ತುಮಕೂರು :- ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೆಡ್ಡಿಸ್ ಸಮುದಾಯದ ಸರ್ವಣೀಯರು ಐಡಿಹಳ್ಳಿ ಹೋ, ಮಧುಗಿರಿ ತಾಲ್ಲೂಕಿನ ದಲಿತ ಯುವಕ ಪುರುಷೋತ್ತಮ್ ಪ್ರಸಾದ ಎಂಬ ಯುವಕನಿಗೆ ದಿನಾಂಕ: 29-09-2022 ರಂದು ಬೆಳ್ಳಿಗೆ ಸುಮಾರು 12-30 ರಿಂದ 100ರ ಸಮಯದಲ್ಲಿ ಬಾಳೆತೋಟದಲ್ಲಿ ಎರಡು ಗೊನೆ ಬಾಳೆಗೊನೆಯನ್ನು ಕಡಿದಿದ್ದಾನೆಂದು ತೋಟದ ಮಾಲೀಕರು ಆತನ್ನು ಸ್ಥಳದಲ್ಲಿಯೇ ಇಡಿದುಐದು ಜನರು ಸೇರಿ ಇಗ್ಗ ಮುಗ್ಗ ತಳಿಸಿರುತ್ತಾರೆ ಇನ್ನೂ ಪೊಲೀಸ್ ಠಾಣೆಗೆ ಕರೆದ್ಯೂದು ಒಂದು ರಾತ್ರಿ ಅಲ್ಲೇ ಇರಿಸಿಕೊಂಡಿದ್ದಾರೆ ಎಂದು ಮೃತ ಪುರುಷೋತ್ತಮ್ ಪ್ರಸಾದ ತಂದೆ ಬಸ್ತಾಪ್ಪ ತಿಳಿಸಿದರು.
ಕಳೆದ 15ದಿನಗಳಿಂದ ಒಡೆದ ಏಟು ತಿಂದ ನನ್ನ ಮಗ ಸ್ಥಳೀಯ ಆಸ್ಪತ್ರೆ ಗಳ ಚಿಕಿತ್ಸೆ ಫಲಕಾರಿಯಾಗದೇ ಇಂದು ಜಿಲ್ಲಾಸ್ಪತ್ರೆಯಲ್ಲಿ ಮೃತನಾಗಿದ್ದು ನಮಗೆ ಸರ್ವಣೀಯರಿಂದ ಬಹಳ ಅನ್ಯಾಯವಾಗಿದೆ ಎಂದು ಬಸ್ತಾಪ್ಪ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮಗನ ಶವ ಕಂಡು ಅತ್ತು ಗೋಳಾಡಿ ಉರುಳಾಡಿ ತಮ್ಮ ಆಕ್ರಂದನ ಹೊರ ಹಾಕಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ದಂಡು ಸಂಘಟನೆಯ ಜಿಲ್ಲಾಧ್ಯಕ್ಷ ಎನ್ ಕುಮಾರ್ ಘಟನೆ ಖಂಡಿಸಿ ಮಾತನಾಡಿ ರೆಡ್ಡಿ ಸ್ ಸಮುದಾಯದ ಸವರ್ಣೀಯರು ದಲಿತ ಯುವಕ ಮೇಲೆ ಬಾಳೆಕಾಯಿ ಕದ್ದಿದ್ದಾನೆ ಎಂಬ ನೆಪವೊಡ್ಡಿ ದೊಣ್ಣೆ ಇತರೆ ಉಪಕರಣ ಬಳಸಿ ಮನಸೋಇಚ್ಚೆ ಥಳಿಸಿ ಥಸಿರುವ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದ ಕಾರಣಕ್ಕಾಗಿ ಯುವಕ ನೋವು ನುಂಗಿಕೊಂಡು ಕಡೆಗೆ ಪೋಷಕರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಯವರು ಸವರ್ಣೀಯರ ಮೇಲೆ ಪ್ರಕರಣವನ್ನು ದಾಖಲಿಸಿ ಮೃತಪಟ್ಟಿರುವ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಅಲ್ಲದೆ ಪೊಲೀಸ್ ಇಲಾಖೆ ಅಧಿಕಾರಿಗಳು ಅವರ ಮೇಲೆ ಜಾತಿ ನಿಂದನೆ ಪ್ರಕರಣವನ್ನು ದಾಖಲು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಂಬೇಡ್ಕರ್ ಸೇನೆ ರಾಜ್ಯ ಕಾರ್ಯದರ್ಶಿ ಎಸ್ಸಿ ಕೆಂಪರಾಜ್ ಅವರು ಮಾತನಾಡಿ ದಲಿತ ಯುವಕನ ಮೇಲೆ ಕದ್ದ ಎಂಬ ಕಾರಣದ ನೆಪವೊಡ್ಡಿ ಯುವಕನನ್ನು ಮಾರಣಾಂತಿಕವಾಗಿ ಥಳಿಸಿರುವ ಮೃತಪಟ್ಟ ಕಾರಣದಿಂದಾಗಿ ಮೃತಪಟ್ಟಿದ್ದು ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನ ಹರಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಹೋದರೆ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆಂಪರಾಜ್ ಅವರು ಎಚ್ಚರಿಕೆ ನೀಡಿದರು.
ಇನ್ನು ಇನ್ನೂ ಕೆಲ ದಲಿತ ಸಂಘಟನೆಗಳ ಮುಖಂಡರು ಶವಾಗಾರದ ಬಳಿ ಭೇಟಿನೀಡಿ ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪ್ರಕರಣದ ವಿರುದ್ಧವಾಗಿ ತಲೆಯ ಪೊಲೀಸ್ ಠಾಣೆ ಸೇರಿದಂತೆ ಸ್ಪಿಎಸಿ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಪ್ರಕರಣದ ವಿವರವನ್ನು ತಿಳಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮನವಿ ನೀಡಿರುತ್ತಾರೆ.