ತುಮಕೂರು_ಮಾಜಿ ಶಾಸಕ ಸುರೇಶ್ ಗೌಡ ಒಬ್ಬ ಅರೆ ಹುಚ್ಚ ಇನ್ನು ಗೌರಿಶಂಕರ್ ರವರ ವಿರುದ್ಧ ಮಾಡಿರುವ ಹೇಳಿಕೆಯ ಸಂದರ್ಭದಲ್ಲಿ ತನ್ನ ಹೆಸರನ್ನು ಯಾಕೆ ಬಳಸಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಆದರೆ ಅವರ ಹೇಳಿಕೆಗಳನ್ನು ನೋಡಿದರೆ ಮಾಜಿ ಶಾಸಕರು ಹುಚ್ಚನಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಇನ್ನು ನಮ್ಮ ಹಿನ್ನೆಲೆಯಲ್ಲಿ ಯಾವುದೇ ಇತರಹದ ಆರೋಪಗಳು ಕೇಳಿಬಂದಿಲ್ಲ ಆದರೆ ಸುರೇಶ್ ಗೌಡ ರವರನ್ನು ನೋಡಿದರೆ ಅರೆ ಹುಚ್ಚನಂತೆ ಕಾಣುತ್ತಿದ್ದಾರೆ ಇನ್ನು ಅವರ ಆರೋಪಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಹಾಗೂ ಮಾನ ನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.
ಇನ್ನು ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಬರುವುದು ಖಚಿತ ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಿರಿಯ ನಾಯಕ ಕುಮಾರಸ್ವಾಮಿ ರವರು ಸ್ಪಷ್ಟಪಡಿಸಿದ್ದಾರೆ.
ಸುರೇಶ ಗೌಡ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಹಿಂಬಾಲಕರು ಸಹ ಬೆಂಗಳೂರಿನ ಆಯುಕ್ತರಿಗೆ ದೂರು ಸಲ್ಲಿಸಲಿದ್ದಾರೆ ಇನ್ನು ಸುರೇಶ್ ಗೌಡರವರು ಆರೋಪ ಮಾಡಲು ಏನು ವಿಚಾರ ಇಲ್ಲದ ಹಿನ್ನೆಲೆಯಲ್ಲಿ ಈ ತರಹದ ಆರೋಪವನ್ನು ಮಾಡಿದ್ದಾರೆ.
ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಸಿ ಗೌರಿಶಂಕರ್ ರವರು ಪ್ರಭಾವಿ ನಾಯಕರು ಅವರನ್ನು ಸೋಲಿಸುವ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಕ್ತ ತನಿಖೆ ನಡೆಯಲಿ ನಂತರ ಸತ್ಯ ಸತ್ಯತೆ ಹೊರಬರಬೇಕಾಗಿದ್ದು ಉನ್ನತ ಮಟ್ಟದ ತನಿಖೆ ಅವಶ್ಯಕತೆ ಇದ್ದು ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಲಿ ಎಂದರು.
ತಾನೊಬ್ಬ ಕಂಪನಿಯ ಮಾಲೀಕ ಹಾಗಾಗಿ ಸಮಾಜದಲ್ಲಿ ನನ್ನದೇ ಆದ ಗೌರವವಿದ್ದು ಇಂತಹ ಆರೋಪ ಬಂದಾಗ ಸುಮ್ಮನೆ ಕೂರಲು ಸಾಧ್ಯವಿಲ್ಲ ಇದಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರು ಸಹ ಕಾನೂನು ಹೋರಾಟ ಮಾಡಲಿದ್ದಾರೆ ಆ ಮೂಲಕ ಮಾನ ನಷ್ಟ ಮುಖದಮೆಯನ್ನು ಸಹ ಹೂಡುತ್ತೇನೆ ಎಂದಿದ್ದಾರೆ.