ನಾಳೆಯಿಂದ ಕಾಂಗ್ರೆಸ್‌ ಪಕ್ಷದ ಮಹಿಳಾಮಣಿಗಳು ಮೇಯರ್‌ಗಳಾಗಿ 20-20 ಮ್ಯಾಚ್‌ ರೀತಿ ಆಡಲಿದ್ದಾರೆ

ತುಮಕೂರು: ದಿನಾಂಕ- 09-09-2022ರಂದು ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಎಸ್.ಸಿ ಮಹಿಳೆಗೆ ಮೀಸಲಾತಿ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷದ ಶ್ರೀಮತಿ ಪ್ರಭಾವತಿ ಹಾಗೂ ಶ್ರೀಮತಿ ರೂಪಶ್ರೀ ಶೆಟ್ಟಳಯ್ಯ ಈ ಇಬ್ಬರು ಮಹಿಳಾ ಸದಸ್ಯರಿಗೆ ಈ ಸದವಕಾಶ ಲಭಿಸಿದೆ. ಆದ ಕಾರಣ ಪಕ್ಷದ ಮುಖಂಡರುಗಳು, ಪಕ್ಷದ ವೀಕ್ಷಕರು ಮತ್ತು ಮಹಾನಗರ ಪಾಲಿಕೆಯ ಪಕ್ಷದ ಸದಸ್ಯರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಇಬ್ಬರು ಮಹಿಳೆಯರಿಗೂ ಸಮಾನಾವಧಿಯ ಅಧಿಕಾರ ಕಲ್ಪಿಸುವಂತೆ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.

ಅದರಂತೆ ವರ್ಷದಲ್ಲಿ ಒಬ್ಬರಿಗೆ 6 ತಿಂಗಳ ಅಧಿಕಾರಾವಧಿ ಮತ್ತೊಬ್ಬರಿಗೆ ಇನ್ನುಳಿದ 6 ತಿಂಗಳ ಅಧಿಕಾರಾವಧಿ ನೀಡುವಂತೆ ಪಕ್ಷವು ತೀರ್ಮಾನಿಸಿದೆ. ಮೊದಲ 6 ತಿಂಗಳ ಅವಧಿಯಲ್ಲಿ ಶ್ರೀಮತಿ ಪ್ರಭಾವತಿ ರವರಿಗೆ ಮಹಾಪೌರರನ್ನಾಗಿ ಆಯ್ಕೆ ಮಾಡಲಾಗುತ್ತದೆ. 2019-20ರ (ಇದೇ ಅವಧಿಯ ಎರಡೂವರೆ ವರ್ಷದ ಹಿಂದೆ) ಅವಧಿಯಲ್ಲಿ ಉಪ ಮಹಾಪೌರರಾಗಿದ್ದ ಶ್ರೀಮತಿ ರೂಪಶ್ರೀ ಶೆಟ್ಟಳಯ್ಯ ರವರಿಗೆ ಇನ್ನುಳಿದ 6 ತಿಂಗಳ ಅವಧಿಗೆ ಮಹಾಪೌರರನ್ನಾಗಿ ಆಯ್ಕೆ ಮಾಡುವ ಮೂಲಕ ಈ ಇಬ್ಬರು ಮಹಿಳಾ ಸದಸ್ಯರಿಗೆ ಸಮಾನಾವಧಿಯ ಅಧಿಕಾರ ನೀಡುವಂತೆ ಪಕ್ಷದ ಮುಖಂಡರ ತೀರ್ಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ ಹಾಗೂ ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್ ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!