ಮಠದ ಸ್ವಾಮೀಜಿಯೊಬ್ಬರು ಪತ್ರ ಬರೆದಿಟ್ಟು ಮಠ ಬಿಟ್ಟು ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಡೆದಿದೆ.
ಗದ್ದಿಗೆ ಮಠದ ಶಿವಮಹಾಂತ ಸ್ವಾಮಿ ಮಠದಲ್ಲಿ ಪತ್ರ ಬರೆದಿಟ್ಟು ಪತ್ರದಲ್ಲಿ ಉಲ್ಲೇಖಿಸಿ ನಾನು ಮತ್ತೆ ಕಾವಿ ತೂಡಲಾರೆ ನನಗೆ ಸನ್ಯಾಸತ್ವ ಜೀವನ ಬೇಡ ಎಂದು ತಿಳಿಸಿ ಸಹಿ ಮಾಡಿ ಪತ್ರ ಬರೆದಿಟ್ಟು ಹೋಗಿದ್ದಾರೆ.
ಈ ಸ್ವಾಮೀಜಿಗೆ ಎರಡು ವರ್ಷದ ಹಿಂದೆ 2020 ಜೂನ್ 15 ರಂದು ಸನ್ಯಾಸ ದೀಕ್ಷೆ ನೀಡಿ ಗದ್ದುಗೆ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಸನ್ಯಾಸತ್ವ ಬಳಿಕ ಶಿವಮಹಾಂತ ಸ್ವಾಮಿಗಳು ಸಿದ್ದಗಂಗಾ ಮಠದಲ್ಲಿ ದೀಕ್ಷೆಯ ಕಟ್ಟು ಪಾಡಿನ ನಿಯಮಗಳನ್ನು ಅಧ್ಯಯನ ಮಾಡುತ್ತಿದ್ದರು.
ಶಿವಮಹಂತ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಸಮಯದಲ್ಲಿ ಸೂಲೂರು ಹೋಬಳಿಯ ಕಂಬಾಳು ಗ್ರಾಮದಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆ ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಪ್ರೇಮ ಚಿಗುರಿತ್ತಂತೆ ಆ ಯುವತಿಗೆ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದೆ. ಅದೇ ಯುವತಿಯೊಂದಿಗೆ ಈ ಸ್ವಾಮೀಜಿ ಮಠ ಬಿಟ್ಟು ಪರಾರಿಯಾಗಿರಬಹುದು ಎಂಬ ಶಂಕೆ ವ್ಯಕ್ಯವಾಗಿದೆ.
ಕುದೂರು ಪೊಲೀಸ್ ಠಾಣೆ ಯಲ್ಲಿ ಯುವತಿಯ ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಹುಡುಕಿ ಕೊಡಿ ಎಂದು ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದಾರೆ.