ತುಮಕೂರು: ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಆಸ್ಪತ್ರೆ ವೈದ್ಯರ ತಂಡ ’ನಮ್ಮ ನಡೆ ಆರೋಗ್ಯದ ಕಡೆ’ ಆಂದೋಲವನ್ನು ಕುರಂಕೋಟೆ ಗ್ರಾಮದಲ್ಲಿ ನಡೆಸಿತು. ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರದಲ್ಲಿ 185 ಗ್ರಾಮದ ಜನರಿಗೆ ತಪಾಸಣೆ ಮತ್ತು ಚಿಕಿತ್ಸೆ, ಔಷಧೋಪಚಾರ ನೀಡಲಾಯಿತು.
ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಅವರ ಸೂಚನೆಯ ಮೇರೆಗೆ ಕುರಂಕೋಟೆ ಶ್ರೀ ಆಚಿಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರದಲ್ಲಿ ಸ್ತ್ರೀ ಹಾಗೂ ಪ್ರಸೂತಿ, ಕೀಲು ಮತ್ತು ಮೂಳೆ ರೋಗ, ಮಕ್ಕಳ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣಿನ ಪರೀಕ್ಷೆ ಸೇರಿದಂತೆ ಸಾಮಾನ್ಯ ರೋಗಗಳ ತಪಾಸಣೆ ನೆಡಸಿ, ಔಷಧಿಗಳ ವಿತರಣೆ ಮತ್ತು ವೈದ್ಯಕೀಯ ಪರಿಹಾರ ಸೂಚಿಸಲಾಯಿತು. ಶಿಬಿರದಲ್ಲಿ 10ತಜ್ಞ ವೈದ್ಯರ ತಂಡ ಭಾಗವಹಿಸಿ ತಪಾಸಣೆ ಮತ್ತು ಚಿಕಿತ್ಸೆ ನೀಡಿತು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಕುರಂಕೋಟೆ ಗ್ರಾಮ ಪಂಚಾಯಿತಿಯ ಸಂಯುಕ್ತಶ್ರಾಯದಲ್ಲಿ ನಡೆದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರದಲ್ಲಿ ೧೮೫ ಮಂದಿಗೆ ತಪಾಸಣೆ ನಡೆಸಿ ಸೂಕ್ತ ಔಷಧೋಪಚಾರ ನೀಡಲಾಯಿತು. ಕಣ್ಣಿನ ಪರೀಕ್ಷೆಯಲ್ಲಿ ಹೆಚ್ಚಿನ ಉಚಿತ ಶಸ್ತ್ರಚಿಕಿತ್ಸೆಗಾಗಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಆಸ್ಪತೆಗೆ ಭೇಟಿ ನೀಡುವಂತೆ ಗುರುತಿನ ಚೀಟಿ ನೀಡಲಾಯಿತು.