ಟಿಕೇಟ್‌ ಗಿಟ್ಟಿಸಿಕೊಳ್ಳಲು ಭಾರೀ ಪ್ರಚಾರಕ್ಕೆ ಮುಂದಾದರಾ ಎನ್.ಗೋವಿಂದರಾಜು

 

 

ತುಮಕೂರು : ತುಮಕೂರು ನಗರದ ಜೆಡಿಎಸ್‌ ಪಕ್ಷದಿಂದ ಶಾಸಕ ಸ್ಥಾನದ ಆಕಾಂಕ್ಷಿಯಾಗಿರುವ ಎನ್.ಗೋವಿಂದರಾಜುರವರು ಕಳೆದ ನಾಲ್ಕುವರೆ ವರ್ಷಗಳಿಂದ ಸುದ್ಧಿಯಲ್ಲಿರದೇ ಇನ್ನೇನು ಚುನಾವಣೆ ಸಮೀಪವಾಗುತ್ತಿದ್ದಂತೆ ತಮ್ಮ ಕಸರತ್ತುನ್ನು ಮುಂದುವರೆಸಿದ್ದಾರೆಂದು ಜನರು ಅಲ್ಲಲ್ಲಿ ಮಾತನಾಡುತ್ತಿರುವುದು ಕೇಳಿ ಬರುತ್ತಿದೆ, ಇದರ ಹಿನ್ನಲೆಯಲ್ಲಿಯೇ ಅವರು ಭಾರೀ ಸುದ್ಧಿಗೆ ಗ್ರಾಸವಾಗಿದ್ದು ತಮ್ಮ ಟಿಕೇಟ್‌ ಭದ್ರಪಡಿಸಿಕೊಳ್ಳಲೆಂದೇ ಅವರು ಈ ರೀತಿಯಾಗಿ ಗುರತಿಸಿಕೊಳ್ಳುತ್ತಿದ್ದಾರೆಂಬುದು ಜನ ಸಾಮಾನ್ಯರ ಅಭಿಪ್ರಾಯ.

 

 

ಈಗ್ಗೆ ಕಳೆದ 2 ವರ್ಷಗಳ ಹಿಂದೆ ಕರೋನಾ ಸಂಭವಿಸಿ ಲಾಕ್‌ ಡೌನ್‌ ಆದ ಸಂದರ್ಭದಲ್ಲಿಯೂ ಸಹ ಯಾರ ಕೈಗೆ ಸಿಗದ ಲಾಕ್‌ ಡೌನ್‌ ಮುಗಿಯುವ ವೇಳೆ ಅಲ್ಲಲ್ಲಿ ಫುಡ್‌ ಕಿಟ್‌ ಗಳನ್ನು ಹಂಚಿ ಸುಮ್ಮನಾದರು ವಿನಃ ನಮ್ಮಗಳ ಸಹಾಯಕ್ಕೆ ನಿಲ್ಲದ ವ್ಯಕ್ತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್‌ ನ ಪಂಚರತ್ನ ಯಾತ್ರೆಯಲ್ಲಿ ತಮ್ಮ ಪೋಸ್ಟರ್‌ ಗಳನ್ನು ಅಳವಡಿಸಿ ತಮ್ಮ ಚುನಾವಣಾ ಪ್ರಚಾರವನ್ನೂ ಸಹ ಮಾಡುತ್ತಿದ್ದಾರೆಂಬುದು ಸ್ಥಳೀಯ ಆಕ್ರೋಷವಾಗಿದೆ.

 

 

 

 

ಇನ್ನು ಇತ್ತೀಚೆಗೆ ಬಹುಕೋಟಿಗಳ ಸರದಾರ, ಖ್ಯಾತ ಉದ್ಯಮಿ, ಪ್ರಭಾವಿಯೂ ಆಗಿರುವ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ಸಹ ತುಮಕೂರು ನಗರದ ಜೆಡಿಎಸ್‌ ಪಕ್ಷದ ಶಾಸಕ ಸ್ಥಾನದ ಆಕಾಂಕ್ಷಿ ತನಗೆ ಗ್ರಾಮಾಂತರ ಶಾಸಕರ ಬೆಂಬಲದೊಂದಿಗೆ, ಕುಮಾರಣ್ಣನ ಬೆಂಬಲವೂ ಅಪರಾವಾಗಿದ್ದು ಶತಾಃ ಸಿದ್ಧ ತಾನೇ ತುಮಕೂರು ನಗರದಿಂದ ನಿಲ್ಲುವುದಾಗಿಯೂ, ತಾನೂ ಸಹ ತನ್ನ ಬೆಂಬಲಿಗರೊಂದಿಗೆ ತುಮಕೂರಿನ ಸಮಗ್ರ ಮಾಹಿತಿಯನ್ನು ಶೇಖರಣೆ ಮಾಡುತ್ತಿರುವುದಾಗಿ ತನಗೆ ತುಮಕೂರು ಬಗ್ಗೆ ಅಷ್ಟೋಂದು ತಿಳಿಯದಿದ್ದರೂ ಸಹ ಮೂರು ತಿಂಗಳೊಳಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ತನಗಿದೆಂದು ಮಾದ್ಯಮದವರೊಂದಿಗೆ ಕಳೆದ ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ.

 

 

 

 

ಈ ರೀತಿಯಾಗಿ ಹೇಳಿರುವುದಕ್ಕೇ ಏನೋ ಗೋವಿಂದರಾಜುರವರು ಡಿಸೆಂಬರ್‌ ೧ ರಂದು ತುಮಕೂರು ನಗರಕ್ಕೆ ಆಗಮಿಸುತ್ತಿರುವ ಪಂಚರತ್ನ ಯಾತ್ರೆಯನ್ನು ಅವರ ಕಛೇರಿ ಮುಂಭಾಗದಲ್ಲಿ ಬರದಂತೆ ಪಕ್ಕದ ಎಸ್.ಐ.ಟಿ ಮುಖ್ಯರಸ್ತೆಯ ಮಾರ್ಗವಾಗಿ ಸಂಚಾರವನ್ನು ಮಾಡಿ, ಬಿ.ಹೆಚ್.‌ ರಸ್ತೆಯ ಮುಖ್ಯರಸ್ತೆಯನ್ನು ಬಿಟ್ಟು ಪಕ್ಕದ ಚಿಕ್ಕರಸ್ತೆಯಲ್ಲಿ ತಮ್ಮ ಯಾತ್ರೆಯ ನಕ್ಷಯೆನ್ನು ನೀಡಿದ್ದಾರೆಂಬುದು ಕೆಲವರ ಆಕ್ರೋಷವಾಗಿದೆ.

 

 

 

 

ಇನ್ನುಳಿದಂತೆ ತಾನು ಈ ಯಾತ್ರೆಯನ್ನು ಯಶಸ್ವಿಗೊಳಿಸಿ, ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ಇಲ್ಲಿ ಯಾವ ಮಾತ್ರಕ್ಕೂ ಕಾಣ ಸಿಗದಂತೆ ಮಾಡಿ, ತಾನೇ ಟಿಕೇಟ್‌ ಪಡೆಯಬೇಕೆಂಬ ಹುನ್ನಾರವನ್ನೂ ಮಾಡಿ, ಕೆಲವು ಪೋಸ್ಟರ್‌ ಗಳಲ್ಲಿಯೂ ಜಿಲ್ಲೆಯ ಯಾವ ನಾಯಕರ ಭಾವಚಿತ್ರವನ್ನು ಹಾಕಿಸಿದೇ ತಮ್ಮ ಭಾವಚಿತ್ರಗಳನ್ನು ಮಾತ್ರ ಹಾಕಿಸಿದ್ದಾರೆಂದು ಜೆಡಿಎಸ್‌ ಕಾರ್ಯಕರ್ತರ ಆಕ್ರೋಷಕ್ಕೂ ಸಹ ಗುರಿಯಾಗಿದ್ದಾರೆನ್ನಲಾಗಿದೆ.

 

 

ಇನ್ನುಳಿದಂತೆ ಕೆಲ ಆಯ್ದವರಿಗೆ ಮಾತ್ರವೇ ಮನ್ನಣೆಯನ್ನು ಹಾಕಿ ಪ್ರಚಾರವನ್ನೂ ಸಹ ಗಿಟ್ಟಿಸಿಕೊಳ್ಳುತ್ತಿದ್ದಾರೆಂಬ ಸುದ್ಧಿಯೂ ಇತ್ತೀಚೆಗೆ ಹರಿದಾಡುತ್ತಿದ್ದು, ತಮ್ಮ ಕಾರ್ಯಗಳಲ್ಲಿ ಆಯ್ದ ಕಾರ್ಯಕರ್ತರನ್ನು ಮಾತ್ರ ಆಹ್ವಾನಿಸಿ, ಅವರನಷ್ಟೇ ತಮ್ಮ ಕಾರ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆಂಬ ಪ್ರಬಲ ಆರೋಪವೂ ಇತ್ತೀಚೆಗೆ ಸುದ್ಧಿಯಾಗಿದ್ದು, ಗೋವಿಂದರಾಜು ರವರು ಎಲ್ಲವನ್ನೂ ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ, ಕೆಲವರಿಗಷ್ಟೇ ಮನ್ನಣೇ ನೀಡಿದರೆ ಸಾಲದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿರುವುದು ನಾಯಕತ್ವದ ಮೂಲ ಗುಣ ಅಲ್ಲವೇ?

 

 

ಯಾವುದು ಏನೇ ಆಗಲಿ ಗೋವಿಂದರಾಜು ರವರು ಕಳೆದ ಎರಡು ಭಾರಿ ಚುನಾವಣೆಗಳಲ್ಲಿ ಟಿಕೇಟ್‌ ಗಿಟ್ಟಿಸಿಕೊಳ್ಳಲು ಇಷ್ಟೋಂದು ಹರಸಾಹಸ ಮಾಡಿರಲಿಲ್ಲ, ಆದರೆ ಈ ಭಾರಿ ತುಂಭಾ ಶ್ರಮವಹಿಸಿ ಟಿಕೇಟ್‌ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ, ಅವರಿಗೆ ಶುಭವಾಗಲಿ  ಮುಂದೊಂದು ದಿನ ತಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆಂಬ ನಿರೀಕ್ಷೆಯಿಂದ  ಜೆಡಿಎಸ್‌ ನ ಕೆಲ ಕಾರ್ಯಕರ್ತರಿದ್ದಾರೆ.

Leave a Reply

Your email address will not be published. Required fields are marked *

error: Content is protected !!