ತುಮಕೂರು ನಗರಕ್ಕೆ ಗೋವಿಂದರಾಜು ಫಿಕ್ಸ್‌

2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಇಂದು ರಾಜ್ಯ ಜೆಡಿಎಸ್‌ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ರವರು ಒಟ್ಟು 93ಜನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

 

 

 

 

 

ಇದರ ಬೆನ್ನಲ್ಲೇ ತುಮಕೂರು ನಗರ ಅಭ್ಯರ್ಥಿಯ ಘೋಷಣೆಯಲ್ಲಿ ಗೊಂದಲವನ್ನು ನಿವಾರಣೆ ಮಾಡುವಲ್ಲಿ ಪಕ್ಷದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರು ಗೋವಿಂದರಾಜುರವರನ್ನು ಆಯ್ಕೆ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

 

 

 

ಇನ್ನು ತುಮಕೂರು ಜಿಲ್ಲೆಯ ಪಟ್ಟಿಯು ಈ ರೀತಿಯಾಗಿದೆ.

ತುಮಕೂರು ನಗರ : ಎನ್.ಗೋವಿಂದರಾಜು

ತುಮಕೂರು ಗ್ರಾಮಾಂತರ : ಡಿ.ಸಿ.ಗೌರಿಶಂಕರ್‌

ಕೊರಟಗೆರೆ : ಪಿ.ಆರ್.ಸುಧಾಕರ್‌ ಲಾಲ್‌

ಮಧುಗಿರಿ : ಎಂ.ವಿ.ವೀರಭದ್ರಯ್ಯ

ಕುಣಿಗಲ್‌ : ಡಿ.ನಾಗರಾಜಯ್ಯ

ಚಿಕ್ಕನಾಯಕನಹಳ್ಳಿ : ಸಿ.ಬಿ.ಸುರೇಶ್‌ ಬಾಬು

ಗುಬ್ಬಿ : ನಾಗರಾಜು

ತುರುವೇಕೆರೆ : ಎಂ.ಟಿ.ಕೃಷ್ಣಪ್ಪ

ಪಾವಗಡ : ಕೆ.ಎಂ.ತಿಮ್ಮರಾಯಪ್ಪ

 

 

 

ಇನ್ನುಳಿದಂತೆ ಕಳೆದ ಕೆಲ ತಿಂಗಳುಗಳ ಹಿಂದೆ ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ತಾನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು, ಇದರಿಂದ ತುಮಕೂರು ನಗರದ ಅಭ್ಯರ್ಥಿ ವಿಚಾರದಲ್ಲಿ ಕೆಲ ಗೊಂದಲಗಳು ಜನರಲ್ಲಿ ಮೂಡಿತ್ತು, ಆದರೆ ಇಂದು ರಾಜ್ಯಾಧ್ಯಕ್ಷರು ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್‌ ಮಾಡಿರುವ ಬೆನ್ನಲ್ಲೇ ಗೋವಿಂದರಾಜುರವರು ನಿರಾಳರಾಗಿದ್ದಾರೆನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!