ನಾನೆಂದು ಜನಗಳಿಗಾಗೇಯೇ ಎಂದು ತಮ್ಮ ಜೀವಿತಾವಧಿಯುದ್ದಕ್ಕೂ ಸಾಭೀತು ಮಾಡಿದ ಅಪ್ರತಿಮ ಜನಸೇವಕ ಡಿ.ಸಿ ಗೌರಿಶಂಕರ್

 

ಈ ಬಾರಿ ಮಳೆಯ ತೀವ್ರತೆಗೆ ಬುಗುಡನಹಳ್ಳಿ ಕೆರೆ ತುಂಬಿ 300 ಎಕರೆಗೂ ಹೆಚ್ಚು ಜಮೀನಿನ ಬೆಳೆ ಹಾನಿಯಾಗಿದ್ದು, 70 ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿ ಹಕ್ಕಪಕ್ಕದ ಗ್ರಾಮಗಳಾದ ನರಸಾಪುರ ಇನ್ನೂ ಹಲವಾರು ಹಳ್ಳಿಗಳ ರೈತಾಪಿ ಬಂಧುಗಳಿಗೆ ಭಾರಿ ತೊಂದರೆಯಾದ ಹಿನ್ನೆಲೆಯಲ್ಲಿ ಶಾಸಕರೇ ಮೊನ್ನೆ ಖುದ್ದು ಸ್ಥಳಕ್ಕೆ ಅಧಿಕಾರಿಗಳ ಸಮೇತ ಭೇಟಿ ನೀಡಿ, ಸಭೆ ಕರೆದು ತ್ವರಿತವಾಗಿ ಕೆರೆಯಿಂದ ನೀರೆತ್ತುವಂತೆ ಆದೇಶ ನೀಡಿದ್ದರು.


ತುಮಕೂರು ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಗೆ ಸೇರುವ ಬುಗುಡನಹಳ್ಳಿ ಕೆರೆ ನೀರನ್ನು ಅಕ್ಕಪಕ್ಕದ ಹಳ್ಳಿಯ ರೈತಾಪಿ ವರ್ಗ ಬಳಸಲು ಸಾಧ್ಯವಾಗದ ರೀತಿ ನಗರ ಪ್ರದೇಶಕ್ಕೆ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತಿತ್ತು..

ಶಾಸಕರು ಹಲವು ಬಾರಿ ತನ್ನ ಕ್ಷೇತ್ರದ ಜನತೆಯ ಹಿತಕ್ಕಿಲ್ಲದ ನೀರು ನಗರಕ್ಕೆ ನೀಡುವುದು ಯಾವ ರೀತಿಯ ನ್ಯಾಯ ಎಂದು ಹಲವು ಬಾರಿ ಪ್ರಶ್ನೆ ಎತ್ತಿದರೂ, ಸರ್ಕಾರ ನಿರ್ಲಕ್ಷ್ಯ ತೋರುತ್ತಿತ್ತು ಅಧಿಕಾರಿಗಳು ಸೋಗಲಾಡಿಗಳಾಗಿ ಉತ್ತರಿಸಲು ತತ್ತರಿಸುತ್ತಿದ್ದರು..


ಏನಾದೇರೆನೆಂದು ನನ್ನ ಜನಗಳ ಹಿತವೇ ಮುಖ್ಯ ಎಂದು ಭಾವಿಸಿದ ಧಣಿವರಿಯದ ಧಣಿ ಇಂದು ಸ್ವತಃ ಖುದ್ದು ಶಾಸಕರೇ 40 ವರ್ಷದ ಇತಿಹಾಸದಲ್ಲಿ ಬುಗುಡನಹಳ್ಳಿ ಕೆರೆಯ ಗೇಟ್ ತೆರೆಯದೇ ರೈತರನ್ನು ವಂಚಿಸಿದ್ದ ದುಷ್ಟ ವ್ಯವಸ್ಥೆಯ ನಡೆಯನ್ನು ಖಂಡಿಸಿ, ರೈತರ ಬದುಕು ಹಸನಾಗಲಿ ಎಂದು ರೈತರ ಪರ ನಿಂತು ಕೆರೆ ಗೇಟ್ ತೆಗೆದು ಇತಿಹಾಸ ಸೃಷ್ಟಿಸಿದ್ದಾರೆ..

40 ವರ್ಷ ಇತಿಹಾಸದಲ್ಲಿ ತುಮಕೂರು ಜಿಲ್ಲೆಯ ಯಾವೊಬ್ಬ ಮಂತ್ರಿ ಮಹೋದಯರು, ಶಾಸಕರು, ಜನಪ್ರತಿನಿಧಿಗಳು ಕೈಕಟ್ಟಿ ಕುಳಿತ ರಾಜಕಾರಣಿಗಳು & ಅಧಿತಾರಿಗಳಿಗೆ ಮಾದರಿಯಾಗಿ ನಿಂತು ಜನಗಳ ಹಿತಕ್ಕಾಗಿ, ರೈತರ ಹಿತಕ್ಕಾಗಿ ಪೂರ್ವಪರ ಯೋಚಿಸದೆ ದಿಟ್ಟ ನಿರ್ಧಾರ ತಗೆದುಕೊಂಡ ಧೀಮಂತ ನಾಯಕರಿಗೆ ಬಗುಡನಹಳ್ಳಿ ಕೆರೆ ಹಚ್ಚುಕಟ್ಟು ಪ್ರದೇಶದ ರೈತರು ಮುಕ್ತ ಕಂಠದಿಂದ ನಿಟ್ಟುಸಿರು ಬಿಟ್ಟು ಶಾಸಕರನ್ನು ಆಶಿರ್ವದಿಸಿದ್ದಾರೆ..

ಈ ಸಂಧರ್ಬ ಹೇಗಿದೆ ಎಂದರೆ ಜಗಜ್ಯೊತಿ ಬಸವೇಶ್ವರರೇ ಹೇಳಿದ ಕೆಳಕಂಡ ವಚನವನ್ನು ಯತಾವತ್ತಾಗಿ ಪಾಲಿಸಿದಾತ ಈ ಜನನಾಯಕರಲ್ಲವೇ..?

ಕೃಷಿ ಕೃತ್ಯ ಕಾಯಕ ಮಾಡುವ ಸದ್ಬಕ್ತನ ಪಾದವ ತೋರಿಸಯ್ಯಾ,
ಆತನ ತನು ಶುದ್ದ, ಆತನ ಮನ ಶುದ್ದ, ಆತನ ಮನೆ ಹೊಕ್ಕು ಗುರು ಪಾದ ಪೂಜೆ ಮಾಡಿದರೇ ಗುರು ಪಾವನ ನೋಡಾ ಕೂಡಲ ಸಂಗಮದೇವಾ।। ಎಂದು

ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟ ಪಾದ ರೈತನ ಪಾದ, ರೈತನ ಪಾದ ಪೂಜಿಸಿದರೇ ಗುರುವೇ ಪಾವನನಾಗುತ್ತಾನೆಂದ ಬಸವಣ್ಣ.
ಇಂದು ಅಂತ ರೈತ ಪಾದಗಳಿಗೆ ವಿನಮ್ರವಾಗಿ ಅವರ ಹಿತಕ್ಕಾಗಿ ನಿಂತ ಈ ಶಾಸಕರ ಸಾಧನೆ ಶ್ರೇಷ್ಚವಲ್ಲವೇ..?

ನಮ್ಮ ಶಾಸಕ ನಮ್ಮ ಹೆಮ್ಮೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಜನ ನಿಜಕ್ಕೂ ಅಕ್ಷರ ಸಹಃ ಪುಣ್ಯವಂತರೇ..

Leave a Reply

Your email address will not be published. Required fields are marked *

error: Content is protected !!