ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ’ವಿಶ್ವ ತಂಬಾಕು ರಹಿತ ದಿನಾಚರಣೆ’

 

ತುಮಕೂರು : ತಂಬಾಕು ಬಳಕೆಯ ಅಪಾಯಗಳ ಕುರಿತು ಜನಜಾಗೃತಿ ಮತ್ತು ತಂಬಾಕು ಬಳಕೆಯ ವಿರುದ್ಧ ಹೋರಾಡಲು ಸಾರ್ವಜನಿಕರಿಗೆ, ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ತಂಬಾಕು ಮುಕ್ತ ಸಮಾಜದ ನಿರ್ಮಾಣ ಮಾಡಬೇಕು ಎಂದು ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಸುಶೀಲ್ ಚಂದ್ರ ಮಹಾಪಾತ್ರ ಅವರು ಕರೆ ನೀಡಿದರು.


ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ಯಾರ ಮೆಡಿಕಲ್ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ’ವಿಶ್ವ ತಂಬಾಕು ರಹಿತ ದಿನ’ವನ್ನು ಪ್ರಾಂಶುಪಾಲರಾದ ಡಾ.ಸುಶೀಲ ಚಂದ್ರ ಮಹಾಪಾತ್ರ ಉದ್ಘಾಟಿಸಿ ಮಾತನಾಡಿದರು.
ಮೇ ೩೧ ವಿಶ್ವ ’ತಂಬಾಕು ರಹಿತ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ತಂಬಾಕು ಸೇವನೆಯು ಮನು?ನ ಮೇಲೆ ಉಂಟುಮಾಡುವ ದು?ರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕು ಎಂದು ಅವರು ಕರೆ ನೀಡಿದರು.

ಪ್ಯಾರ ಮೆಡಿಕಲ್ ವಿಭಾಗದ ಸಂಯೋಜಕರಾದ ಡಾ.ವೀಣಾ ಕೃ?ಮೂರ್ತಿ ಮಾತನಾಡಿ, ಮನೆ-ಸಮಾಜದಲ್ಲಿ ’ಹಿರಿಯರು’ ಎನ್ನಿಸಿಕೊಂಡವರು ಧೂಮಪಾನ ಚಟಕ್ಕೆ ಒಳಗಾದರೆ, ಅವರನ್ನು ಅನುಸರಿಸುವ ಯುವಕರೂ ಆ ಚಟ ಅಂಟಿಸಿಕೊಳ್ಳುತ್ತಾರೆ ಎಂಬುದು ಸತ್ಯ. ಧೂಮಪಾನಿಗಳ ಸಹವಾಸ, ನಟ-ನಟಿಯರ ಅನುಕರಣೆ, ಧೂಮಪಾನ ಮಾಡುವ ಪೋ?ಕರ ಪ್ರಭಾವ, ತಪ್ಪು ಮಾಹಿತಿ ನೀಡುವ ಜಾಹೀರಾತುಗಳು… ಹೀಗೆ ಹತ್ತು ಹಲವು ಕಾರಣಗಳಿಂದ ಧೂಮಪಾನದ ಚಟ ಅಂಟಿಸಿಕೊಂಡು ಅನೇಕ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಯುವಕರು ತುತ್ತಾಗುತ್ತಿದ್ದರೆ. ಅದರಿಂದ ದೂರವಿರುವ ಮೂಲಕ ಉತ್ತಮ ಆರೋಗ್ಯವಂತ ಜೀವನವನ್ನು ಎಲ್ಲರೂ ಆನಂದಿಸವಂತಾಗಬೇಕು ಎಂದು ಹೇಳಿದರು.


ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮಾಲಿನಿ ಮಾತನಾಡಿ, ತಂಬಾಕು ಸೇವನೆಯ ದುಶ್ಚಟಕ್ಕೆ ದಾಸರಾಗಿ ವಿಶ್ವದಲ್ಲಿ ಪ್ರತಿವ? ಸುಮಾರು ೩.೨ ಲಕ್ಷ ಜನರು ಸಾಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಭಾರತದಲ್ಲಿ ೧೩ ಲಕ್ಷಕ್ಕೂ ಹೆಚ್ಚು ಜನರು ತಂಬಾಕಿನ ದು?ರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ. ಯುವ ಪೀಳಿಗೆಯು ತಂಬಾಕಿನ ದುಶ್ಚಟಕ್ಕೆ ಬೀಳುವುದನ್ನು ತಡೆಯುವುದು ಒಂದು ಸವಾಲಾಗಿದೆ. ಈಗಾಗಲೇ ದುಶ್ಚಟಕ್ಕೆ ಒಳಗಾದವರನ್ನು ಹೊರತರುವುದು ದೊಡ್ಡ ಸವಾಲಾಗಿದೆ ಎ0ದರು.

ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನವು ಸಂತೋ? ಹೆಚ್ಚಿಸುತ್ತದೆ, ಧೈರ್ಯ ತುಂಬುತ್ತದೆ’ ಎಂಬೆಲ್ಲ ಹುಸಿ ಕಲ್ಪನೆಗಳು ಜನರಲ್ಲಿ ಮೂಡಿರುವುದು ದುರದೃ?ಕರ. ಬೀಡಿ, ಸಿಗರೇಟು, ಗುಟ್ಕಾ, ಜರ್ದಾ, ನಶ್ಯಾ, ಹುಕ್ಕಾ… ಹೀಗೆ ಅನೇಕ ರೀತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಲಾಗುತ್ತಿದೆ. ತಂಬಾಕಿನಲ್ಲಿರುವ ೧೦೦ ವಿ?ಕಾರಕ ಹಾಗೂ 70 ಕ್ಯಾನ್ಸರ್ಕಾರಕ ರಾಸಾಯನಿಕಗಳು ಶ್ವಾಸಕೋ?ದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ನಾಲಗೆ, ಗಂಟಲಿನ ಕ್ಯಾನ್ಸರ್, ದೀರ್ಘಕಾಲದ ಕೆಮ್ಮು, ಶ್ವಾಸಕೋಶದ ಸೋಂಕಿನಂತ ಹಲವಾರು ಗುಣಪಡಿಸಲಾಗದ ಭಯಂಕರ ರೋಗಗಳಿಗೆ ಕಾರಣವಾಗುತ್ತದೆ. ಅದರಿಂದ ತಂಬಾಕು ಮುಕ್ತ ಸಮಾಜ ಎಲ್ಲರ ಧ್ಯೇಯವಾಗಬೇಕು ಎಂದು ಡಾ.ಮಾಲಿನಿ ತಿಳಿಸಿದರು. ’ವಿಶ್ವ ತಂಬಾಕು ರಹಿತ ದಿನಾಚರಣೆ’ ಅಂಗವಾಗಿ ಏರ್ಪಡಿಸಿದ್ದ ’ತಂಬಾಕು ಮುಕ್ತ ಸಮಾಜ’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ೧೦೭ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಬರೆಯುವುದರ ಜೊತೆಗೆ, ಕಾಲೇಜಿನ ಮೈದಾನದಲ್ಲಿ ತಂಬಾಕು ನಿ?ಧದ ಕುರಿತು ಜಾಗೃತಿ ಅಭಿಯಾನ ನಡೆಸಿದ ವಿದ್ಯಾರ್ಥಿಗಳು ತಂಬಾಕು ನಿ?ಧದ ಅರಿವು ಮೂಡಿಸಿದರು.

Leave a Reply

Your email address will not be published. Required fields are marked *

error: Content is protected !!