ತಹಸೀಲ್ದಾರ್ ಕಾಲು ಹಿಡಿದು ನ್ಯಯಕ್ಕಾಗಿ ಅಂಗಲಾಚಿದ ಮಹಿಳೆಯರು. ವಿಷ ಕುಡಿದ ಯುವಕ ಕುಟುಂಬಸ್ಥರಿಂದ ಜಿಲ್ಲಾ ಆಸ್ಪತ್ರೆ ಎದುರು ಪ್ರತಿಭಟನೆ .
ತುಮಕೂರು_ಸೋಮವಾರ ತುಮಕೂರು ತಾಲೂಕಿನ ರಾಮಗೊಂಡನಹಳ್ಳಿಯ ಯುವಕ ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳಕ್ಕೆ ವಿಷ ಕುಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವಕನ ಕುಟುಂಬಸ್ಥರು ತುಮಕೂರು ಜಿಲ್ಲಾ ಆಸ್ಪತ್ರೆ ಎದುರು ದಿಡೀರ್ ಪ್ರತಿಭಟನೆ ನಡೆಸಿದರು.
ಇದೆ ವೇಳೆ ಪ್ರತಿಭಟನೆ ಮಾಡಿದ ಗ್ರಾಮಸ್ಥರು ಹಾಗೂ ಕುಟುಂಬದವರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ಸಂಪೂರ್ಣವಾಗಿ ಗ್ರಾಮಸ್ಥರು ನೊಂದಿದ್ದು ಕೂಡಲೇ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅನುಭವದಲ್ಲಿರುವ ಜಮೀನನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಿರುಕುಳಕ್ಕೆ ಮುಂದಾದರೆ ಕುಟುಂಬಸ್ಥರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಸಹ ಹಾಕಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ತುಮಕೂರು ತಹಸಿಲ್ದಾರ್ ಸಿದ್ದೇಶ್ ರವರಿಗೆ ಮನವಿ ಮಾಡಿದ ಕುಟುಂಬಸ್ಥರು ಅಧಿಕಾರಿಗಳ ಕಿರುಕುಳದಿಂದ ನಮ್ಮ ಮಗ ವಿಷ ಕುಡಿತಿದ್ದು ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಮನವಿ ಆಲಿಸುತ್ತಿದ್ದ ವೇಳೆ ನೊಂದ ಕುಟುಂಬದ ಮಹಿಳೆಯರು ತಾಸಿಲ್ದಾರ್ ಸಿದ್ದೇಶ್ ರವರ ಕಾಲಿಗೆ ಎರಗಿ ನ್ಯಾಯ ದೊರಕಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಗೂ ಸಹ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
ಇದೇ ಸಂದರ್ಭದಲ್ಲಿ ತಾಸಿಲ್ದಾರ್ ಸಿದ್ದೇಶ್ ರವರು ಮಾಧ್ಯಮದವರೊಂದಿಗೆ ಮಾತನಾಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದ್ದಾರೆ
ಅದೇನೇ ಇರಲಿ ಅಧಿಕಾರಿಗಳ ನಿರ್ಲಕ್ಷವೋ…. ಮಂಡುತನವೋ ದಲಿತ ಕುಟುಂಬದ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಕುಟುಂಬಕ್ಕೆ ನ್ಯಾಯ ಸಿಕ್ಕಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
ವರದಿ _ಮಾರುತಿ ಪ್ರಸಾದ್ ತುಮಕೂರು