ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ / ನೌಕರರಿಗೆ ಸಂಬಳ ಸಾಲುತ್ತಿಲ್ಲವೇ?

ತುಮಕೂರು ಜಿಲ್ಲೆಗೆ ಇತ್ತೀಚೆಗೆ ಅತ್ಯಂತ ಮಹತ್ತರವಾದ ಬಿರುದನ್ನು ಕರ್ನಾಟಕ ಸರ್ಕಾರ ನೀಡಿದೆ ಅದುವೇ ʼಕಾಯಕಲ್ಪʼ ಜಿಲ್ಲಾಸ್ಪತ್ರೆ, ಆದರೆ ಇಲ್ಲಿ ಕಾರ್ಯನಿರ್ವಹಿಸುವ ಹಲವಾರು ಸಿಬ್ಬಂದಿ / ನೌಕರರಿಗೆ ಆ ಬಿರುದು ಇರುವುದೇ ಅರಿವಿಲ್ಲವೇನೋ ಎಂಬಂತಿದೆ.

ತುಮಕೂರು ಜಿಲ್ಲಾ ಆಸ್ಪತ್ರೆಯ ಕೆಲ ಸಿಬ್ಬಂದಿ / ನೌಕರರಿಗೆ ಸರ್ಕಾರ ನೀಡುತ್ತಿರುವ ಸೌಲತ್ತುಗಳು, ಸಂಬಳ, ಭತ್ಯೆ, ಇತ್ಯಾದಿ ಸಾಲುತ್ತಿಲ್ಲವೇನೋ ಪಾಪ!!!! ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರು ಬಹುತೇಕರು ಅಮಾಯಕರು, ಬಡಜನರು ಹಾಗೂ ರೈತಾಪಿ ವರ್ಗದವರು, ಆದರೆ ಇಲ್ಲಿನ ನೌಕರರು / ಸಿಬ್ಬಂದಿಗಳಿಗೆ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುವ ಜನರೇ ಅವರುಗಳಿಗೆ ಬಂಡವಾಳಷಾಯಿಗಳು ಎಂಬಂತೆ ವರ್ತಿಸುತ್ತಿದ್ದಾರೆ.

ಇದು ಕಹಿಯಾದ ಸತ್ಯ ಸಂಗತಿ ಏಕೆಂದರೆ, ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುವವರಿಂದ ಚಿಕಿತ್ಸೆಗಿಷ್ಟೆಂದು ಒಪ್ಪಂದ ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವುದು ಇದೀಗ ಬಯಲಾಗಿದೆ, ಇದು ಹಲವಾರು ವರ್ಷಗಳಿಂದ ಬೇರೂರಿದ್ದರೂ ಸಹ ಹೊರಗಡೆಗೆ ಈ ವಿಷಯ ಆಚೆ ಬಾರದಂತೆ ಜಾಗರೂಕತರಾಗಿದ್ದರು ಎನ್ನಲಾಗಿದೆ. ಏಕೆಂದರೆ ಇಲ್ಲಿಗೆ ಚಿಕಿತ್ಸೆಗೆ ಅಗಮಿಸುವ ಜನರು ಖಾಸಗಿ ಆಸ್ಪತ್ರೆಗೆ ಹೋಲಿಸಿದರೆ ಇಲ್ಲಿ ಶೇ.50 ರಷ್ಟು ಕಡಿಮೆಯಾಗುತ್ತದೆಂದು ತಿಳಿದು ಇಂತಿಷ್ಟು ಹಣವನ್ನು ನೀಡಿ ಗುಣಮುಖರಾದವರೇ ಹೆಚ್ಚು, ಇನ್ನೂ ಕೆಲವರು ಸದ್ಯ ತಾವು ಗುಣಮುಖರಾದರೇ ನಮಗ್ಯಾಕೇ, ಅಲ್ಪ ಸ್ವಲ್ಪ ಹಣ ನೀಡಿ ಬಂದಿದ್ದೇವೆಲ್ವಾ ಎಂದುಕೊಂಡು ಸುಮ್ಮನಾಗಿದ್ದಾರೆ.

ಇನ್ನು ಶಸ್ತ್ರಚಿಕಿತ್ಸಾ ಕೇಂದ್ರದ ಸಿಬ್ಬಂದಿಗಳಂತೂ ಶ್ರೀಮಂತರಾಗುವ ಸನ್ನಿಹ ತುಂಬಾ ಹತ್ತಿರದಲ್ಲಿದೆ ಎಂದರೆ ನೀವೇ ಅರಿತುಕೊಳ್ಳಬಹುದು, ಅಲ್ಲಿ ಇನ್ನೇಷ್ಟು ಪೀಕುತ್ತಾರೆಂಬುದನ್ನು. ಉದಾ. ಒಂದು ಹೆರಿಗೆ ಕನಿಷ್ಠ ಹತ್ತ ರಿಂದ ಇಪ್ಪತ್ತು ಸಾವಿರದವರೆಗೆ ನಡೆಯುತ್ತಿದೆ ಎಂದರೆ ನೀವೇ ಊಹಿಸಿಕೊಳ್ಳಿ, ಬೇರೆ ಶಸ್ತ್ರಚಿಕಿತ್ಸೆಗಳಲ್ಲಿ ಇನ್ನೆಷ್ಟು ಲೂಟಿ ಮಾಡುತ್ತಿದ್ದಾರೆಂಬುದನ್ನು. ಪಾಪ ಜನರು ಅದೇ ಹೆರಿಗೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿದರೆ ಮುವತ್ತರಿಂದ ಐವತ್ತು ಸಾವಿರ ಅಗುತ್ತದೆ, ಅದರ ಬದಲಿಗೆ ಇಲ್ಲಿ ಕೊಂಚ ಕಡಿಮೆ ಎಂದು ಭಾವಿಸಿ ಇಲ್ಲಿಗೆ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಇಷ್ಟೆಲ್ಲಾ ಸಾಲದು ಎಂಬಂತೆ ಔಷದಿಗಳ ವಿಚಾರದಲ್ಲೂ ಸಹ ಬ್ರಹ್ಮಾಂಡ ಬ್ರಷ್ಟಾಚಾರ ನಡೆಯುತ್ತಿದೆ, ಹೇಗೆಂದರೆ ಒಬ್ಬ ವೈದ್ಯರು ಬರೆದುಕೊಡುವ ಔಷದಿ ಚೀಟಿಯಲ್ಲಿ ಶೇ.50 ರಷ್ಟು ಮಾತ್ರ ಉಚಿತ ವಿತರಣೆ, ಇನ್ನುಳಿಕೆ ಹೊರಗಡೆ ಇರುವ ಆಯ್ದ ಔಷದಿ ಅಂಗಡಿಗಳಲ್ಲಿ ಮಾತ್ರ ದೊರೆಯುತ್ತಿದೆ ಎಂದರೆ ಯೋಚನೆ ಮಾಡಿ ನೋಡಿ, ಅದನ್ನು ಕೇಳಿದರೆ ಸ್ಟಾಕ್ ಇಲ್ಲ, ಇದು ಸರ್ಕಾರಿ ಔಷದಿಗಿಂತ ಹೆಚ್ಚು ಪ್ರಬಲದಾಯಕ ಔಷದಿ ಎಂದು ಹೇಳಿ ತಿಪ್ಪೇ ಸಾರಿಸುವ ಉತ್ತರ ಇಲ್ಲಿನವರಿಂದ ಬರುತ್ತಿದೆ.

ಇನ್ನಷ್ಟು ಸ್ಪೋಟಕ ಮಾಹಿತಿ, ದೃಶ್ಯಾವಳಿ ಸಮೇತ ನಿಮ್ಮ ಮುಂದೆ ಶೀಘ್ರವೇ ನಿಮ್ಮ ಕೈ ಸೇರಲಿದ್ದು, ಸತ್ಯ ಸಂಗತಿಗಳು ನಿಮ್ಮ ಕಣ್ಣೇದುರಿಗೆ ಬರಲಿದೆ. ಈ ಮೂಲಕ ತುಮಕೂರು ಜಿಲ್ಲಾ ಆಸ್ಪತ್ರೆಗೆ ಮೇಜರ್ ಸರ್ಜರಿ ಅವಶ್ಯಕವಾಗಿದೆ!!!

ವಿಡಿಯೋ ಮತ್ತು ಚಿತ್ರ ಸುದ್ಗಿ ಅತೀ ಶೀಘ್ರದಲ್ಲಿಯೇ ನಿಮ್ಮ ಕೈಸೇರಲಿದೆ.

Leave a Reply

Your email address will not be published. Required fields are marked *

error: Content is protected !!