ಭಾರತ ಜೋಡೋ ಎಂದರೆ ಆಡಳಿತ ಪಕ್ಷವನ್ನು ಬಾಯಿಗೆ ಬಂದಾಗೆ ಬಯ್ಯುವುದು ಅಷ್ಟೇ : ಸಂಸದ ಜಿ.ಎಸ್ ಬಸವರಾಜು

ತುಮಕೂರು_ಭಾರತ ಜೋಡೋ ಯಾತ್ರೆ ಎಂದರೆ ಆಡಳಿತ ಪಕ್ಷವನ್ನು ಬಾಯಿಗೆ ಬಂದ ಹಾಗೆ ಬೈಯುವುದು ಅಷ್ಟೇ ಯಾತ್ರೆಯ ಉದ್ದೇಶ ಎಂದು ತುಮಕೂರು ಸಂಸದರಾದ ಜಿ.ಎಸ್ ಬಸವರಾಜು ಭಾರತ್ ಜೋಡೋ ಯಾತ್ರೆ ವಿರುದ್ಧ ಕಿಡಿ ಕಾರಿದ್ದಾರೆ.

ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರಿಗೂ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆ ಎಂದರೆ ಮುಂದಿನ ಪೀಳಿಗೆಗೆ ಅಥವಾ ಮುಂದಿನ ಅವಧಿಗೆ ಏನಾದರೂ ಹೊಸದಾಗಿ ಕೊಡುವುದಾದರೆ ತಿಳಿಸಬೇಕು ಅದು ಬಿಟ್ಟು ಆಡಳಿತ ಪಕ್ಷವನ್ನ ಬಯ್ದುಕೊಂಡು ಹೋಗುವುದು ಅಷ್ಟೇ, ಭಾರತ ಜೋಡೋ ಯಾತ್ರೆಯ ಉದ್ದೇಶ ಎಂದು ತಿಳಿಸಿದರು.

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಅಧಿಕಾರಕ್ಕೆ ಬಂದಾಗಿನಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಭಾರತ ಜೋಡೋ ಯಾತ್ರೆ ಸಂಪೂರ್ಣ ಪ್ಲಾಫ್ ಆಗಿದೆ ಭಾರತ ಜೋಡೋ ಯಾತ್ರೆ ಮೂಲ ಉದ್ದೇಶದಂತೆ ಯಾತ್ರೆ ನಡೆಯುತ್ತಿಲ್ಲ ಇನ್ನು ಅವರ ನಿರೀಕ್ಷೆಯಂತೆ ಜನರು ಸಹ ಭಾರತ ಜೋಡ ಯಾತ್ರೆಗೆ ಭಾಗವಹಿಸುತ್ತಿಲ್ಲ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಮಸಾಲ್ ದೋಸೆ ,ಕಡ್ಲೆಪುರಿ ,ಹಣ್ಣು ತಿನ್ನುವ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಲೇವಡಿ ಮಾಡಿದರು.

 

ಇನ್ನು ಆಡಳಿತ ರೂಢ ಪಕ್ಷದ ವಿರುದ್ಧ ಆರೋಪ ಮಾಡುವುದಾದನ್ನು ಬಿಟ್ಟು ಆರೋಪಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬೇಕು ಮಾತೆತ್ತಿದರೆ ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಹೋರಿಸುತ್ತಾರೆ ಹಾಗಾದರೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪರ್ಸೆಂಟ್ ಇತ್ತು ಎನ್ನುವುದನ್ನು ಕಾಂಗ್ರೆಸ್ ಪಕ್ಷ ತಿಳಿಸಬೇಕು ಎಂದ ಅವರು ಎತ್ತಿನಹೊಳೆ ಯೋಜನೆಯ 8,500 ಕೋಟಿ ಗಳಿಂದ ಅವರು 13,500 ಕೋಟಿ ಗೆ ಏರಿಕೆ ಮಾಡಿದರು ಆ ದುಡ್ಡು ಎಲ್ಲಿಗೆ ಹೋಯಿತು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ್ದಾರೆ.

 

ಭಾರತ ಜೋಡೋ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ನಯಾ ಪೈಸೆ ನಷ್ಟವಿಲ್ಲ ಇನ್ನು ಭಾರತ ಜೋಡೋ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ಹೆಚ್ಚಿನದಾಗಿ 20 ಪರ್ಸೆಂಟ್ ನಷ್ಟು ಅನುಕೂಲವಾಗಲಿದೆ ಎಂದರು

 

ಮುಂಬರುವ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಆದರೆ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!