ಕಛೇರಿ ಸಮಯವನ್ನೇ ದುರುಪಯೋಗ ಮಾಡಿಕೊಂಡರಾ ಉನ್ನತಾಧಿಕಾರಿಗಳು!!!!!

ಕಚೇರಿ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ತುಮಕೂರು ಉಪವಿಭಾಗಾಧಿಕಾರಿ ಅಜಯ್ ಕುಮಾರ್

ತುಮಕೂರು : ಹುಟ್ಟುಹಬ್ಬ ಸಂಭ್ರಮಾಚರಣೆಯ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ

ಕಚೇರಿ ಸಮಯದಲ್ಲಿ ಸಾರ್ವಜನಿಕರನ್ನು ಹೊರಗಡೆ  ಗಂಟೆ ಗಟ್ಟಲೆ ಕಾಯಿಸಿ ಕಛೇರಿ ಕೆಲಸಗಳನ್ನು ಬದಿಗಿಟ್ಟು ತಮ್ಮ  ಕಚೇರಿ ಒಳಗೆ ಹುಟ್ಟುಹಬ್ಬ ಆಚರಿಸಿಕೊಂಡ ಉಪವಿಭಾಗಾಧಿಕಾರಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.


ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಎಸಿ ಯವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ ಎನ್ನಲಾಗಿದ್ದು.

ಮಳೆಯಿಂದ ಹಾನಿಯಾದ ಬೆಳೆ ಪರಿಹಾರ ಹಾಗೂ ಮನೆಗಳ ದುರಸ್ತಿ ಕ್ರಮಕ್ಕೆ ಕ್ರಮವಹಿಸಿದೆ ಈ ರೀತಿಯಾದ ಆಚರಣೆಗಳಲ್ಲಿ ತಲ್ಲೀನರಾಗಿರುವ ಅಧಿಕಾರಿಗಳು, ತಮ್ಮ ಕಛೇರಿ ಸಮಯವನ್ನು ಈ ರೀತಿಯಾಗಿ ದುರುಪಯೋಗ ಪಡಿಸಿಕೊಂಡಿರುವುದು ಎಷ್ಟು ಮಾತ್ರ ಸರಿ.

ಅಧಿಕಾರಿಗಳು ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳಬಾರದೆಂತಿಲ್ಲ, ಕಛೇರಿ ಸಮಯದ ಮುಗಿದ ನಂತರವೋ, ಕಛೇರಿ ಸಮಯಕ್ಕೆ ಮೊದಲೋ ಈ ರೀತಿಯಾಗಿ ಆಚರಿಸಿಕೊಂಡಿದ್ದರೆ, ಯಾವ ಚಕಾರವೂ ಇರಲಿಲ್ಲ, ಆದರೆ ಇಂದು ಸೋಮವಾರ ಸುತ್ತಮುತ್ತಲಿನ ಗ್ರಾಮಾಂತರ ಭಾಗದ ಜನರೆಲ್ಲರೂ ಕಛೇರಿ ಕೆಲಸಗಳಿಗೆ ಬಂದು, ಈ ರೀತಿಯಾದ ವರ್ತನೆಯನ್ನು ನೋಡಿ ಸಹಿಸಲಾಗದೇ, ಕಛೇರಿ ಮುಂಭಾಗದಲ್ಲೇ ಹಿಡಿ ಶಾಪ ಹಾಕುತ್ತಿದ್ದದ್ದು ಕಂಡು ಬಂದಿತು.

ಇನ್ನೂ ಕೆಲವರು ನಮ್ಮ ಕೆಲಸಗಳಿಗಾದರೆ ಇವರಿಗೆ ಸಮಯವಿರುವುದಿಲ್ಲ, ಇಂತಹದುಕ್ಕೆಲ್ಲಾ ಸಮಯ, ನಮ್ಮದು ಚಿಕ್ಕ ಕೆಲಸ ಸ್ವಾಮಿ ಮಾಡಿಕೊಡಿ ಎಂದು ಹೆಬ್ಬೂರು ಪಕ್ಕದ ಹಳ್ಳಿಯಿಂದ ಬಂದಿದ್ದೀವಿ, ನೋಡಿ ಈ ರೀತಿಯಾಗಿ ಮಾಡಿದರೆ ನಾವು ಯಾರನ್ನ ಕೇಳಬೇಕು ಎಂದು ಒಬ್ಬ ವೃದ್ಧೆ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರು.

ಇನ್ನು ಈ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ದಂಡಾಧಿಕಾರಿಗಳಾದ ಜಿ.ವಿ.ಮೋಹನ್‌ ಕುಮಾರ್‌, ಹಿರಿಯ ಅಧಿಕಾರಿಗಳು ನೌಕರರ ಸಂಘದ ಅಧ್ಯಕ್ಷರಾದ ನರಸಿಂಹರಾಜು, ಕಂದಾಯ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಆಡಳಿತ ಮಂಡಳಿಯೇ ಈ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದು ಇವರೆಲ್ಲರೂ ಸಹ ತಮ್ಮ ಕಛೇರಿ ಕೆಲಸಗಳನ್ನು ದುರುಪಯೋಗ ಮಾಡಿಕೊಂಡಂತೇ ಸರಿ ಅಲ್ಲವೇ, ಹುಟ್ಟು ಹಬ್ಬ ಆಚರಿಸಿಕೊಂಡ ವ್ಯಕ್ತಿಯನ್ನು ಮೊದಲ್ಗೊಂಡು ಆಚರಣೆಯಲ್ಲಿ ಭಾಗಿಯಾದ ಎಲ್ಲಾ ಸಾರ್ಕಾರಿ ನೌಕರರ ತಲೆದಂಡವಾಗುತ್ತದಾ? ಎಂಬುದೇ ಯಕ್ಷ ಪ್ರಶ್ನೆ, ಏಕೆಂದರೆ ಇವರೆಲ್ಲರೂ ಸಹ ಉನ್ನತ ದರ್ಜೆಯ ಅಧಿಕಾರಿಗಳು, ಇವರುಗಳ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಜರುಗಿಸಬೇಕಾಗಿರುವುದು, ಜಿಲ್ಲಾಡಳಿತ, ಜೊತೆಗೆ ಎಲ್ಲರೂ ಅತ್ಯಂತ ಪ್ರಭಾವಿಗಳು, ಪ್ರಭಾವಿಗಳ ತಲೆದಂಡ ಆಗುವುದಂತೂ ಸದ್ಯಕ್ಕೆ ದೂರದ ಮಾತು, ನಮ್ಮಂತಹ ಜನಸಾಮಾನ್ಯರಿಗೆ ನ್ಯಾಯ ಸಿಗುವುದಾದರೂ ಎಂದು ಎನ್ನುಕೊಳ್ಳುವುದರಲ್ಲೇ ಜೀವನ ಮುಗಿದು ಹೋಗುತ್ತದ ಅಷ್ಟೇ.

ಜನ್ಮ ತಾಳಿದರೆ ಪ್ರಭಾವಿಗಳಾಗಬೇಕೇ ವಿನಃ, ಜನ ಸಮಾನ್ಯರಂತೂ ಆಗಬಾರದು ಎಂಬುದು ಮನ ನೊಂದಿದವರ ಮನದಾಳದ ಮಾತು

ಇನ್ಮುಂದಾದರೂ ಜವಾಬ್ದಾರಿ ಸ್ಥಾನದಲ್ಲಿರುವ ಉನ್ನತ ದರ್ಜೆಯ ಅಧಿಕಾರಿಗಳು ಸರ್ಕಾರಿ ಕೆಲಸದ ಸಮಯದಲ್ಲಿ ಇಂತಹ ಕಾರ್ಯಗಳಿಗೆ ಮುಂದಾಗದೆ, ಜನರ ಸ್ಪಂದನೆಗಳಿಗೆ ಸ್ಪಂದಿಸುವಂತಹ ಕೆಲಸವಾಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!