ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೆಕ್ಕೆಗೆ ತುಮಕೂರು ಮಹಾನಗರ ಪಾಲಿಕೆ

 

ತುಮಕೂರು ಮಹಾನಗರ ಪಾಲಿಕೆ ಚುನಾವಣೆಯು ಇಂದು ಮಧ್ಯಾಹ್ನ ಪಾಲಿಕೆಯ ಆವರಣದಲ್ಲಿ ನಡೆದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಮೇಯರ್ ಆಗಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಟಿ.ಕೆ.ನರಸಿಂಹಮೂರ್ತಿ ಉಪ ಮೇಯರ್ ಆಗಿ ಪಾಲಿಕೆಯ ಗದ್ದುಗೆಯನ್ನು ಅಲಂಕರಿಸಿದ್ದಾರೆ.

ನಿರೀಕ್ಷೆಯಂತೆ ಬಿಜೆಪಿ ಪಕ್ಷವನ್ನು ವಿರೋಧ ಪಕ್ಷವನ್ನಾಗಿಯೇ ಉಳಿಸಿದ ಈ ಎರಡೂ ಪಕ್ಷಗಳ ಕಾರ್ಯತಂತ್ರಗಾರಿಕೆಯ ಮುಂದೆ ಬಿಜೆಪಿಯ ಯಾವ ತಂತ್ರ, ಕುತಂತ್ರ, ಆಪರೇಷನ್ ನಡೆಯದೇ ಬಿಜೆಪಿಯನ್ನು ಮಂಕಾಗಿ ಮಾಡೀ, ಸೈಡ್‌ಲೈನ್‌ನಲ್ಲೇ ಇರುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ನಿರೀಕ್ಷೆಯಂತೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದಂತೆ ಎಲ್ಲಾ ಪಕ್ಷದವರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಈಗಾಗಲೇ ವಿಪ್ ಜಾರಿಗೊಳಿಸಿದ್ದರೂ ಸಹ, ಕೆಲವೊಂದು ಕಡೆ ತಂತ್ರಗಾರಿಕೆಯನ್ನು ನಡೆಸಲು ಕೆಲ ಪಕ್ಷದ ಮುಖಂಡರು ಮುಂದಾಗಿದ್ದರೂ ಎನ್ನಲಾಗಿದೆ, ಆದರೆ ಕೊನೆ ಕ್ಷಣದಲ್ಲಿ ಯಾವ ತಂತ್ರಗಾರಿಕೆಯೂ ನಡೆದ ಕಾಂಗ್ರೆಸ್‌ಗೆ ಮೇಯರ್ ಪಟ್ಟ, ಜೆಡಿಎಸ್ ಉಪ ಮೇಯರ್ ಪಟ್ಟಗಳನ್ನು ತಂದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾನಗರ ಪಾಲಿಕೆಯ ಒಟ್ಟು ಸದಸ್ಯರು : 35 ಅದರಲ್ಲಿ (ಬಿಜೆಪಿಯ 12, ಕಾಂಗ್ರೆಸ್ 10, ಜೆಡಿಎಸ್ 10, ಪಕ್ಷೇತರರು 03), ಶಾಸಕ 01, ಸಂಸದರು 02, ವಿಧಾನಪರಿಷತ್ ಸದಸ್ಯರು 01 ಸೇರಿದಂತೆ ಒಟ್ಟು 39 ಮತಗಳು ಇದ್ದವು. ಆದರೂ ಸಹ ತುಮಕೂರಿನಲ್ಲಿ ಶಾಸಕರು, ಸಂಸದರು ಬಿಜೆಪಿಯವರೇ ಆಗಿದ್ದರೂ ಸಹ ಪಾಲಿಕೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿಯ ಬಲದಿಂದ ಮೇಯರ್ ಸ್ಥಾನವನ್ನು ಅಲಂಕರಿಸಿದ್ದ ಬಿ.ಜಿ.ಕೃಷ್ಣಪ್ಪರವರ ಆಡಳಿತಾವಧಿಯಲ್ಲಿದ್ದ ನ್ಯೂನ್ಯತೆಗಳೇ ಬಿಜೆಪಿಗೆ ತನ್ನದೇ ಪಕ್ಷದ ಕೆಲ ಸದಸ್ಯರಿಗೆ ಉಪ ಮೇಯರ್ ಸ್ಥಾನವನ್ನು ತಂದುಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಮೂಲಕ ಉಪ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಪಕ್ಷದ ಸದಸ್ಯರಾದ ಮಲ್ಲಿಕಾರ್ಜುನ್, ನಳಿನ ಇಂದ್ರಕುಮಾರ್, ಗಿರಿಜಾ ಧನಿಯಾಕುಮಾರ್ ಇವರುಗಳನ್ನು ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆಯನ್ನು ಸರಿಯಾಗಿ ಮಾಡದೇ, ತಮ್ಮ ಪಕ್ಷದ ಸದಸ್ಯರಿಗೆ ತೀವ್ರ ನೋವನ್ನು ತಂದುಕೊಟ್ಟಿದ್ದಾರೆಂದು ಪಕ್ಷದ ಕಾರ್ಯಕರ್ತರು ಪಾಲಿಕೆಯ ಆವರಣದಲ್ಲಿಯೇ ಮಾತನಾಡುತ್ತಿದ್ದು ಗಮನಾರ್ಹ ಸಂಗತಿಯಾಗಿದೆ.

Leave a Reply

Your email address will not be published. Required fields are marked *

error: Content is protected !!