ತುಮಕೂರು ಕರಡು ಮತದಾರರ ಪಟ್ಟಿಯಲ್ಲಿ ಲೋಪ ತನಿಖೆಗೆ ಮಾಜಿ ಶಾಸಕ _ರಫೀಕ್ ಅಹ್ಮದ್ ಒತ್ತಾಯ
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 21,990 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು ಕೂಲಂಕುಷ ತನಿಖೆ ನಡೆಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳನ್ನು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಒತ್ತಾಯಿಸಿದರು.
ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು , ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 2008 ರಲ್ಲಿ ಒಟ್ಟು 1,99,842 ಮತದಾರರಿದ್ದರು, 2013 ರಲ್ಲಿ ಒಟ್ಟು ಮತದಾರರು 2,10,412 2018 de 2,59,542 2013 de ಒಟ್ಟು ಮತದಾರರು 2,10,412 2018 ರಲ್ಲಿ ಒಟ್ಟು ಮತದಾರರು 2,59,542, ಆದರೆ 2023 ರಲ್ಲಿ ಒಟ್ಟು ಮತದಾರರ ಸಂಖ್ಯೆ 2,40,165 ಮತದಾರರು ಎಂದು ಕರಡು ಪಟ್ಟಿಯಲ್ಲಿ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದರು.
2019 ರಿಂದ 2022 ರವರೆಗೂ ಸೇರ್ಪಗೊಂಡ ಮತದಾರರ ಸಂಖ್ಯೆ 9277, 2019 ರಿಂದ 2022 ರವರೆಗೂ ಬಿಟ್ಟಿರುವ ಮತದಾರರ ಸಂಖ್ಯೆ ಕೇವಲ 6661 ಮತದಾರರಾಗಿರುತ್ತಾರೆ ಎಂದ ಅವರು, ಆಗಿರುವ ಲೋಪ-ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಅಂದರೆ ಹಿಂದಿನ ಅವಧಿಯಲ್ಲಿ ಸುಮಾರು 21,990 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇoದು ಅಷ್ಟು ದೊಡ್ಡ ಪ್ರಮಾಣದ ಮತದಾರರನ್ನು ಕೈಬಿಡಲು ಕಾರಣವೇನು? ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಆಧಾರ್ ಲಿಂಕ್ ಮಾಡಿಸದವರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆಯೇ? ಸರಿಯಾದ ರೀತಿಯಲ್ಲಿ ಮಾಡಿಲ್ಲದಿರುವ ಬಗ್ಗೆ ಕಾರಣವೇನು….? 18 ವರ್ಷ ತುಂಬಿದ ಯುವಕ ಯುವತಿಯರಿಗೆ ಮತದಾನದ ಅರಿವು ಮೂಡಿಸಿ ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಅಸಮರ್ಪಕವಾಗಿ ನಡೆದಿರುತ್ತದೆ ಎಂದು ಆರೋಪಿಸಿದರು.
ಇನ್ನು ಮತದಾರರ ಪಟ್ಟಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಮತದಾರರನ್ನು ಕೈ ಬಿಟ್ಟು ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಗರದ ಮತದಾರರು ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದು ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ಮತದಾರರನ್ನು ಕೈಬಿಟ್ಟಿರುವುದರ ಹಿಂದೆ ಯಾರ ಕೈವಾಡ ಇದೆ ಎಂದು ಸ್ಪಷ್ಟವಾಗುತ್ತಿಲ್ಲ ಆದರೆ ಮತದಾರ ಪಟ್ಟಿಯಲ್ಲಿನ ಲೋಪ ದೋಷಗಳು ಮುಂದೆ ಚುನಾವಣಾ ಸಮಯದಲ್ಲಿ ಸಾಕಷ್ಟು ತೊಂದರೆ ತಂದುಡುವ ಆತಂಕ ಎಡೆ ಮಾಡಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸ್ಪಷ್ಟಪಡಿಸುವುದರ ಜೊತೆಗೆ ಲೋಪ ದೋಷವನ್ನು ಸರಿ ಮಾಡಬೇಕು ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಹಗರಣ ಮಾಡಿ ರುವ ಸರ್ಕಾರ 40% ಕಮಿಷನ್ ತೆಗೆದುಕೊಳ್ಳುವಲ್ಲಿ ನಿರತರಾಗಿತ್ತು ಈ ವಿಚಾರ ಈಗ ರಾಜ್ಯದ ಜನತೆಗೆ ಗೊತ್ತಾಗಿದ್ದು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ನಮ್ಮನ್ನ ತಿರಸ್ಕಾರ ಮಾಡಲಿದ್ದಾರೆ ಎನ್ನುವುದನ್ನು ಅರಿತ ಬಿಜೆಪಿ ಪಕ್ಷ ಈ ರೀತಿಯ ಹುನ್ನಾರರವನ್ನು ನಡೆಸುತ್ತಿದೆ ಎಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿರುವ ದಲಿತರು ,ಅಲ್ಪಸಂಖ್ಯಾತರ ಮತಗಳನ್ನ ಕಸಿಯುವ ಹುನ್ನಾರಕ್ಕೆ ಬಿಜೆಪಿ ಪಕ್ಷ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರಭಾವತಿ ಸುಧೀಶ್ವರ, ಪಾಲಿಕೆ ವಿರೋಧ ಪಕ್ಷದ ನಾಯಕ ಕುಮಾರ್,ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಶಕೀಲ್ ಅಹಮದ್, ರೂಪ , ಕಾಂಗ್ರೆಸ್ ಮುಖಂಡರಾದ ಹಫೀಸ್ ಅಹಮದ್ ಸೇರಿದಂತೆ ಹಲವು ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.