ತುಮಕೂರು ತಾಲ್ಲೂಕು ಕಸಬಾ ಹೋಬಳಿ ಗ್ರಾಮದ ಸರ್ವೆ ನಂ:೮ ಬಾವಿಕಟ್ಟೆ, ಹಿಂಬಾಗ ಚಿಕ್ಕಪೇಟೆಯ ಸ್ಮಶಾನದ ಪಕ್ಕದಲ್ಲಿರುವ ಮತ್ತು ಸರ್ವೆ ನಂಬರ್ 91, 92, ರೈಲ್ವೆ ಸ್ಟೇಷನ್ ಪಕ್ಕ ಇರುವ ತುಮಕೂರು ನಗರದ ಎನ್.ಆರ್.ಕಾಲೋನಿ ಕುಳುವಾಡಿ ದಲಿತ ಜನಾಂಗಕ್ಕೆ ಸೇರಿದ ಜಮೀನಾಗಿರುತ್ತದೆ. ತುಮಕೂರು ನಗರದ ಹೃದಯ ಭಾಗದಲ್ಲಿರುವ ಎರಡೂ ಸರ್ವೇ ನಂಬರ್ ಜಮೀನು ತುಂಬಾ ಬೆಲೆ ಬಾಳುವ ಜಮೀನುಗಳಾಗಿದ್ದು ಸದರಿ ಜಮೀನುಗಳ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ.
ಈ ಜಮೀನುಗಳ ಬಗ್ಗೆ ನ್ಯಾಯಾಲಯದಲ್ಲಿ ಸುಮಾರು 60-70 ವರ್ಷಗಳಿಂದ ಮೂಲಪುರುಷ ಹನುಮನ ಮಕ್ಕಳ ಮೂಲ ಪುರುಷ ವಂಶಸ್ಥರ ವಂಶವೃಕ್ಷವನ್ನು ತಹಸೀಲ್ದಾರ್ರವರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಹಿಂದೆ ತುಮಕೂರು ತಾಲ್ಲೂಕು ತಹಸೀಲ್ದಾರ್ರಾಗಿದ್ದ ಯೋಗಾನಂದ್.ಆರ್ ರವರು ಮೂಲಪುರುಷ ವಂಶವೃಕ್ಷವನ್ನು ಪರಿಗಣಿಸದೇ ಏಕಪಕ್ಷೀಯವಾಗಿ ಆದೇಶ ನೀಡಿದ್ದರು. ಖಾತೆ ಪಹಣಿಗೆ ಹೆಸರು ಸೇರಿಸಲು ಆದೇಶ ನೀಡಿರುವುದಿಲ್ಲ.
ದಿನಾಂಕ: 23-10-2019 ರಂದು ಏಕಪಕ್ಷೀಯವಾಗಿ ರೈಲ್ವೆ ನಿಲ್ದಾಣದ ಹತ್ತಿರ ಇರುವ ಜಮೀನಿನ ಪರಿಹಾರ ಪಡೆಯುವಂತೆ ಆದೇಶ ಮಾಡಿರುತ್ತಾರೆ. ಈ ಆದೇಶವನ್ನು ಪ್ರಶ್ನಿಸಿ ದಿನಾಂಕ: 23-10-2019 ರ ಆದೇಶವನ್ನು ಪ್ರಶ್ನಿಸಿ ಮಾನ್ಯ ಗೌರವಾನ್ವಿತ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತುಮಕೂರು ಇಲ್ಲಿ ಪ್ರಕರಣ ಸಂಖ್ಯೆ: ಎಂಎ(ವಿಒಎ) 14/2020 ರಂತೆ ದಾವೆ ಹೂಡಿದ್ದು, ಸದರಿ ದಾವೆಯು ಇತ್ಯರ್ಥಕ್ಕೆ ಬಾಕಿ ಇರುತ್ತದೆ. ಈ ಜಮೀನಿಗೆ ಸಂಬಂದಪಟ್ಟಂತೆ ಕೇಸ್ ಇದೆ ಎಂದು ೨-೩ ಬಾರಿ ಈಗಿನ ತಹಸೀಲ್ದಾರ್ ಜಿ.ವಿ. ಮೋಹನ್ ಕುಮಾರ್ ರವರ ಗಮನಕ್ಕೆ ತಂದಿದ್ದರೂ ಸಹ ಅವರು ಬರೀ ೦೩ ಮನೆಯ ಕುಟುಂಬಕ್ಕೆ ರಾಮ, ಲಕ್ಕ, ಪಠಾಣ್ ಕುಟುಂಬಕ್ಕೆ ಸರ್ವೆ ನಂಬರ್ 8ರಲ್ಲಿ 4-18 ಗುಂಟೆಯಂತೆ ಮತ್ತು ಸರ್ವೆ ನಂಬರ್ 91, 92 ರ 0-30 ಗುಂಟೆ ಜಮೀನಿಗೆ ಹಿಂದಿನ ತಹಸೀಲ್ದಾರ್ ಐಎನ್ ಸಿಆರ್ 40/84-85 ಈ ಆದೇಶ ನಮೂದಿಸಿ (1) ರಾಮಚಂದ್ರಯ್ಯ ಬಿನ್ ಲೇಟ್ ಗಂಗಯ್ಯರವರಿಗೆ 1-19.03.00 ಗುಂಟೆ, (2) ಶೆಟ್ಟಳ್ಳಯ್ಯ ಬಿನ್ ಲೇಟ್ ಚಿಕ್ಕಹನುಮಯ್ಯ ರವರಿಗೆ 1-19.03.00 ಗುಂಟೆ, (3) ರಾಮಾಂಜಿನೇಯ ಬಿನ್ ಲೇಟ್ ಪಠಾಣಯ್ಯ ರವರಿಗೆ 1-19.03.00 ಗುಂಟೆ ಜಮೀನು ಪಹಣಿಗೆ ಹೆಸರು ನಮೂದಿಸಲಾಗಿದೆ. ಇದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ. ತಹಸೀಲ್ದಾರ್ರವರ ನ್ಯಾಯಪೀಠಕ್ಕೆ ಅವಮಾನ ಮಾಡಿರುತ್ತಾರೆ. ಈ ದಲಿತ ಜನಾಂಗದ ಜಮೀನು ಕಬಳಿಸಲು ಈ ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ರವರು ಸಂಚು ರೂಪಿಸಿರುತ್ತಾರೆ.
ಈ ಜಮೀನುದಾರರಿಗೆ ಅಕ್ರಮವಾಗಿ ಪಹಣಿಗೆ ಹೆಸರು ಸೇರಿಸಿ ದಲಿತ ಜನಾಂಗದಿಂದ ಖರೀದಿಸಿ ಕೊಂಡು ಲೇಔಟ್ ಮಾಡಲು ತಯಾರಿ ನಡೆಸಿರುತ್ತಾರೆಂದು ಹಾಗೂ ತುರ್ತಾಗಿ ಖಾತೆ ಮಾಡಲು ತಯಾರಿ ನಡೆಸಿದ್ದಾರೆಂದು, ಈ ರೀತಿ ದಲಿತ ಜನಾಂಗಕ್ಕೆ ಮೋಸ ವಂಚನೆ ಮಾಡುತ್ತಿರುವ ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ವಿರುದ್ಧ ಜಿಲ್ಲಾಧಿಕಾರಿಯವರು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಂಡು ಅಮಾನತ್ತು ಮಾಡಬೇಕೆಂದು ಕುಳುವಾಡಿ ವಂಶಸ್ಥರು ಆಗ್ರಹಿಸಿದ್ದಾರೆ.
ಅಲ್ಲದೇ ಈ ಪ್ರಕರಣ ಇತ್ಯರ್ಥ ಆಗುವವರೆವಿಗೂ ನಿರಂತರವಾಗಿ ದಲಿತ ಮುಖಂಡರು ಮತ್ತು ತುಮಕೂರು ನಗರ ಎನ್.ಆರ್.ಕಾಲೋನಿಯ ಕುಳುವಾಡಿ ವಂಶಸ್ಥರು ಪ್ರತಿಭಟನೆ ನಡೆಸಲು ಸಿದ್ದರಿರುತ್ತೇವೆ ಎಂಬುದಾಗಿ ಕುಳುವಾಡಿ ವಂಶಸ್ಥರು ಆಗ್ರಹಿಸಿದ್ದಾರೆ.
ಇದೂ ಸಾಲದೆಂಬಂತೆ ತುಮಕೂರು ತಾಲ್ಲೂಕು ತಹಶೀಲ್ದಾರ್ರವರು ಗುಬ್ಬಿ ತಾಲ್ಲೂಕಿನ ಹಲವೆಡೆ, ತುಮಕೂರು ಗ್ರಾಮಾಂತರದ ನಂದಿಹಳ್ಳಿ, ಗೂಳರಿವೆ, ಕ್ಯಾತ್ಸಂದ್ರ, ಮಂಚಕಲ್ಕುಪ್ಪೆ, ಹಾಗಲವಾಡಿ, ಬೆಳ್ಳಾವಿ, ಪಕ್ಕದ ಜಿಲ್ಲೆಯಾದ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಇನ್ನೂ ಮುಂತಾದ ಕಡೆಗಳಲ್ಲಿ ಇವರು ಅಕ್ರಮ ಜಮೀನುಗಳನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಅದೂವೆ ದಲಿತರ ಜಮೀನುಗಳು, ಬಗರ್ಹುಕುಂ ಜಮೀನುಗಳು, ಸಾರ್ವಜನಿಕ ಗೋಮಾಳ, ಕರಾಬು ಇಂತಹವುಗಳನ್ನೇ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಕುರಿತು ಹಲವಾರು ಜನರಿಂದ ಸಮಗ್ರ ಬಾಹ್ಯ ತನಿಖೆ ನಡೆಯುತ್ತಿದೆ ಎಂಬ ಪಿಸು ಪಿಸು ಸುದ್ದಿ ಕೇಳಿ ಬರುತ್ತಿದ್ದು, ಶೀಘ್ರದಲ್ಲಿಯೇ ಇವರ ವಿರುದ್ಧ ಇರುವ ಅಕ್ರಮ ಆಸ್ತಿಗಳು ಬಹಿರಂಗಗೊಳ್ಳಲಿವೆ ಎಂಬ ಸುದ್ಧಿಯೂ ಹರಿದಾಡುತ್ತಿದೆ.