ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ದಿನಾಂಕ 09-09-2022ರ ಶುಕ್ರವಾರದಂದು ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷದಿಂದ ಈಗಾಗಲೇ 20-20 ಮ್ಯಾಚ್ ರೀತಿ 06 ತಿಂಗಳು ಶ್ರೀಮತಿ ಪ್ರಭಾವತಿ ಸುಧೀಶ್ವರ್ರವರಿಗೆ ಉಳಿದ 06 ತಿಂಗಳು ಶ್ರೀಮತಿ ರೂಪಶ್ರೀ ಶೆಟ್ಟಳಯ್ಯರವರಿಗೆಂದು ಈಗಾಗಲೇ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದು.
ಉಳಿದಂತೆ ಉಪ ಮೇಯರ್ ಸ್ಥಾನವೂ ಸಹ 20-20 ಮ್ಯಾಚ್ ರೀತಿ 06 ತಿಂಗಳು ಟಿ.ಕೆ.ನರಸಿಂಹಮೂರ್ತಿರವರಿಗೆ ಉಳಿದ 06 ತಿಂಗಳು ಮಂಜುನಾಥ್ ಬಿ.ಎಸ್. (ಹೆಚ್.ಡಿ.ಕೆ)ರವರಿಗೆ ಹಂಚಿ ಮಾಡಲಾಗಿದ್ದು ಕಳೆದೆರಡು ದಿನಗಳ ಬೆಳವಣಿಗೆಗಳ ಪರಿಣಾಮ ಮತ್ತು ಉಭಯ ರಾಜಕೀಯ ಮುಖಂಡರುಗಳು (ಕಾಂಗ್ರೆಸ್ ಮತ್ತು ಜೆಡಿಎಸ್) ಮಾತುಕತೆಯಿಂದ ಈ ರೀತಿಯಾದ 20-20 ಮ್ಯಾಚ್ನಂತೆ 06-06 ಮ್ಯಾಚ್ನಂತೆ ಆಡಳಿತ ಹಂಚಿಕೆಯಾಗುತ್ತಿದೆ.
ಒಟ್ಟಾರೆಯಾಗಿ ನಮ್ಮ ತುಮಕೂರು ಮಹಾನಗರ ಪಾಲಿಕೆಯ ಆಡಳಿತ ಹಾಫ್ ಹಾಫ್ ಅಧಿಕಾರ ಚಾಲಾಯಿಸಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ವಿಧಾನಸಭಾ ಚುನಾವಣೆಯ ಸನ್ನಿಹವಿರುವಾಗಲೇ ಎಲ್ಲಾ ರೀತಿಯ ಪಾಲಿಕೆ ಸದಸ್ಯರುಗಳ ಮನವೊಲಿಸಿ, ಎಲ್ಲಾ ಮೇಯರ್ ಮತ್ತು ಉಪ ಮೇಯರ್ ಆಕಾಂಕ್ಷಿಗಳನ್ನು ಮನವೊಲಿಸಿ ಹಾಫ್ ಹಾಫ್ ಆಡಳಿತ ನಡೆಸಲು ಅನುಮತಿ ಮತ್ತು ಸಹಕಾರ ನೀಡುವ ಮೂಲಕ ಫ್ರಂಟ್ ಲೈನ್ ರಾಜಕೀಯ ಮುಖಂಡರು ಯಶಸ್ವಿಯಾಗಿರುವುದಲ್ಲದೇ. ವಿರೋಧಪಕ್ಷವಾದ ಬಿಜೆಪಿಗೆ ಸೆಡ್ಡು ಹೊಡೆಯುವುದಲ್ಲದೇ ಅವರಿಗೆ ಆಪರೇಷನ್, ಅಧಿಕಾರ, ಇತ್ಯಾದಿ ತಂತ್ರಗಳನ್ನು ಮಾಡದಂತೆ ಖಡಕ್ ಸಂದೇಶವನ್ನೂ ಸಹ ರವಾನಿಸಿದ್ದಾರೆ.