ತುಮಕೂರು ಸವಿತಾ ಸಮಾಜದ ಬಂಧುಗಳು ಸೇರಿ ಮೀಸಲಾತಿಗಾಗಿ ಧ್ವನಿ ಎತ್ತಿದ್ದಾರೆ. ನಗರದ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಕಾಲ್ನಡಿಗೆಯಲ್ಲಿ ಬಂಧು ಜಿಲ್ಲಾಧಿಕಾರಿಯವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ನೀಡಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜೇಶ್ ಮಾತನಾಡಿ ಸ್ವಾಭಿಮಾನ ಸಮೂದಾಯ ನಮ್ಮದು, ನಮ್ಮ ಸಮದಾಯಕ್ಕೆ ನ್ಯಾಯ ಒದಗಿಸುತ್ತಿರಿ ಎಂಬ ನಂಬಿಕೆ ಇದೆ. ಮೀಸಲಾತಿ ಹಾಗೂ ಸವಿತಾ ಸಮಾಜದ ನಿಷೇಧಿತ ಪದ ಬಳಕೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮವಾಗಬೇಕು ಶತಶತಮಾನದಿಂದಲೂ ನಾವು ಸಮಾಜದಲ್ಲಿ ನೋವನ್ನು ಅನುಭವಿಸುತ್ತಿದ್ದೆವೆ ಎಂದರು. ಜಿಲ್ಲಾ ಸವಿತಾ ಸಮಾಜ ಯುವ ಪಡೆ ಜಿಲ್ಲಾಧ್ಯಕ್ಷರು ಹಾಗೂ ನಗರಾಧ್ಯಕ್ಷರಾದ ಕಟ್ ವೆಲ್ ರಂಗನಾಥ್ ಮಾತನಾಡಿ ನಮ್ಮ ಸಮಾಜ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಾವು ಅತ್ಯಂತ ಹಿಂದುಳಿದ ತಳ ಸಮುದಾಯದವರಾಗಿದ್ದೆವೆ, ನಮ್ಮ ಸವಿತಾ ಸಮಾಜವು ಶ್ರಮಿಕ ವರ್ಗ, ಕಾಯಕ ಸಮಾಜ ವೃತ್ತಿಯನ್ನು ನಂಬಿ ಜೀವನ ಮಾಡುತ್ತಿದ್ದೆವೆ. ದೇವರು ಮಾನವನನ್ನಾಗಿ ಸೃಷ್ಟಿಸುತ್ತಾನೆ ಆದರೆ ನಾವು ಅದೇ ಮಾನವನನ್ನು ಸುಂದರ ಮಾನವನನ್ನಾಗಿ ಸೌಂದರ್ಯದಿಂದ ಕಾಣುವಂತೆ ಮಾಡುತ್ತೆವೆ.
ನಮ್ಮ ವೃತ್ತಿಯಲ್ಲಿ ಜಾತಿ ಧರ್ಮ ಬೇಧಭಾವ ಮಾಡದೆ ನಮ್ಮ ಸೇವೆಯನ್ನು ಮುಕ್ತವಾಗಿ ನೀಡುತ್ತಿದ್ದೆವೆ. ಆದರೂ ನಮಗೆ ಮೀಸಲಾತಿ ಸಿಕ್ಕಿಲ್ಲ. ಘನ ರಾಜ್ಯಸರ್ಕಾರ ನಮ್ಮ ಸವಿತಾ ಸಮಾಜವನ್ನ 2 ಎ ಕ್ಯಾಟಗರಿಯಿಂದ ಪ್ರತ್ಯೇಕಿಸಿ ಪರಿಶಿಷ್ಟ ಜಾತಿ ( ಎಸ್.ಸಿ ) ಸೇರಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿ ಬಸವರಾಜ ಬೊಮ್ಮಯಿ ಸಾಹೇಬರಲ್ಲಿ ಮನವಿ ಮಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರತಿನಿಧಿಯಾದ ನಾರಾಯಣ್, ಪ್ರಧಾನ ಕಾರ್ಯದರ್ಶಿಯಾದ ಪಾರ್ಥಸಾರಥಿ, ಖಜಾಂಚಿಗಳಾದ ಮೇಲಾಕಪ್ಪ, ವಿಭಾಗಿಯ ಕಾರ್ಯದರ್ಶಿಯಾದ ಹರೀಶ್, ನಗರ ಪ್ರತಿನಿಧಿಯಾದ ಸುರೇಶ್, ಹನುಮಂತಪುರ ಸವಿತಾ ಕ್ಷೇಮಾಭಿವೃದ್ದಿಯ ಅಧ್ಯಕ್ಷರಾದ ವರದರಾಜು, ಸುಬ್ಬಣ್ಣ, ಸಮಾಜದ ಮುಖಂಡರಾದ ಮುತ್ತುರಾಜು, ನಾಗರಾಜು, ಶ್ರೀನಿವಾಸ್, ಶಿವಕುಮಾರ್, ಮಂಜುನಾಥ್, ಹಾಗು ಪಧಾಧಿಕಾರಿಗಳು ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಜಿಲ್ಲಾ ಯುವ ಪಡೆ ಪಧಾದಿಕಾರಿಗಳು ಹಾಗು ಸಮೂದಾಯದ ಬಂಧುಗಳು ಹಾಜರಿದ್ದರು.