ತುಮಕೂರು: ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದ ಎನ್.ಎಸ್.ಯು.ಐ ಕಾರ್ಯಕರ್ತರನ್ನು ಬಂಧಿಸಿ ಇಲ್ಲಸಲ್ಲದ ಕೇಸ್ ಹಾಕಿ ಈ ಯುವಕರ ಭವಿಷ್ಯ ಹಾಳು ಮಾಡುತ್ತಿರುವುದು ವಿಷಾದನೀಯವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪು ರವರಿಗೆ ಅವಮಾನಿಸಿದ್ದಾರೆ ಎಂಬ ವಿಚಾರಕ್ಕೆ ಶಿಕ್ಷಣ ಸಚಿವರ ಮನೆಮುಂದೆ ಧರಣಿ ನಡೆಸಿರುವ ಯುವಕರದ್ದು ಯಾವುದೇ ದುರುದ್ದೇಶ ಇರಲಿಲ್ಲ. ಕುವೆಂಪು ಮೇಲಿನ ಅಭಿಮಾನಕ್ಕೆ ಪ್ರತಿಭಟನೆ ಮಾಡಿರುವುದೇ ವಿನಹ ಇನ್ಯಾವ ದುರುದ್ದೇಶದಿಂದಲ್ಲ. ಸರ್ಕಾರವು ಕೆಲವೊಂದು ವಿಚಾರಗಳಲ್ಲಿ ಏಕಾಏಕಿ ಅನೈತಿಕ ಬದಲಾವಣೆಗಳನ್ನು ತಂದಾಗ ಅದರ ವಿರುದ್ದ ಪ್ರತಿಭಟನೆ ಮಾಡುವುದು ಸಹಜ. ಪ್ರತಿಭಟನೆ ನಮ್ಮೆಲ್ಲರ ಸಂವಿಧಾನಬದ್ದ ಹಕ್ಕು ಎಂದು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಅಭಿವ್ಯಕ್ತಗೊಳಿಸಿದ್ದಾರೆ.
ಕೆಲವೊಮ್ಮೆ ಪ್ರತಿಭಟ
ಪ್ರತಿಭಟನೆ ಮುಗಿದ ಕೆಲವೇ ಕ್ಷಣದಲ್ಲಿ ಇದೇ ಎನ್.ಎಸ್.ಯು.ಐ ಯುವಕರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ ನೈತಿಕ ಪೋಲಿಸ್ ಗಿರಿ ಮೆರೆದಿದ್ದಾರೆ. ಆದರೆ ನೈತಿಕ ಪೋಲಿಸ್ ಗಿರಿ ಮಾಡಿರುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವ ಬದಲಾಗಿ ಎನ್.ಎಸ್.ಯು.ಐ ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಇಲ್ಲಸಲ್ಲದ ಕೇಸ್ ಹಾಕಿರುವುದು ಖಂಡನೀಯ. ಕೂಡಲೇ ಎನ್.ಎಸ್.ಯು.ಐ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಡಾ.ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.