2022 ನೇ ಸಾಲಿನ ತುಮಕೂರು ದಸರಾ ಅತ್ಯಂತ ವೈಭವದಿಂದ ನಡೆಯುತ್ತಿದ್ದು ಇದಕ್ಕೆ ಕಾರಣ ತುಮಕೂರು ಜಿಲ್ಲೆಯ ಪ್ರಭಾವಿ ಉದ್ಯಮಿ ಹಾಗೂ ಬಿಜೆಪಿಯ ಮುಖಂಡ ಶ್ರೀಯುತ ಎಸ್.ಪಿ. ಚಿದಾನಂದ್ ರವರ ನೇತೃತ್ವದಲ್ಲಿ ಈ ಬಾರಿಯ ದಸರಾ ಆಯೋಜಿಸಿದ್ದು ಇದಕ್ಕೆ ಮೂಲ ಕಾರಣವಾಗಿದೆ.
ಈ ಬಾರಿಯ ದಸರಾದ ವಿಶೇಷ ತುಮಕೂರಿನ ಎಲ್ಲಾ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದೀಪ ಅಲಂಕಾರಗಳಿಂದ ಸಿಂಗಾರಗೊಂಡಿದ್ದು ಜೊತೆಗೆ ವಿಜಯದಶಮಿ ಮೆರವಣಿಗೆಯು ಅಹೋರಾತ್ರಿ ನಡೆಯಲಿದ್ದು ಇದರೊಂದಿಗೆ ತುಮಕೂರಿನ ಹೆಸರಾಂತ ಸಿದ್ಧಿವಿನಾಯಕ ಪೆಂಡಲ್ ನ ಗಣೇಶ ವಿಸರ್ಜನಾ ಮಹೋತ್ಸವವು ವಿಜಯದಶಮಿಯಂದೆ ನಡೆಯುತ್ತಿದೆ
ಇಷ್ಟೆಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಒಂದು ಅಭೂತಪೂರ್ವ ಶಕ್ತಿಯೇ ಬೇಕಾಗಿದೆ ಆ ಶಕ್ತಿಯೇ ಸ್ಪೂರ್ತಿ ಡೆವೆಲಪರ್ಸ್ ಮಾಲೀಕರಾದ ಚಿದಾನಂದ್ ರವರ ಸಾರಥ್ಯವೇ ಇದಕ್ಕೆ ಸ್ಪೂರ್ತಿ.
ಬಹು ಕೋಟಿಗಳ ಒಡೆಯನಾಗಿರುವ ಚಿದಾನಂದ್ ರವರು ತಮಗೆ ಸಮಯದ ಕೊರತೆ ಇದ್ದರೂ ಸಹ ಇಂತಹ ಧಾರ್ಮಿಕ ಕಾರ್ಯಕ್ರಮಕ್ಕೆ ಕೈಜೋಡಿಸಿರುವುದು ತುಂಬಾ ಸಂತೋಷದ ವಿಷಯ ಅದರೊಂದಿಗೆ ಹಿಂದುಗಳ ಭಾವೈಕ್ಯತೆಗೂ ಸಹ ಇವರು ಕೊಂಚ ಒತ್ತುಕೊಟ್ಟು ಅವರ ಸಂಗಡಿಗರು ಇಲ್ಲವೇ ದಸರಾ ಸಮಿತಿಯ ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಂಡು ಕೆಲಸ ಮಾಡಿಸಿದ್ದರೆ ಇಂತಹ ತಪ್ಪುಗಳು ಆಗುತ್ತಿರಲಿಲ್ಲ ಅಂತಹದೊಂದು ತಪ್ಪು ಈ ತುಮಕೂರು ದಸರಾ ಸಮಿತಿ ಉತ್ಸವದಲ್ಲಿ ಆಗಿದೆ. ಅದೇನಪ್ಪ ಅಂದರೆ ಹಿಂದುಗಳ ಭಾವೈಕ್ಯತೆಯ ಸಂಕೇತವಾದ 🕉️ ಚಿನ್ನೆಯ ಬಾವುಟಗಳನ್ನು ತುಮಕೂರು ಜೂನಿಯರ್ ಕಾಲೇಜ್ ಮೈದಾನದಲ್ಲಿ ಅಳವಡಿಸಲಾಗಿದ್ದು ಅವುಗಳಲ್ಲಿ ಒಂದು ಬಾವುಟವು ಉಲ್ಟಾ ಹಾರುತಿದೆ ಇದು ಹಿಂದುಗಳ ಬಾವೈಕ್ಯತೆಗೆ ಧಕ್ಕೆ ಉಂಟಾಗುತ್ತಿದೆ.
ಬಹುಕೋಟಿ ಖರ್ಚು ಮಾಡಿ ದಸರಾ ಸಮಿತಿ ಆಚರಿಸುವುದಲ್ಲ. ಸಾಂಪ್ರದಾಯ ಬದ್ಧವಾಗಿ ಆಚರಿಸುವಂತಹ ದಸರಾ ನಮ್ಮ ದಸರವಾಗಿರಬೇಕು ಎಷ್ಟು ಕೋಟಿ ಖರ್ಚು ಮಾಡಿದರೆ ಭಾವೈಕ್ಯತೆ ಸಿಗುವುದಿಲ್ಲ . ನಮ್ಮ ಹಿಂದುಗಳಿಗೆ ಸಂಪ್ರದಾಯಕ್ಕೆ ಹೆಚ್ಚು ಮಹತ್ವವಾಗಿದೆ.
ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದ್ದ ವ್ಯಕ್ತಿಗಳೇ ಈ ರೀತಿಯಾಗಿ ತಪ್ಪು ಮಾಡಿದರೆ ಬೇರೊಬ್ಬರನ್ನು ಬೆಟ್ಟು ಮಾಡಿ ತೋರಿಸುವ
ಅವಶ್ಯಕತೆ ಬರುವುದಿಲ್ಲ.
ಇನ್ಮುಂದಾದರು ಇಂತಹ ತಪ್ಪುಗಳನ್ನು ಆಗದಂತೆ ಎಚ್ಚರವಹಿಸಿ ಸರಳವಾದರೂ ಅಚ್ಚುಕಟ್ಟಾಗಿ ಸಾಂಪ್ರದಾಯ ಬದ್ಧವಾಗಿ ದಸರವನ್ನು ಆಚರಿಸಬೇಕು ಎಂಬುದೆ ನಮ್ಮ ಆಶಯ.