ಬೆಂಗಳೂರು : “ಇಲ್ಲಿ ಪ್ರತಿ ವರ್ಷ ವಿಭಿನ್ನವಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತೇವೆ. ಇಲ್ಲಿನ ಅಲಂಕಾರ ಕೂಡ ಅಷ್ಟೇ ವಿಭಿನ್ನವಾಗಿರುತ್ತದೆ. ಇದನ್ನು ನೋಡುವುದಕ್ಕೆಂದೇ ಸಾವಿರಾರು ಜನ ಸೇರುತ್ತಾರೆ. ಹಣ್ಣುಗಳನ್ನು ಬಳಸಿಕೊಂಡು ಮಾಡುವ ಈ ಅಲಂಕಾರ 3 ದಿನಗಳ ಕಾಲ ಇರುತ್ತದೆ. ಈ ಸಂಭ್ರಮ, ಸಡಗರವನ್ನು ಜನರು ಕೂಡ ಅಷ್ಟೇ ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಾರೆ. ಮೂರನೇ ದಿನ ಹಣ್ಣುಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಅಲಂಕಾರಕ್ಕೆ ಬಳಸಿದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕದೇ ಅದು ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗಬೇಕು ಎಂಬುದು ನಮ್ಮ ಮುಖ್ಯ ಉದ್ಧೇಶ” ಎಂದು ಗಣಪತಿಯ ವಿಶೇಷ ಅಲಂಕಾರ ಹಾಗೂ ಅದರ ಹಿಂದಿರುವ ಪರಿಸರ ಕಾಳಜಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ನ ಟ್ರಸ್ಟಿ ರಾಮ್ ಮೋಹನ ರಾಜ್.
ಜೆ.ಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ಬಾರಿ ಗಣೇಶ ಚತುರ್ಥಿಯ ಪ್ರಯುಕ್ತ 10 ಬಗೆಯ ಹಣ್ಣುಗಳು, ಮುಸುಕಿನ ಜೋಳ, ಸೊಪ್ಪುಗಳು ಹಾಗೂ ಹೂವುಗಳನ್ನು ಬಳಸಿಕೊಂಡು ಗಣೇಶನ ಮೂರ್ತಿಗೆ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿದ್ದು ಭಕ್ತರು ಈ ಸೊಬಗನ್ನು ಕಣ್ತುಂಬಿಸಿಕೊಂಡರು.
ಇಲ್ಲಿನ ವಿಶೇಷ ಅಲಂಕಾರದ ಕುರಿತು ಮಾತನಾಡಿದ ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ “ಈ ಬಾರಿ ಕರೋನಾ ಮಹಾಮಾರಿ ಕಡಿಮೆ ಆಗಿರುವ ನಿಟ್ಟಿನಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೇ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ಸೀಬೆಕಾಯಿ, ಕಲ್ಲಂಗಡಿ, ಡ್ರಾಗನ್ ಪ್ರೂಟ್, ದಾಳಿಂಬೆ, ಟೊಮ್ಯಾಟೋ, ಗಜ್ಜರಿ ಹೀಗೆ 10 ವಿವಿಧ ಹಣ್ಣುಗಳು, ಮುಸುಕಿನ ಜೋಳ, ನಾನಾ ಬಗೆಯ ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಂಡು ಅಲಂಕಾರ ಮಾಡಲಾಗಿದೆ. ಇಲ್ಲಿ ಪ್ರತಿ ವರ್ಷ ವಿಭಿನ್ನವಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತೇವೆ. ಇಲ್ಲಿನ ಅಲಂಕಾರ ಕೂಡ ಅಷ್ಟೇ ವಿಭಿನ್ನವಾಗಿರುತ್ತದೆ. ಇದನ್ನು ನೋಡುವುದಕ್ಕೆಂದೇ ಸಾವಿರಾರು ಜನ ಸೇರುತ್ತಾರೆ. ಹಣ್ಣುಗಳನ್ನು ಬಳಸಿಕೊಂಡು ಮಾಡುವ ಈ ಅಲಂಕಾರ 3 ದಿನಗಳ ಕಾಲ ಇರುತ್ತದೆ. ಈ ಸಂಭ್ರಮ, ಸಡಗರವನ್ನು ಜನರು ಕೂಡ ಅಷ್ಟೇ ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಾರೆ. ಮೂರನೇ ದಿನ ಹಣ್ಣುಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಅಲಂಕಾರಕ್ಕೆ ಬಳಸಿದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕದೇ ಅದು ಭಕ್ತರಿಗೆ ಪ್ರಸಾಧದ ರೂಪದಲ್ಲಿ ಸಿಗಬೇಕು ಎಂಬುದು ನಮ್ಮ ಮುಖ್ಯ ಉದ್ಧೇಶ” ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.
ಪ್ರತಿ ಬಾರಿಯೂ ವಿಶೇಷ ಅಲಂಕಾರ ಹಾಗೂ ವಿಶೇಷ ಸಾಮಗ್ರಿಗಳನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ದೇಶದ ಗಮನವನ್ನ ಸೆಳೆಯುತ್ತಿರುವ ಶ್ರೀ ಸತ್ಯ ಗಣಪತಿ ದೇವಸ್ಥಾನ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ 10 ಸಾವಿರ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಿರುವುದು ವಿಶೇಷವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ರಾಮ್ ಮೋಹನ್ ರಾಜ್, ಟ್ರಸ್ಟಿಗಳು
ಮೊ: 9845044434