ತುಮಕೂರು: ಲೇಡಿ ಟೀಚರ್ ಒಬ್ಬರು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಲಕ್ಷಣ ಘಟನೆ ತುಮಕೂರು ತಾಲೂಕಿನ ಚಿಕ್ಕಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕಿ ಗಂಗಲಕ್ಷ್ಮಮ್ಮಳೇ ಎಣ್ಣೆ ಕುಡಿದು ಪಾಠ ಮಾಡುವ ಲೇಡಿ ಟೀಚರ್. ಈಕೆ ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಆದರೆ ಕಳೆದ 5 ವರ್ಷದಿಂದ ಮದ್ಯಪಾನ ವ್ಯಸನಕ್ಕೆ ದಾಸರಾಗಿದ್ದಾರೆ. ಮದ್ಯಪಾನ ಮಾಡಿಕೊಂಡು ಬಂದು ಮಾಠಮಾಡುತ್ತಾ ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯೋದು, ಸಹೋದ್ಯೋಗಿಗಳ ಜೊತೆ ಜಗಳ ಮಾಡುತಿದ್ದರು.
ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿತ್ತು. ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮರಿಗೆ ತಪ್ಪು ತಿದ್ದಿಕೊಳ್ಳುವಂತೆ ತಾಕೀತು ಮಾಡಿದ್ರು. ಆದರೆ ಗಂಗ ಲಕ್ಷ್ಮಮ್ಮ ತನ್ನ ಚಾಳಿ ಬದಲಿಸಲಿಲ್ಲ. ಇದರಿಂದ ಪೋಷಕರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ರು. ಈ ವೇಳೆ ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದ್ರು. ಶಿಕ್ಷಕಿಯ ಟೇಬಲ್ ನ ಡ್ರಾವರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ರು. ಸ್ವತಃ ಬಿಇಒ ಡ್ರಾವರ್ ಓಪನ್ ಮಾಡಲು ಹೋದಾಗ ಶಿಕ್ಷಕಿ ಪ್ರತಿರೋಧ ಒಡ್ಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೇಬಲನ್ನು ಹೊರಕ್ಕೆ ತಂದು ಡ್ರಾವರ್ ಬೀಗ ಮುರಿದಿದ್ದಾರೆ. ಆಗ ಡ್ರಾವರಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್ ಗಳು ಪತ್ತೆಯಾಗಿದೆ. ಮದ್ಯದ ಬಾಟಲ್ ಪತ್ತೆಯಾಗುತಿದ್ದಂತೆ ಕೊಠಡಿ ಬೀಗಹಾಕೊಂಡು ಗಂಗ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ಡ್ರಾಮಾ ಆಡಿದ್ಳು. ಬಳಿಕ ಪೊಲೀಸರು ಬಂದು ಮದ್ಯದ ಬಾಟಲನ್ನು ಸೀಜ್ ಮಾಡಿದ್ದಾರೆ. ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಚಿಕ್ಕಸಾರಂಗಿ ಶಾಲೆಯ ಮುಂದೆ ನಡೆದ ಹೈಡ್ರಾಮಾಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದರು.
ಘಟನೆಯನ ಸೂಕ್ಷ್ಮವಾಗಿ ಅರಿತಾ ಶಿಕ್ಷಣ ಇಲಾಖೆ ಮಧ್ಯಪಾನ ಮಾಡಿ ಪಾಠ ಮಾಡುತ್ತಿದ್ದ ಶಿಕ್ಷಕಿಯನ್ನು ಬಿಇಒ ಹನುಮಾನಯಕ್ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.