ತುಮಕೂರು_ಪ್ರವೀಣ್ ನೆಟ್ಟರು ಹತ್ಯೆ ಸಂಬಂಧ ತುಮಕೂರಿನಲ್ಲಿ ಹಿಂದೂಪರ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕಡೂರಿನ ಕಾಳಿ ಸ್ವಾಮಿ(ರಿಷಿಕುಮಾರ ಸ್ವಾಮಿ) ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಇನ್ನು ದೂರು ದಾಖಲಾದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದ
ತುಮಕೂರಿನ ಪಿಯುಸಿಎಲ್ ಮುಖಂಡರಾದ ಕೆಂಪರಾಜು ಎನ್ನುವವರು ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಷಿ ಕುಮಾರ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು.
ಸಮಾಜದ ಶಾಂತಿ ಭಂಗ ಆಗುವ ಹೇಳಿಕೆಗಳನ್ನು ನೀಡಿದ್ದು ರಾಜ್ಯದ ಮುಖ್ಯಮಂತ್ರಿಗಳು ಗೃಹ ಸಚಿವರು ಹಾಗೂ ಇತರೆ ನಾಯಕರ ಜೀವಹತ್ಯೆ , ಸುರತ್ಕಲ್ ಯುವಕ ಫಾಸಿಲ್ ಹತ್ಯೆ ಮಾಡಿದವರು ಹಿಂದೂ ಯುವಕರಾದರೆ ಅವರನ್ನು ಅಭಿನಂದಿಸುತ್ತೇನೆ ಹಾಗೂ ಇನ್ನೂ 9 ತಲೆಗಳು ಬೇಕು ಹಾಗೂ ಸಂವಿಧಾನ ವಿರೋಧಿಗಳು ಹೇಳಿಕೆಗಳನ್ನ ನೀಡುವ ಮೂಲಕ ಮಾಡುವ ಸಮಾಜದ ಶಾಂತಿ ಭಂಗ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಶನಿವಾರ ತುಮಕೂರಿನ ಪ್ರಗತಿಪರ ವೇದಿಕೆ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರು.
ತುಮಕೂರು ಪಿ ಯು ಸಿ ಎಲ್ ಮುಖಂಡ ಕೆಂಪರಜುರವರು ನೀಡಿದ ದೂರಿನ ಹಿನ್ನಲೆಯಲ್ಲಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ 157 ಸೆಕ್ಷನ್ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.