ಜನರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದು ತಪ್ಪೇ : ಜೆಡಿಎಸ್‌ ಗೋವಿಂದರಾಜು

ತುಮಕೂರು : ಬಿಜೆಪಿ ಪಕ್ಷದವರು ದತ್ತಜಯಂತಿಗೆ ತುಮಕೂರಿನಿಂದ 50-60 ಬಸ್ ಕಾರ್ಯಕರ್ತರನ್ನು ಕಳಿಸುತ್ತಾರೆ ಆದರೆ ನಾನು ನಮ್ಮ ಕಾರ್ಯಕರ್ತರನ್ನು ಕೇವಲ 05 – 06 ಬಸ್‌ ಗಳಲ್ಲಿ  ದೇವಸ್ತಾನಕ್ಕೆ ಕಳಿಸಿದರೆ ತಪ್ಪೇನು ಎಂದು ಜೆಡಿಎಸ್ ತುಮಕೂರು ಅಭ್ಯರ್ಥಿ ಎನ್ ಗೋವಿಂದರಾಜು ಪ್ರಶ್ನಿಸಿದರು.

 

ಆಣೆ ಪ್ರಮಾಣ ಸಂಬಂಧ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಇತ್ತೀಚೆಗೆ ಮಹಾನಗರ ಪಾಲಿಕೆಯ ಆವರಣದಲ್ಲಿ ಮಾತನಾಡಿದ ಅವರು ನಾನು ಎಲ್ಲಿಯೂ ಆಣೆ ಪ್ರಮಾಣ ಮಾಡಿಸುತ್ತಿಲ್ಲ, ಕಾರ್ಯಕರ್ತರು ದೇವಸ್ತಾನಕ್ಕೆ ಹೋಗಬೇಕೆಂದರು ಬಸ್ ಮಾಡಿ ಕಳಿಸಿದ್ದೇನೆ, ಬಿಜೆಪಿ ಪಕ್ಷದವರು ದತ್ತ ಜಯಂತಿಗೆ ತುಮಕೂರಿನಿಂದ 50-60 ಬಸ್ ಗಳಲ್ಲಿ ಕಾರ್ಯಕರ್ತರನ್ನು ಕಳಿಸಿದ್ದಾರೆ, ಬಿಜೆಪಿ ಪಕ್ಷದವರು ಈ ರೀತಿ ಮಾಡಿದರೆ ನಮ್ಮ ಪಕ್ಷದ ಕಾರ್ಯಕರ್ತರು ಸುಮ್ಮನಿರುತ್ತಾರಾ, ಅವರೂ ದೇವಸ್ಥಾನಕ್ಕೆ ಹೋಗಬೇಕೆಂದರು ಕಳಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

 

ಜೊತೆಗೆ ಗೋವಿಂದರಾಜುರವರು ಹೆತ್ತೇನಹಳ್ಳಿಯಲ್ಲಿ ಮಾರಮ್ಮ ತಾಯಿಯ ಅಪ್ಪಟ ಭಕ್ತರಾಗಿರುವ ಕಾರಣಕ್ಕೆ ಅವರು ಪ್ರತಿ ಭಾರಿಯೂ ತಮ್ಮ ಜನರನ್ನು ಅಲ್ಲಿಗೆ ಕಳುಹಿಸಿಕೊಡುವ ವಾಡಿಕೆ ಇದೆ ಎಂದು ಹೇಳಿದರು.

 

 

ಗೋವಿಂದರಾಜುರವರ ಬೆಂಬಲಿಗರು ತಾವು ಗೋವಾ ನೋಡಿಲ್ಲವೆಂದು ಹೇಳಿದ ತಕ್ಷಣ ಅವರನ್ನು ಸಹ ಗೋವಾಗೆ ಕಳುಹಿಸಿಕೊಟ್ಟಿದ್ದಾರೆಂಬ ಸುದ್ಧಿಯೂ ಕುವೆಂಪು ನಗರದ ಕೆಲವು ಗಲ್ಲಿಗಳಲ್ಲಿ ಪಿಸು ಪಿಸು ಮಾತುಗಳು ನಡೆಯುತ್ತಿವೆ, ಇವೆಲ್ಲದರೊಂದಿಗೆ ಹೊಸ ವರ್ಷಕ್ಕೆ ಇನ್ನಷ್ಟು ಉಡುಗೊರೆ ಮತ್ತು ಆಕರ್ಷಕ ದಿನದರ್ಶಿಕೆಗಳನ್ನು ತಮ್ಮ ಬೆಂಬಲಿಗರಿಗೆ ಮತ್ತು ಜನರಿಗೆ ತರಿಸುತ್ತಿದ್ದಾರೆ, ಆದರೆ ಅವು ಕೈ ಸೇರುವುದು ಮಾತ್ರ ಆಯ್ದ ಜನರಿಗೆ ಮಾತ್ರ ಎಂಬುದು ಕಟು ಸತ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!