ತುಮಕೂರು_ಅಭಿವೃದ್ಧಿ ವಿಚಾರದಲ್ಲಿ ಗೌರಿಶಂಕರ್ ಗೆ ಹೆಸರು ಬರುತ್ತೆ ಎಂದು ಮಾಜಿ ಶಾಸಕ ಸುರೇಶ್ ಗೌಡ ರವರಿಗೆ ಭಯ ಇದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದ್ದಾರೆ.
ತುಮಕೂರು ತಾಲೂಕಿನ ಸಾಸಲು ಗ್ರಾಮದಲ್ಲಿ ಸುಮಾರು 13 ಕೋಟಿ ವೆಚ್ಚದಲ್ಲಿ 9.5 km ರಸ್ತೆಯ ಡಾಂಬರಿಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಆಗಿದ್ದಾಗ ಈ ಭಾಗಕ್ಕೆ ರಸ್ತೆಯ ಅವಶ್ಯಕತೆ ಇದೆ ಎಂದು ನಾವು ಸರ್ಕಾರಕ್ಕೆ ಪತ್ರ ಬರೆದಿದ್ದವು ಆದರೆ ಬದಲಾದ ಸನ್ನಿವೇಶದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ರವರು ಈ ಭಾಗಕ್ಕೆ ನೂತನ ರಸ್ತೆಯ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಪತ್ರ ಬರೆದು ರಸ್ತೆ ಕಾಮಗಾರಿಯನ್ನ ತಡೆದಿದ್ದರು ಇನ್ನು ಅಭಿವೃದ್ಧಿ ವಿಚಾರದಲ್ಲಿ ಮಾತನಾಡುವ ಯಾವ ನೈತಿಕತೆಯು ಮಾಜಿ ಶಾಸಕರಿಗೆ ಇಲ್ಲ ಎಂದು ಶಾಸಕ ಡಿ.ಸಿ ಗೌರಿಶಂಕರ್ ಅವರು ಸುರೇಶ್ ಗೌಡ ರವರ ವಿರುದ್ಧ ಕಿಡಿಕಾರಿದರು.
ಮಾಜಿ ಶಾಸಕರು 10 ವರ್ಷ ಎಂಎಲ್ಎ ಆಗಿದ್ದಾಗ ಅಂದು ಕಾಂಗ್ರೆಸ್ ಸರ್ಕಾರ ಇತ್ತು ಆದರೆ ಅಂದು ಯಾವ ನಾಯಕರು ಇಂತಹ ಅಭಿವೃದ್ಧಿ ಕೆಲಸವನ್ನ ತಡೆಯುವ ಕೆಲಸ ಮಾಡಿಲ್ಲ ಆದರೆ ಸುರೇಶ್ ಗೌಡ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಇನ್ನು ಈ ಭಾಗದಲ್ಲಿ ರಸ್ತೆಗಳೆಲ್ಲ ಹೈಟೆಕ್ ರಸ್ತೆಗಳಾಗಿವೆ. ಈ ಭಾಗಕ್ಕೆ ರಸ್ತೆಗಳ ಅವಶ್ಯಕತೆ ಇಲ್ಲ ಎಂದು ಮಾಜಿ ಶಾಸಕರೇ ಪತ್ರ ಬರೆದು ತಡೆಹಿಡಿದದ್ದರು ನಂತರ ಅಧಿಕಾರಿಗಳು ಮೂಲಕ ತನಿಖೆ ನಡೆಸಿದ್ದು ಈ ಭಾಗಕ್ಕೆ ರಸ್ತೆಯ ಅವಶ್ಯಕತೆ ಎಂದು ಅಧಿಕಾರಿಗಳು ವರದಿ ನೀಡಿದ ನಂತರ ಪುನಃ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದರು. ಅದರಂತೆ ಇಂದು ರಸ್ತೆ ಆಗುತ್ತಿದೆ ಎಂದರು.
ಇನ್ನು ಮಾಜಿ ಶಾಸಕರು ವೇದಿಕೆಯಲ್ಲಿ ಬಟ್ಟಿ ಮೈಕ್ ಮೂಲಕ ಬಿಟ್ಟೆ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎಂದ ಅವರು ನವಂಬರ್ ವೇಳೆಗೆ ಇದಕ್ಕೆಲ್ಲಾ ಕಡಿವಾಣ ಬೀಳಲಿದೆ ಇನ್ನು ನವೆಂಬರ್ ನಂತರ ನಮ್ಮ ರಾಜಕೀಯ ಶೈಲಿಯು ಸಹ ಬದಲಾಗುತ್ತೆ ಎಂದರು.
ಇನ್ನು ಬಿಜೆಪಿ ಸರ್ಕಾರ ಕಮಿಷನ್ ಮೂಲಕ ನಡೆಯುತ್ತಿದೆ ಯಾವ ಕೆಲಸವು ಉಚಿತವಾಗಿ ಆಗುತ್ತಿಲ್ಲ ಎಲ್ಲವೂ ಪರ್ಸೆಂಟೇಜ್ ಮೂಲಕ ನಡೆಯುತ್ತಿದೆ ಯಾವ ಕೆಲಸವೂ ಹಣ ಇಲ್ಲದೆ ಆಗುವುದಿಲ್ಲ ಇನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಂದರು ಸಹ ನಾವು ಕೂಡ ಹಣ ಕೊಟ್ಟೆ ತಂದು ಕೆಲಸ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸಂಬಂಧಿಸಿದಂತೆ ಮುಂದಿನ ದಿನದಲ್ಲಿ ದಾಖಲೆ ಸಹಿತ ಮಾಹಿತಿ ನೀಡುತ್ತೇನೆ ಎಂದರು