ಬೆಂಗಳೂರು: ಪ್ರಸಿದ್ಧ ಚಿನ್ನದ ವ್ಯಾಪಾರಿ ಅಟ್ಟಿಕಾ ಗೋಲ್ಡ್ ಮಾಲೀಕರಾದ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಆರೋಪದಡಿ ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಯು ಕೆಲವು ಸುದ್ಧಿ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.
ಅಟ್ಟಿಕಾ ಬಾಬುರವರು ಎರಡನೇ ಮದುವೆಯಾಗಿ ಮೋಸ ಮಾಡಿರುವುದಾಗಿ ಮಹಿಳೆಯೊಬ್ಬರು ಆಂಧ್ರಪ್ರದೇಶದಲ್ಲಿ ಅಟ್ಟಿಕಾ ಬಾಬು ವಿರುದ್ಧ ದೂರು ದಾಖಲಿಸಿದ್ದರು. ಹಾಗಾಗಿ ಬೆಂಗಳೂರಿಗೆ ಆಗಮಿಸಿದ ಆಂಧ್ರಪ್ರದೇಶ ಪೊಲೀಸರು ಬಾಬುರನ್ನು ಬಂಧಿಸಿದ್ದಾರೆ.
ಹಾಗಾದರೇ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ಎರಡನೇ ಮದುವೆಯಾಗಿದ್ದಾರೆಯೇ? ಎಂಬ ಸಂಶಯ ಇದೀಗ ಜನರಲ್ಲಿ ಮೂಡಿದೆ.
ಶೇಕ್ ಮೀನಾಜ್ ಎಂಬಾಕೆಯನ್ನು ಮದುವೆಯಾಗಿದ್ದ ಅಟ್ಟಿಕಾ ಬಾಬು, ಡಿಸೆಂಬರ್ 12 ರಂದು ಯಲ್ಲೂರಿಗೆ ಹೋಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಶೇಕ್ ಮೀನಾಜ್ ಆರೋಪಿಸಿದ್ದಾರೆ.
ಈ ಆರೋಪದಡಿಯಲ್ಲಿಯೇ ಅಟ್ಟಿಕಾ ಬಾಬು ರವರನ್ನು ಆಂಧ್ರ ಮೂಲದ ಪೊಲೀಸರು ಬಂದಿಸಿದ್ದಾರೆನ್ನಲಾಗಿದೆ.