ತುಮಕೂರು: ನಗರದ ಸಫಾ ಪ್ಯಾಲೆಸ್ ನಲ್ಲಿ ತುಮಕೂರು ಜಿಲ್ಲಾ ಟ್ರಕ್ ಮಾಲೀಕರ ಸಂಘದ ಅಧ್ಯಕ್ಷರಾದ ಮುಜಮ್ಮಿಲ್ ಪಾಷಾ ರವರ ನೇತೃತ್ವದಲ್ಲಿ ಲಾರಿ ಮಾಲೀಕರ ಜಾಗೃತಿ ಸಮಾವೇಶ ನಡೆಯಿತು.
ಟ್ರಕ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಪರ್ವೀಝ್ ಸುದ್ದಿಗಾರರೊಂದಿಗೆ ಮಾತನಾಡಿರ ರಾಜ್ಯಾಧ್ಯಕ್ಷ ಷಣ್ಮುಖಪ್ಪನವರ ಸೂಚನೆಯಂತೆ ಜಿಲ್ಲಾಧ್ಯಕ್ಷ ಮುಜಾಮ್ಮಿಲ್ ಪಾಷಾ ಆಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಲಾರಿ ಮಾಲೀಕರನ್ನು ಒಗ್ಗೂಡಿಸಿ ಜಾಗೃತಿ ಸಮಾವೇಶ ನಡೆಸಲಾಯಿತು.
ಕೆ.ಬಿ. ಕ್ರಾಸ್ನಿಂದ ಕೊಪ್ಪಳ ಹಾಗೂ ವಿವಿಧ ಜಿಲ್ಲೆಗಳಿಗೆ ಅದಿರು (ಮೈನ್ಸ್) ಸಾಗಾಣಿಕೆ ಮಾಡಲು ಫಡೇಷನ್ ಆಫ್ ಕರ್ನಾಟಕ ಸ್ಟೇಟ್ ಲಾಲಿ ಮಾಲಕರು ಮತ್ತು ಏಜೆಂಟ್ಸ್ ಮಾಡಿರುವ ದರ ನಿಗದಿಯಿಂದ ನಮಗೆ ಅನ್ಯಾಯವಾಗಿದೆ ಎಂದು ಹೇಳಿದರು.
2007ರಲ್ಲಿ ಮೈನ್ಸ್ ಸಾಗಣೆ ಬಾಡಿಗೆ 1050 ರೂಗಳನ್ನು ನಿಗದಿಗೊಳಿಸಲಾಗಿತ್ತು. ಆದರೆ ಈಗ ಲಾರಿ ಮಾಲಿಕರ ಸಂಘ ಬಾಡಿಗೆ ದರವನ್ನು 950 ರೂಗಳಿಗೆ ನಿಗದಿಗೊಳಿಸಿದೆ. ಇದರಲ್ಲಿ ಮಧ್ಯವರ್ತಿಗಳು 650 ರೂಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಗಂಗಾವತಿ ಲಾರಿ ಮಾಲಿಕರ ಸಂಘ ಅಧ್ಯಕ್ಷ ಸಬೀರ್ ಮುನಿಯಾರ್ ಆರೋಪಿಸಿದ್ದಾರೆ.
ಹೊರಗಡೆಯಿಂದ 650 ರೂಗಳಿಗೆ ಲಾರಿಗಳನ್ನು ತರಿಸುತ್ತಿದ್ದಾರೆ. ಲಾರಿ ಲಾರಿ ಮಾಲಿಕರ ನಡುವೆ ಆಮಿಷವೊಡ್ಡಿ ವಿಭಜನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಬಳ್ಳಾರಿಯಿ, ಗಂಗಾವತಿಯಿಂದ ತುಮಕೂರಿಗೆ ಅಕ್ಕಿ ಸಾಗಿಸುವ ಲಾರಿಗಳಿಗೆ ಅದಿರು ತುಂಬಿಸಿ 650 ಬಾಡಿಗೆಗೆ ಕಳಿಸುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಹೇಳಿದರು.
650 ರೂಗಳಿಗೆ ಅದಿರು ತುಂಬಿಕೊಂಡು ಹೋದರೂ ಅದರಲ್ಲಿ ನಮಗೆ ಲಾಭವಿಲ್ಲ. ಟ್ಯಾಕ್ಸ್, ಡ್ರೈವರ್ ಗೆ ಕಮಿಷನ್, ಟೋಲ್ ಶುಲ್ಕ ಕಟ್ಟುವುದರಿಂದ ನಮಗೆ ಎನೂ ಉಳಿಯುವುದಿಲ್ಲ. ತುಮಕೂರು ಲಾರಿ ಮಾಲಿಕರ ಸಂಘ ನಿಗದಿಗೊಳಸಿರುವ 950 ಬಾಡಿಗೆಯಿಂದ ನಮಗೆ ನಷ್ಟವಾಗಲಿದೆ. ಇದರ ವಿರುದ್ಧ ಎಸ್.ಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಕೆಬಿ ಕ್ರಾಸ್ ಹತ್ತಿರ ಡಿವೈಎಸ್.ಪಿಗೆ ಮನವಿ ನೀಡುತ್ತೇವೆ. ನಮ್ಮ ಅಳಲನ್ನು ತೋಡಿಕೊಳ್ಳುತ್ತೇವೆ. ಈಗ ನಿಗದಿಪಡಿಸಿರುವ ಮೈನ್ಸ್ ಬಾಡಿಗೆಯಿಂದ ನಮಗೆ ಲಾಸ್ ಆಗುತ್ತಿದೆ. 52 ಸಾವಿರ ರೂಪಾಯಿ ಟೈರ್ ಬೆಲೆ ಇದೆ. ವಿಮೆ 75 ಸಾವಿರ ಇದೆ. ಡೀಸೆಲ್ 90 ರೂಪಾಯಿ ಇದೆ. ಈ ಎಲ್ಲಾ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸಹಕಾರವನ್ನು ಯಾಚಿಸುತ್ತೇವೆ ಎಂದು ಹೇಳಿದರು.