ಸ್ವಯಂ ಘೋಷಿತ ತುಮಕೂರು ನಗರ ಶಾಸಕ ಸ್ಥಾನದ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಗೋವಿಂದರಾಜುಗೆ ಟಾಂಗ್ ಕೊಟ್ಟ ಜೆಡಿಎಸ್ ಹಿರಿಯ ಮುಖಂಡ ನರಸೇಗೌಡ್ರು
ತುಮಕೂರು : ಇತ್ತೀಚೆಗೆ ನರಸೇಗೌಡರವರು ಸುದ್ಧಿ ಮಿತ್ರರೊಂದಿಗೆ ಮಾತನಾಡುತ್ತಾ ಇತ್ತೀಚಿನ ವಿದ್ಯಮಾನಗಳ ಕುರಿತು ಚರ್ಚೆ ಮಾಡುತ್ತಿರುವ ತುಮಕೂರು ನಗರ ಜೆಡಿಎಸ್ ಟಿಕೇಟ್ ಆಕಾಂಕ್ಷಿಯ ವಿರುದ್ಧ ಸೂಕ್ಷ್ಮ ವಿಚಾರಗಳನ್ನು ಹೇಳಿದರು. ಅಲ್ಲದೇ ತಮ್ಮ ಪಕ್ಷದ ಮುಖಂಡರುಗಳು ಹೇಳಿಕೆಗಳನ್ನು ನೀಡುವಾಗ ಎಚ್ಚರದಿಂದರಬೇಕು ಇನ್ನು ತಾವು ನೀಡುವ ಹೇಳಿಕೆಗಳು ಮುಖಂಡರಿಗೆ, ಕಾರ್ಯಕರ್ತರಿಗೆ ಪಕ್ಷಕ್ಕೆ ಮುಜುಗರವಾಗದಂತೆ ನೀಡಬೇಕು ಎಂದು ತುಮಕೂರು ನಗರ ಜೆಡಿಎಸ್ ಮುಖಂಡ ನರಸೇಗೌಡ ತಿಳಿಸಿದ್ದಾರೆ.
ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ತುಮಕೂರು ನಗರದಲ್ಲಿ ಬೆಳೆಸಲು ತಳಮಟ್ಟದ ಕಾರ್ಯಕರ್ತರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದು ಪಕ್ಷದ ಬೆಳವಣಿಗೆಗೆ ಸಾಕಷ್ಟು ಹಿರಿಯ ನಾಯಕರು, ಕಿರಿಯ ನಾಯಕರು, ಕಾರ್ಯಕರ್ತರು, ಮುಖಂಡರುಗಳು ಪಕ್ಷಕ್ಕಾಗಿ ಶ್ರಮ ಹಾಕಿದ್ದಾರೆ ಅಂತಹ ಮುಖಂಡರನ್ನು ಪಕ್ಷದಲ್ಲಿರುವವರು ಯಾರೂ ಕಡೆಗಣಿಸಬಾರದು ಎಂದು ಬುದ್ಧಿ ಮಾತು ಹೇಳಿದರು.
ಇನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ತಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಸದಾ ತಲೆಬಾಗುತ್ತೇನೆ. ಪಕ್ಷಕ್ಕೆ ದ್ರೋಹ ಬಗೆಯುವ ಯಾವ ಕೆಲಸವನ್ನು ಸಹ ನಾನು ಮಾಡುವುದಿಲ್ಲ, ಇದುವರೆವಿಗೂ ಮಾಡಿಲ್ಲ ಅಂತೆಯೇ ಇನ್ನು ಜೆಡಿಎಸ್ ಪಕ್ಷಕ್ಕಾಗಿ ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದು ನಾನು ಕೂಡ ಈ ಬಾರಿಯ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಅಲ್ಲೇ ತಳಮಟ್ಟದ ಕಾರ್ಯಕರ್ತರ ಅಭಿಲಾಷೆಯೂ ಅದೇ ಆಗಿದೆ ಎಂದರು.
ಜೆಡಿಎಸ್ ಪಕ್ಷದ ಮುಖಂಡರು ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಗೋವಿಂದರಾಜು ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೆಲ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಇನ್ನು ತುಮಕೂರು ನಗರದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಸಾಕಷ್ಟು ಮುಖಂಡರು ಕಾರ್ಯಕರ್ತರು ಇದ್ದಾರೆ, ಕೆಲವರು ಏಕಪಕ್ಷೀಯವಾಗಿ ಕೆಲವು ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಾ ಇಂತಹ ಹೇಳಿಕೆಗಳನ್ನು ಕೊಡುವುದು ಸೂಕ್ತವಲ್ಲ ಇನ್ನೂ ತಾನು ಕೂಡ ಸ್ನೇಹಿತನಾಗಿ ಪಕ್ಷದ ಮುಖಂಡನಾಗಿ ತಿಳಿಸುವುದು ಏನೆಂದರೆ ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ತರುವಂತೆ ಆಗಬಾರದು ಎಂದು ಹೇಳುವ ಮೂಲಕ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಗೋವಿಂದರಾಜು ರವರಿಗೆ ನೇರ ಟಾಂಗ್ ನೀಡಿರುವುದಲ್ಲದೇ ಕಿವಿ ಮಾತನ್ನೂ ಸಹ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ತಾವು ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಳೆದ ನಾಲ್ಕು ವರ್ಷಗಳಿಂದ ತಾವು ಎಲ್ಲಿದ್ರಿ… ಇನ್ನು ನಗರದ ಜನರು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರು ಅಂತಹ ಸಮಯದಲ್ಲಿ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಸಾರ್ವಜನಿಕರಿಗೆ ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಅಂತಹ ಸಮಯದಲ್ಲಿ ತಾವು ಎಲ್ಲಿದ್ದೀರಿ? ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ತುಮಕೂರು ನಗರದ ಜನತೆ ಗಮನಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ ಇನ್ನು ತಾವೇ ಪಕ್ಷದ ಆಕಾಂಕ್ಷಿಗಳಿಗೆ ಮೇ ತಿಂಗಳ ಗಡುವು ನೀಡಿರುವ ಬಗ್ಗೆ ಕೆಲ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಬಗ್ಗೆ ತಾವು ಕೂಡ ಗಮನಿಸಿದ್ದೀರಿ ಇನ್ನು ಆಕಾಂಕ್ಷಿಗಳಿಗೆ ತಾವೇ ಆಹ್ವಾನ ನೀಡಿ ತಮ್ಮನ್ನು ಭೇಟಿ ಮಾಡಿ ಎನ್ನುವ ಹೇಳಿಕೆಗಳನ್ನು ನೀಡಿದ್ದೀರಿ ಇಂತಹ ಹೇಳಿಕೆಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಬೇಸರ ತರುತ್ತಿದೆ ಇಂತಹ ನಾಯಕರ ಬಗ್ಗೆ ತುಮಕೂರು ನಗರದ ಜನತೆಗೆ ಗೊತ್ತಿದ್ದು ಇಂತಹ ಹೇಳಿಕೆಗಳನ್ನು ನೀಡುವ ಬದಲು ಪಕ್ಷಕ್ಕಾಗಿ ಎಲ್ಲರೂ ಸೇರಿ ದುಡಿಯೋಣ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಪಕ್ಷಕ್ಕಾಗಿ ಕೆಲಸ ಮಾಡೋಣ ಇನ್ನು ಮುಂಬರುವ ಚುನಾವಣೆಗೆ ಇನ್ನೂ ಒಂದು ವರ್ಷಗಳ ಕಾಲಾವಕಾಶವಿದ್ದು ಪಕ್ಷದ ವತಿಯಿಂದ ಹಲವರು ಆಕಾಂಕ್ಷಿಗಳಿದ್ದಾರೆ ಚುನಾವಣೆ ಮುನ್ನ ಪಕ್ಷವನ್ನು ಸಂಘಟನೆ ಮಾಡಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗೋಣ ಎಂದು ಜೆಡಿಎಸ್ ಮುಖಂಡ ಗೋವಿಂದರಾಜು ರವರಿಗೆ ಎಚ್ಚರಿಕೆ ನೀಡುವ ಮೂಲಕ ತಾನು ಕೂಡ ಈ ಬಾರಿಯ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.