ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪರಿಸರಕ್ಕಾಗಿ ನಾವು ಎಂಬ ಅಭಿಯಾನ

ಪರಿಸರ ದಿನಾಚರಣೆಯ ಎಂದರೆ ಕೇವಲ ಸಸಿಗಳನ್ನು ನೆಟ್ಟು ಸುಮ್ಮನಾಗುವುದಲ್ಲಾ, ಬದಲಿಗೆ ನೆಟ್ಟ ಸಸಿಗಳನ್ನು ನಿರಂತರವಾಗಿ ಕುಟುಂಬದಂತೆ ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. 1990 ರ ದಶಕದಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ (ಈ ಹಿಂದಿನ ಸರ್ಕಾರಿ ಕಾಲೇಜು) ಗಿಡಗಳನ್ನು ನೆಟ್ಟು ಪೋಷಿಸಿರುತ್ತೇವೆ. ಸದರಿ ಸಸಿಗಳು ಇಂದು ತುಮಕೂರು ನಗರದ ಹೃದಯಭಾಗದಲ್ಲಿ ವನಮಹೋತ್ಸವದಂತೆ ಅಭಿವೃಧ್ದಿಯಾಗಿವೆ.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ -ಪರಿಸರಕ್ಕಾಗಿ ನಾವು ಎಂಬ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಲೆಕ್ಕಪರಿಶೋಧನಾಧಿಕಾರಿಗಳು ಹಾಗೂ ಹಿರಿಯ ನಾಗರೀಕರಾದ ಶ್ರೀ ಪೌಳಿ ಶಂಕರಾನಂದಪ್ಪ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರನ ಹೊಣೆ ಎಂಬ ಸಂದೇಶದೊಂದಿಗೆ ಪ್ರತೀ ವಿದ್ಯಾರ್ಥಿಗೆ ಪರಿಸರ ಬಗ್ಗೆ ಒಲವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಕರಿಯಣ್ಣ ಬಿ ರವರು ಮಾತನಾಡಿ ಪರಿಸರ ಸಂರಕ್ಷಣೆಗೆ ಶ್ರೀ ಪೌಳಿ ಶಂಕರಾನಂದಪ್ಪರವರ ಕೊಡುಗೆಯನ್ನು ಶ್ಲಾಘಿಸಿ, ಒಬ್ಬ ವ್ಯಕ್ತಿ ನೂರಾರು ಮರಗಳನ್ನು ಬೆಳೆಸಿ ಸಂರಕ್ಷಿಸುವುದಾದರೆ, ಕಾಲೇಜಿನ ಪ್ರತೀ ವಿದ್ಯಾರ್ಥಿಯು ದೃಢಸಂಕಲ್ಪ ಮಾಡಿದರೇ ಅಭಯಾರಣ್ಯವನ್ನೇ ಸೃಷ್ಠಿಸಬಹುದೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಸದರಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ವಿ.ವಿ. ಕಲಾ ಕಾಲೇಜಿನ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು ಹಾಗೂ ಶ್ರೀ ಪೌಳಿ ಶಂಕರಾನಂದಪ್ಪ ರವರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಲಾ ಕಾಲೇಜಿನ ಎಲ್ಲಾ ಅಧ್ಯಾಪಕರು, ಉಪ ಪ್ರಾಂಶುಪಾಲರಾದ ಶ್ರೀ ಹರಿಪ್ರಸಾದ್ ಟಿ.ಎನ್ ಹಾಗೂ ವಿದ್ಯಾರ್ಥಿಗಳು ಭಾವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!