ವೀರ ಸಾವರ್ಕರ್ ಫೋಟೋ ಹರಿದು ಹಾಕಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು

ತುಮಕೂರು: ಯಾರೋ ಕಿಡಿಗೇಡಿಗಳು ಶಿವಮೊಗ್ಗದಲ್ಲಿ ನಡೆದ ಘಟನೆಯಿಂದ ಪ್ರೇರಿತಗೊಂದು ಶಾಂತಿ ಸುವ್ಯವಸ್ಥೆಯಿಂದಿರುವ ತುಮಕೂರು ನಗರದಲ್ಲಿ  ವೀರ ಸಾವರ್ಕರ್​​ ಫೋಟೋ ಹರಿದು ಹಾಕಿರುವ ಘಟನೆ ನಡೆದಿದೆ.

ತುಮಕೂರು ನಗರದ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ಹಾಕಿರುವ ಫ್ಲೆಕ್ಸ್‌ ಗಳ ಒಂದರಲ್ಲಿ ವೀರಸಾವರ್ಕರ್‌ ಫೋಟೋ ಇರುವ ಫ್ಲೆಕ್ಸ್‌ ಬ್ಯಾನರ್‌ವನ್ನು ಹರಿದು ಹಾಕಿ ದುಷ್ಕೃತ್ಯ ಮೆರದಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ತುಮಕೂರು ನಗರದ ವಿವಿಧ ಭಾಗಗಳಲ್ಲಿ  ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್​ ಹಾಕಿಸಿದ್ದರು.

ಮೂರು ದಿನಗಳ ಹಿಂದೆ ಫ್ಲೆಕ್ಸ್​ ಹಾಕಲಾಗಿದ್ದು, ಸ್ವಾತಂತ್ರ್ಯ ದಿನೋತ್ಸವದ  ರಾತ್ರಿ ಕಿಡಿಗೇಡಿಗಳು ವೀರ ಸಾರ್ವಕರ್ ಭಾವಚಿತ್ರ ಇರುವ ಫ್ಲೆಕ್ಸ್​ ಅನ್ನು ಮಾತ್ರ ಹರಿದು ಹಾಕಿದ್ದಾರೆ. ತುಮಕೂರು ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆಯ ಸೂಕ್ಷ್ಮತೆಯನ್ನು ಅರಿತ ತುಮಕೂರು ಮಹಾನಗರ ಪಾಲಿಕೆ, ನಗರದಲ್ಲಿ ಅಳವಡಿಸಿದ್ದ ಎಲ್ಲಾ ಫ್ಲೆಕ್ಸ್‌ ಬ್ಯಾನರ್‌ಗಳನ್ನು ಕ್ಷಣಾರ್ಥದಲ್ಲಿ ತೆರವುಗೊಳಿಸುವಲ್ಲಿ ಯಶಸ್ವಿಯನ್ನೂ ಆಗಿರುವುದರಿಂದ, ಗಲಭೆಗೆ ಆಸ್ಪದವನ್ನು ನೀಡದಂತೆ ತಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!