ಹಾಸ್ಟಲ್‌ ವಿದ್ಯಾಭ್ಯಾಸಕ್ಕೆ ಬೇಸತ್ತು ಯುವಕ ನೇಣಿಗೆ ಶರಣು !

ತುಮಕೂರು_ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಗದೆ ಮನನೊಂದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

 

ತುಮಕೂರು ನಗರದ ಸದಾಶಿವ ನಗರದಲ್ಲಿ ವಾಸವಾಗಿರುವ ಮಂಜೇಶ್ ಎಂಬುವವರ ಮಗ ಶಿರಾ ನಗರದ ಪ್ರತಿಷ್ಠಿತ ಖಾಸಗಿ ಪಿಯು ವಸತಿ ಕಾಲೇಜಿಗೆ ದಾಖಲಾಗಿದ್ದು ತನಗೆ ವಿದ್ಯಾಭ್ಯಾಸ ಮುಂದುವರಿಸಲು ಆಗದೆ ರಜೆ ನಿಮಿತ್ ಮನೆಗೆ ಮರಳಿದ್ದ, ಆ ವಿಚಾರವನ್ನೂ ತನ್ನ ಪೋಷಕರಿಗೆ ತಿಳಿಸಿದ್ದ ಎನ್ನಲಾಗಿದೆ, ಪೋಷಕರು ಮರಳಿ ವಸತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಂತೆ ತಿಳಿಸಿದ್ದರು ಎನ್ನಲಾಗಿದೆ, ಆದರೂ ಅವರ ಮಾತನ್ನು ಕೇಳದೇ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.


ಇನ್ನು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಜಿಷ್ನು (16) ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಹಾಕಿಕೊಂಡು ಸೋಮವಾರ ಸಂಜೆ 4:30ರ ಸರಿಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.

ಇನ್ನು ಘಟನೆ ಸಂಬಂದಿಸಿದಂತೆ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!