ಪಾವಗಡ : ತುಮಕೂರು ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲ್ಲೂಕು ಎಂಬ ಪಟ್ಟ ಕಟ್ಟಿಕೊಂಡಿರುವ ಪಾವಗಡ ಪಟ್ಟಣ ಹಾಗೂ ತಾಲ್ಲೂಕು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಪಾವಗಡ ತಾಲ್ಲೂಕು ಅತೀ ಬರಪೀಡಿತ ಪ್ರದೇಶವಾಗಿದ್ದು ಇಂತಹ ಪ್ರದೇಶದಲ್ಲಿರುವ ರೈತರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಪಕ್ಕದ ಆಂಧ್ರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ವಲಸೆ ಹೋಗಿ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ .
ಇಂತಹ ಬರಪೀಡಿತ ತಾಲೂಕು ಎಂದು ಕರೆಸಿಕೊಳ್ಳುವ ಪಾವಗಡ ಪಟ್ಟಣದಲ್ಲಿ ಹಲವಾರು ಮೂಲಭೂತ ಸೌಕರ್ಯಗಳು ಎದ್ದು ಕಾಡುತ್ತಿದೆ.
ಇನ್ನು ಪಾವಗಡ ಪಟ್ಟಣದಲ್ಲಿ ಸರಿಯಾದ ರಸ್ತೆ, ನೀರು ,ಚರಂಡಿ ,ಕುಡಿಯುವ ನೀರು ,ಬೀದಿ ದೀಪ ಸೇರಿದಂತೆ ಹಲವಾರು ಸಮಸ್ಯೆಗಳ ಆಗರವೇ ಇದ್ದು ಅವುಗಳನ್ನ ಬಗೆಹರಿಸಬೇಕಾದ ಪುರಸಭಾ ಸದಸ್ಯರು ಪ್ರವಾಸದ ಹೆಸರಿನಲ್ಲಿ ಮೋಜು ಮಸ್ತಿಗೆ ಮೊರೆ ಹೋಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಪಾವಗಡ ಪುರಸಭಾ ಸದಸ್ಯರ ಮೋಜು ಮಸ್ತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪುರಸಭಾ ಸದಸ್ಯರು ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ಪಾವಗಡ ಪಟ್ಟಣದ ಬಜರಂಗದಳದ ಮುಖಂಡ ರಾಮಾಂಜಿನಿ ಸೇರಿದಂತೆ ಹಲವು ಸಾರ್ವಜನಿಕರು ಪುರಸಭಾ ಸದಸ್ಯರ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.