ಗಡಿಭಾಗದ ಕ್ಷೌರಿಕ ಬಂಧುಗಳಿಗೆ ಸಲೂನ್‌ ಕಿಟ್‌ ವಿತರಿಸಿದ ಸವಿತಾ ಸಮಾಜದ ಯುವ ಪಡೆ

ತುಮಕೂರು ಜಿಲ್ಲಾ ಸವಿತಾ ಸಮಾಜ ಹಾಗೂ ಪಾವಗಡ ಸವಿತಾ ಸಮಾಜ ಸಹಯೋಗದೊಂದಿಗೆ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆ ವತಿಯಿಂದ ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಪಾವಗಡ ಸವಿತಾ ಸಮಾಜದ ಸಲೂನ್ ಗಳಿಗೆ ಉಚಿತ ಸಲೂನ್ ಕಿಟ್ ನೀಡಲಾಯಿತು.

ಪಾವಗಡ ಸವಿತಾ ಸಮಾಜ ಯುವ ಪಡೆ ಅಧ್ಯಕ್ಷರಾಗಿ ಲಿಂಗದಹಳ್ಳಿ ನೀಲಕಂಠ ರವರನ್ನ ಆಯ್ಕೆ ಮಾಡಲಾಯಿತು.ಸಭೆ ಉದ್ದೇಶೀಸಿ ಮಾತನಾಡಿದ ಕಟ್ ವೆಲ್ ರಂಗನಾಥ್ ರವರು ಯುವಕರು ಸಮುದಾಯ ಸಂಘಟನೆಗೆ ಮುಂದೆ ಬರಬೇಕು, ಹೋಬಳಿ ಮಟ್ಟದಲ್ಲಿ ಸಂಘಟನೆ ಆಗಬೇಕು. ವೃತ್ತಿಯನ್ನ ಆಧುನಿಕತೆಗೆ ಕೊಂಡೋಯ್ಯಬೇಕು ಇಂದು ಮಾತನಾಡಿದರು.

 

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದ ಪಾರ್ಥಸಾರಥಿಯವರು, ಪಾವಗಡ ಅಧ್ಯಕ್ಷರಾದ ರಾಮು,ಪ್ರತಿನಿದಿಯಾದ ದೇವರಾಜು, ಯುವ ಪಡೆ ಜಿಲ್ಲಾ ಪ್ರಮುಖರಾದ ಕಟ್ ವೆಲ್ ರಂಗನಾಥ್,ಲಿಂಗದಹಳ್ಳಿ ಸವಿತಾ ಸಮಾಜದ ಅಧ್ಯಕ್ಷರಾದ ರವಿ.ಎನ್ ನೀಡಗಲ್ಲು ಸವಿತಾ ಸಮಾಜ ಅಧ್ಯಕ್ಷರಾದ ಕಣಮರಾಜು, ಅಣ್ಣಪ್ಪ,ನಾಗರಾಜು,ಮೋಹನ್, ಅರಸೀಕೆರೆ ನಾರಾಯಣಪ್ಪ,ಬಡವನಹಳ್ಳಿ ಪ್ರದೀಪ್,ಮುತ್ಯುಂಜಯ,ಶ್ರೀಕೃಷ್ಣ,ಗಣೇಶ,ಪಾವಗಡ ಶೇಖರ್,ವಿನೋದ್,ಗುರು ಮೂರ್ತಿ,ಬಾಬು, ತುಮಕೂರು ಜಿಲ್ಲೆಯ ಯುವ ಪಡೆಯ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!