ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸವಿತಾ ಸಮಾಜದ ಬಂಧುಗಳಿಗೆ ತುಮಕೂರು ಜಿಲ್ಲೆಯ ಸವಿತಾ ಸಮಾಜದ ಯುವ ಪಡೆ ವತಿಯಿಂದ ಸಲೂನ್ ಕಿಟ್ ವಿತರಿಸಲಾಯಿತು. ಹಾಗೂ ಗುಬ್ಬಿ ಸವಿತಾ ಸಮಾಜದ ನೂತನ ಕಟ್ಟಡ ಕಾಮಗಾರಿಗೆ ಯುವ ಪಡೆ ವತಿಯಿಂದ 5000 ಸಾವಿರ ಹಣವನ್ನ ದೇಣಿಗೆ ನೀಡಲಾಯಿತು. ಈ ಸಂಧರ್ಭದಲ್ಲಿ ಗುಬ್ಬಿ ಸವಿತಾ ಸಮಾಜದ ಗೌರವ ಅಧ್ಯಕ್ಷರಾದ ಲಕ್ಷೀ ನಾರಾಯಣ್ (ಪಾಪಣ್ಣ) ನವರನ್ನು ತುಮಕೂರು ಜಿಲ್ಲೆ ಸವಿತಾ ಸಮಾಜದ ಯುವ ಪಡೆ ವತಿಯಿಂದ ಸನ್ಮಾನಿಸಲಾಯಿತು.
ಲಕ್ಷೀ ನಾರಾಯಣ್ (ಪಾಪಣ್ಣ) ಮಾತನಾಡಿ ಕಟ್ ವೆಲ್ ರಂಗನಾಥ್ ರವರ ನೇತೃತ್ವದ ತುಮಕೂರು ಜಿಲ್ಲೆಯ ಯುವ ಪಡೆ ಯುವಕರು ಸಮಾಜ ಮೆಚ್ಚುವಂತ ಕೆಲಸ ಮಾಡುತ್ತಿರುವುದು ಹಾಗೂ ಹಳ್ಳಿಗಳಲ್ಲಿ ಇರುವ ಸವಿತಾ ಸಮಾಜದ ಬಂಧುಗಳನ್ನ ಗುರಿತಿಸಿ ಸಲೂನ್ ಕಿಟ್ ನೀಡುತ್ತಿರುವುದು ನಿಜಕ್ಕೊ ಶ್ಲಾಘನೀಯ ಹಾಗು ಯುವ ಪಡೆ ಯವರಿಗೆ ಸಮ ವಸ್ತ್ರ ವನ್ನ ನೀಡುವುದಾಗಿ ತಿಳಿಸಿದರು. ಅಧ್ಯಕ್ಷರಾದ ಪ್ರಕಾಶ್ ರವರು ಮಾತನಾಡಿ ಸವಿತಾ ಸಮಾಜ ಸಂಘಟನೆಗೆ ಯುವಕರು ಮುಂದೆ ಬಂಧಿರುವುದು ಖುಷಿಯ ವಿಚಾರ ಖಂಡಿತ ಯುವ ಪಡೆ ಯವರಿಗೆ ನಮ್ಮ ಕಡೆಯಿಂದ ಬೆಂಬಲವಿರುತ್ತದೆ ಎಂದರು. ನಂತರ ಕಟ್ ವೆಲ್ ರಂಗನಾಥ್ ಮಾತನಾಡಿ ಸಲೂನ್ ಮಾಲೀಕರು ತಮ್ಮ ಅಂಗಡಿಗಳನ್ನ ಆಧುನಿಕರಣಗೊಳಿಸಿ ಸವಿತಾ ಸಮಾಜದ ಸಂಘಟನೆಗೆ ಕೈ ಜೋಡಿಸಿ ಎಂದರು. ಸಮೂದಾಯದ ಯುವಕರು ವೃತ್ತಿಯ ಜೋತೆ ಸಮೂದಾಯದ ಕಾರ್ಯಕ್ರಮಗಳಿಗೆ ಸಹ ಭಾಗಿಯಾಗಬೇಕು, ಹಾಗು ಎಲ್ಲಿ ಸವಿತಾ ಸಮಾಜದ ಮೇಲೆ ನಿಂದನೆಗಳಾಗುತ್ತೆ ಆ ಸಂಧರ್ಭಗಳಲ್ಲಿ ಕಾನೂನು ರೀತಿಯ ಹೋರಾಟಗಳಿಗೆ ನಾವೆಲ್ಲಾ ಮೂಂದಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದಿಂದ ಬಂದು ಸಲೂನ್ ಮಾಡುತ್ತಿರುವವರ ಮೇಲೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಅವರನ್ನ ತಪಾಸಣೆ ಮಾಡಬೇಕು ಹಾಗು ಅವರು ಯಾರು ಎಲ್ಲಿಂದ ಬಂದರು ಅವರ ಮೂಲ ದಾಖಲಾತಿಯನ್ನ ಕಲೆ ಹಾಕಬೇಕು. ಅನಧಿಕೃತವಾಗಿ ಬಿಹಾರ, ಉತ್ತರ ಪ್ರದೇಶ, ಡೆಲ್ಲಿ , ಮೂಲದ ಸಲೂನ್ ಗಳು ತುಮಕೂರು ಜಿಲ್ಲೆಯಲ್ಲಿ ಹೆಚ್ಚಿದ್ದು, ಅವರು ಯಾವುದೇ ಸ್ಥಳೀಯ ಪರವಾನಗೆ ಪಡೆಯದೆ ಇರುವುದು, ಮತ್ತು ಹೊರ ರಾಜ್ಯದ ಕೆಲ ಸಲೂನ್ ಗಳ ಮೇಲೆ ನಾಮಫಲಕ ಸಹ ಅಳವಡಿಸಿರಲ್ಲ, ಮತ್ತು ಇತ್ತಿಚ್ಚಿನ ದಿನಗಳಲ್ಲಿ ಹೊರ ರಾಜ್ಯದಿಂದ ಬಂದು ಭಯೊತ್ಪಾದಕ ಚಟುವಟಿಕೆಗಳು ಮಾಡುವುದು ಹೆಚ್ಚಾಗುತ್ತಿದ್ದು ತುಮಕೂರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗು ಪೋಲಿಸ್ ಇಲಾಖೆ ಹೊರ ರಾಜ್ಯದ ಸಲೂನ್ ಗಳನ್ನ ತಪಾಸಣೆ ಹಾಗು ತುಮಕೂರು ಜಿಲ್ಲೆಯಲ್ಲಿ ಎಷ್ಟು ಹೊರ ರಾಜ್ಯದ ಸಲೂನ್ ಗಳಿವೆ ಎಂದು ಪಟ್ಟಿ ಮಾಡಿ ಅಂತವರ ಮೇಲೆ ನಿಗ ಇಡಬೇಕು ಎಂದು ಒತ್ತಾಹಿಸಲಾಹಿತು.
ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ಲಕ್ಷೀ ನಾರಾಯಣ್ (ಪಾಪಣ್ಣ) ನವರು, ಅಧ್ಯಕ್ಷರಾದ ಪ್ರಕಾಶ್ ರವರು, ಪ್ರತಿನಿಧಿಯಾದ ನಟರಾಜು ರವರು, ಕಾರ್ಯದರ್ಶಿಯಾದ ಕಾಂತರಾಜು ರವರು, ಖಜಾಂಚಿಯಾದ ರಮೇಶ್ ರವರು, ತುಮಕೂರು ನಗರ ಅಧ್ಯಕ್ಷರಾದ ಕಟ್ ವೆಲ್ ರಂಗನಾಥ್ ರವರು, ತುಮಕೂರು ಜಿಲ್ಲೆಯ ಸವಿತಾ ಸಮಾಜದ ಯುವ ಪಡೆ ಪಧಾದಿಕಾರಿಗಳು, ಹಾಗು ಸ್ಥಳೀಯ ಸವಿತಾ ಸಮಾಜದ ಸದಸ್ಯರು ಇದ್ದರು.