ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ

ಭೀಮಸಂದ್ರ: ಭೀಮಸಂದ್ರ ಅಮಾನಿಕೆರೆಯ ಏರಿ ಬಿರುಕು ಬಿಟ್ಟರೆ ಓಡೆದು ಹೋಗುವ ಸಂಭವವಿದೆ ಎಂದು ತಿಳಿದ ತಕ್ಷಣ ಸ್ಥಳ ಪರಿಶೀಲನೆಯನ್ನು ಅಧಿಕಾರಿಗಳೊಂದಿಗೆ ನಡೆಸಿದ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ. ಭೀಮಸಂದ್ರ ಕೆರೆ ಒಳಹರಿವು ಹೆಚ್ಚಾಗಿದ್ದು, ಕೆರೆ ಕೋಡಿ ಬಿದ್ದಿದ್ದು, ಸರಿ ಸುಮಾರು ೬೦೦ ಕ್ಯೂಸೆಕ್‌ನಷ್ಟು ನೀರು ಹೊರ ಹರಿದಿದ್ದು, ಯಾರು ಸಹ ಅತಂಕ ಪಡುವ ಅಗತ್ಯವಿಲ್ಲ ಕೆರೆಯ ಕೋಡಿ ಬಾಯಿಯ ಸುತ್ತ ಬೆಳೆದಿರುವ ಗಿಡಗೆಂಟೆಗಳನ್ನು ಸ್ವಚ್ಛ ಮಾಡಲು ಹಾಗೂ ನಿರಂತರವಾಗಿ ಅಧಿಕಾರಿಗಳು ಕೆರೆ ಏರಿಯ ಸ್ಥಿತಿಯನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಉಪಾಧ್ಯಕ್ಷರಾದ ಹನುಮಂತರಾಯಪ್ಪ, ಪಾಲಿಕೆ ನಾಮಿನಿ ಸದಸ್ಯರಾದ ತ್ಯಾಗರಾಜಸ್ವಾಮಿ, ಮುಖಂಡರಾದ ಮನೋಹರ್‌ಗೌಡ, ಶರತ್, ವಿಜಯ್, ಮುರುಳಿ, ದೊಡ್ಡಯ್ಯ, ಬಾಲರಾಜು ಹಾಗೂ ಹೇಮಾವತಿ ನಾಲಾ ವಿಭಾಗದ ಅಧಿಕಾರಿಗಳು ಮತ್ತಿತ್ತರರು ಇದ್ದರು.


ಗಾರೆನರಸಯ್ಯನ ಕಟ್ಟೆ: ಗಾರೆನರಸಯ್ಯನ ಕಟ್ಟೆಯ ರಾಜಗಾಲುವೆ ಪಕ್ಕ ಮುಖ್ಯರಸ್ತೆಯು ಭಾರಿ ಮಳೆಯಿಂದಾಗಿ ಕುಸಿದಿದ್ದು, ಸರಿ ಸುಮಾರು 15 ಅಡಿಗಳಷ್ಟು ಕುಸಿತವಾಗಿದೆ. ವಿಷಯ ತಿಳಿದ ತಕ್ಷಣ ಶಾಸಕರು ಪಾಲಿಕೆ ಸದಸ್ಯರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮಹಾನಗರಪಾಲಿಕೆ ಆಯುಕ್ತರಿಗೆ ಮರಳು ಮೂಟೆಯನ್ನು ಹಳ್ಳಕ್ಕೆ ತುಂಬಿಸಿ ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಾರೆನರಸಯ್ಯನ ಕಟ್ಟೆಯು ಕೋಡಿಯಾಗಲು 7 ರಿಂದ 8 ಅಡಿಗಳಷ್ಟು ಬಾಕಿ ಇದ್ದು, ಕೋಡಿಯ ಜಾಗಕ್ಕೆ ಶಾಸಕರು ಪಾಲಿಕೆ ಸದಸ್ಯರೊಂದಿಗೆ ಭೇಟಿ ನೀಡಿ ಕೆರೆಯ ಸ್ಥಿಗತಿಯನ್ನು ತಿಳಿದುಕೊಂಡರು. ಕೋಡಿಯಾದ ನಂತರ ನೀರಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೋಡಿಯ ಕಾಲುವೆಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಮರಳೂರು ಕೆರೆ ಸೇರಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ವಿಷ್ಣುವರ್ಧನ, ಮುಖಂಡರಾದ ದೇವರಾಜು, ನಾಗೇಶ್ ಮುಂತಾದವರು ಇದ್ದರು.


ರೈಲ್ವೆ ಅಂಡರ್‌ಪಾಸ್ (ರಿಂಗ್ ರಸ್ತೆಯ ಬಳಿ): ಮೊನ್ನೆ ಮಳೆಯಿಂದಾಗಿ ಆಟೋ ಚಾಲಕ ಅನ್ಸರ್ ಅಹಮದ್ ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮತ್ತೊಮ್ಮೆ ಇಂತಹ ಅವಘಡಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಹಾಗೂ ತಕ್ಷಣವೇ ಕಬ್ಬಿಣದ ತಡೆಗೋಡೆ ನಿರ್ಮಾಣಕ್ಕೆ ಕೆಲಸ ಪ್ರಾರಂಭಿಸಲಾಯಿತು.


ತುಮಕೂರು ನಗರದ ಪಿ.ಹೆಚ್.ಕಾಲೋನಿಯ 7ನೇ ಕ್ರಾಸ್‌ನ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಬಳಿ ಭಾರಿ ಮಳೆಯಿಂದಾಗಿ ಮನೆಯು ಸಂಪೂರ್ಣ ಕುಸಿತಗೊಂಡಿದ್ದು, ಇಲ್ಲಿಗೆ ಶಾಸಕರು ಭೇಟಿ ನೀಡಿ, ಸ್ಥಳೀಯ ಕಂದಾಯಾಧಿಕಾರಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಶೀಘ್ರವಾಗಿ ಪರಿಹಾರ ಧನವನ್ನು ನೀಡುವಂತೆ ಸೂಚನೆ ನೀಡಿದರು ಹಾಗೂ 1450 ನಿರ್ಮಾಣವಾಗುತ್ತಿರುವ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆಯಲ್ಲಿ ಮುಖಂಡರಾದ ಉಬೇದ್‌ಉಲ್ಲಾ ರವರು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!