ತುಮಕೂರು : ಕಾರ್ಮಿಕ ಇಲಾಖೆ ಕಛೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು
ಲಂಚ ಪಡೆಯುತ್ತಿದ್ದ ಕಾರ್ಮಿಕ ನಿರೀಕ್ಷಕರಾದ ಕಿರಣ್ ಕುಮಾರ್ರವರನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿ.ವೈ.ಎಸ್.ಪಿ. ರವೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಾರ್ಮಿಕ ಇಲಾಖೆಯ ಕಛೇರಿಯಲ್ಲಿ
ಇತ್ತೀಚೆಗೆ ಭ್ರಷ್ಠಾಚಾರ ಬಹುವಾಗಿ ನಡೆಯುತ್ತಿದ್ದ ಹಿನ್ನಲೆ ಸಾಕಷ್ಟು ದೂರುಗಳು ಬಂದಿದ್ದರ ಪ್ರಯುಕ್ತ
ಇಂದು ಓರ್ವ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಈ ದಾಳಿಯನ್ನು ನಡೆಸಿ, ಅಧಿಕಾರಿಯನ್ನು
ಬಂಧಿಸಲು ಯಶಸ್ವಿಯಾಗಿದ್ದಾರೆ.