮಾಜದ ಕಟ್ಟ ಕಡೇಯ ವ್ಯಕ್ತಿಯನ್ನ ಗುರುತಿಸಿ ಯುವ ಪಡೆ ಯುವಕರು ಸಲೂನ್ ಕಿಟ್ ನೀಡುತ್ತಿರುವುದು ಶ್ಲಾಘನೀಯ, ಸವಿತಾ ಸಮಾಜ ಸಂಘಟನೆಗೆ ಯುವಕರಿಂದ ಇನ್ನು ಬಲಿಷ್ಟವಾಗಲಿ ಎಂದರು. ಈ ಸಂಧರ್ಭದಲ್ಲಿ ಜಿಲ್ಲಾ ಯುವ ಪಡೆ ಉಪಾಧ್ಯಕ್ಷರಾದ ಕೊರಟಗೆರೆ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾದ ಉಮೇಶ್, ಜಿಲ್ಲಾ ನಿರ್ದೇಶಕರಾದ ಉಮೇಶ್, ಮಧುಗಿರಿ ಗಂಗರಾಜು, ಪಾವಗಡ ಸವಿತಾ ಸಮಾಜ ಯುವ ಪಡೆ ಅಧ್ಯಕ್ಷರಾದ ನೀಲಕಂಠ, ಗುಬ್ಬಿ ಸವಿತಾ ಸಮಾಜದ ಯುವ ಪಡೆ ಅಧ್ಯಕ್ಷರಾದ ರಮೇಶ್ ಎನ್, ತುಮಕೂರು ಜಿಲ್ಲಾ ಸವಿತಾ ಸಮಾಜದ ಯುವ ಪಡೆ ಪಧಾದಿಕಾರಿಗಳು, ನಿರ್ದೇಶಕರುಗಳು ಹಾಗು ಸವಿತಾ ಸಮಾಜದ ಬಂಧುಗಳು ಹಾಜರಿದ್ದರು.