ಡಿಜೆ ಸೌಂಡಿಗೆ ಬಲಿಯಾದ ಅಮಯಾಕ

 

ತುಮಕೂರು _ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ಕಳೆದ ರಾತ್ರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಗಣಪತಿಯ ವಿಸರ್ಜನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು.

ಗ್ರಾಮಸ್ಥರೆಲ್ಲ ಸಂಭ್ರಮದಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಗಣಪತಿಯನ್ನ ಸಂಭ್ರಮ ಸಡಗರದೊಂದಿಗೆ ಗಣಪತಿಯನ್ನ ವಿಸರ್ಜಿಸಿದ್ದರು.


ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಯೊಂದು ಗ್ರಾಮದಲ್ಲಿ ಹಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇನ್ನು ಡಿಜೆ ಸೌಂಡ್ಗೆ ಅದೇ ಗ್ರಾಮದ ವಿರೂಪಾಕ್ಷಪ್ಪ (50)ಎಂಬುವವರು ಡಿಜೆ ಸೌಂಡಿನ ಎಫೆಕ್ಟ್ ಗೆ ಹೃದಯಘಾತಕ್ಕೆ ಬಲಿಯಾಗಿದ್ದಾನೆ ಎನ್ನುವ ಚರ್ಚೆ ನಡೆಯುತ್ತಿದ್ದು.

ಇದಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ನಡೆದ ಗಣಪತಿ ವಿಸರ್ಜನಾ ಮಹೋತ್ಸವದ ವಿಡಿಯೋಗಳು ವೈರಲ್ ಆಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸರ್ಕಾರ ಡಿಜೆಗೆ ಸಂಬಂಧಿಸಿದಂತೆ ಕೆಲವು ಸುತ್ತೋಲೆಗಳನ್ನ ಹೊರಡಿಸಿದ್ದು ಸಂಬಂಧಪಟ್ಟ ಇಲಾಖೆಗಳಿಂದ ಡಿಜೆ ತರಲು ಅನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿತು ಆದರೆ ಸರ್ಕಾರಿ ಆದೇಶವನ್ನು ಪಾಲಿಸದೆ ಅನಧಿಕೃತವಾಗಿ ಡಿಜೆ ಸೌಂಡ್ಗೆ ಕಾರ್ಯಕ್ರಮದ ಆಯೋಜಕರು ಮೊರೆ ಹೋಗಿದ್ದರು ಎನ್ನಲಾಗಿದ್ದು . ಇನ್ನು ಡಿಜೆ ಸೌಂಡನ್ನ ಬಳಸಿಕೊಳ್ಳಲು ಯಾವ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಎನ್ನುವ ಅನುಮಾನವೂ ಸಹ ಸೃಷ್ಟಿ ಮಾಡಿದೆ.

ಈತರಹದ ಘಟನೆಗಳಿಗೆ ಯಾರು ಜವಾಬ್ದಾರರು ಸಂಬಂಧಪಟ್ಟ ಇಲಾಖೆಗಳು ಇಂತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿತ್ತು ಎನ್ನುವುದು ಗ್ರಾಮಸ್ಥರ ಅಳಲು.

ಇನ್ನಾದರೂ ಕಾರ್ಯಕ್ರಮದ ಆಯೋಜಕರು ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವರು ಕಾದು ನೋಡಬೇಕಿದೆ.

 

ಬೆಳ್ಳಾವಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

error: Content is protected !!