ತುಮಕೂರು ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮದಿನಾಚರಣೆಯನ್ನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರಿ ಕುಲಪತಿಗಳಾದ ಪ್ರೊ. ಕೇಶವ ಡಾ. ಅಂಬೇಡ್ಕರ್ ಈ ಜಗತ್ತು ಕಂಡ ಮಹಾನ್ ನಾಯಕರು. ಅವರು ಕಠಿಣ ಪರಿಶ್ರಮ ಹಾಗು ಅವಿರತ ಹೋರಾಟದಿಂದಾಗಿ ದೀನ ದಲಿತರು, ಮಹಿಳೆಯರು, ಕಾರ್ಮಿಕರು ಕರಾಳ ಶೋಷಣೆಯಿಂದ ಮುಕ್ತಿ ಪಡೆಯುವಂತಾಗಿದೆ. ಅತಿ ಶ್ರೇಷ್ಟ ಸಂವಿಧಾನದ ಮೂಲಕ ಅಸಮಾನ ಸಮಾಜದಲ್ಲಿ ತಣ್ಣನೆಯ ಕ್ರಾಂತಿಯನ್ನು ಮಾಡಿ ಸಮ ಸಮಾಜ ಸ್ಥಾಪನೆಗೆ ಮುನ್ನುಡಿ ರೆದಿದ್ದಾರೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ನಿರ್ಧೇಶಕರಾದ ಪ್ರೊ. ಬಸವರಾಜ ಜಿ ಮಾತನಾಡಿ ಅಧ್ಯಯನ ಕೇಂದ್ರದ ಕಾರ್ಯಕ್ರಮಗಳನ್ನು ವಿವರಿಸದರು. ಅಂಬೇಡ್ಕರ್ ರವರು ಸಾಮಾಜಿಕ ಸಮಾನತೆಗೆ ಪ್ರಾಮುಖ್ಯತೆ ನೀಡಿದರು. ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು ಎನ್ನುವುದು ನನಗೆ ಮುಖ್ಯ ಅಲ್ಲ, ಮಾನವರ ದೃಷ್ಠಿಯಲ್ಲಿ ಎಲ್ಲವರೂ ಸಮಾನರು ಎನ್ನುವುದು ಮುಖ್ಯವೆಂದು ನಂಬಿದ್ದರು ಹಾಗು ಅದನ್ನು ನೆಲೆಗೊಳಿಸಲು ಅಗಲಿರುಳು ದಣಿವರಿಯದೆ ಶ್ರಮಿಸಿದರು. ನಾನು ಎಷ್ಟು ಖುಷಿಯಾಗಿದ್ದೇನೆ ಎಂಬುದು ಮುಖ್ಯವಲ್ಲ ನನ್ನಿಂದ ಎಷ್ಟು ಜನ ಸುಖವಾಗಿದ್ದಾರೆಂಬುದು ಮುಖ್ಯ ಎಂಬುದು ಅವರು ಧ್ಯೇಯವಾಗಿತ್ತು ಎಂಬುದನ್ನು ಸ್ಮರಿಸಿಕೊಂಡರು.
ಸಂಪನ್ಮೂಲ ವೆಕ್ತಿಗಳಾಗಿ ಆಗಮಿಸಿ ಅಂಬೇಡ್ಕರ್ ಅಭಿವೃದ್ಧಿ ಮಾದರಿ ಕುರಿತು ಉಪನ್ಯಾಸ ನೀಡಿದ ಪ್ರೊ. ಜೀವನ್ ಕುಮಾರ್ ತಮ್ಮ ಉಪನ್ಯಾಸದಲ್ಲಿ ಅಂಬೇಡ್ಕರ್ ನೀಡಿರುವ ಐದು ಪ್ರಮುಖ ಅಭಿವೃದ್ಧಿ ಮಾದರಿ ಗಳನ್ನು ಸಾದರಪಡಿಸಿದರು. ಕೃಷಿ ಪ್ರಧಾವಾದ ಭಾರತದಲ್ಲಿ ಕೃಷಿಗೆ ಪ್ರಾಧಾನ್ಯತೆಯನ್ನು ನೀಡಬೇಕು. ನಂತರ ರಚನೆಯಾದ ಡಾ. ಸ್ವಾಮಿನಾಥನ್ ಆಯೋಗದ ವರದಿಯು ಕೂಡಾ ಇದನ್ನೇ ಶಿಫಾರಸು ಮಾಡಿದೆ. ಈ ಕೆಲಸವನ್ನು ಸರ್ಕಾರಗಳು ಮಾಡಿದ್ದೇ ಆಗಿದ್ದಲ್ಲಿ ಸ್ವಾತಂತ್ರ ಬಂದು ೭೫ ಕಳೆದರೂ ರೈತರ ಸಂಕಷ್ಟ ತೀರಿಲ್ಲ. ಬೇಡಿಕೆಗಳನ್ನು ಪೂರೈಸ ಸರ್ಕಾರಗಳ ವಿರುದ್ದ ಒಂದು ವರ್ಷ ಪ್ರತಿಭಟನೆ ಮಾಡಬೇಕಾಯಿತು. ಜಗತ್ತು ಕಂಡ ಅತಿ ದೊಡ್ಡ ಹೋರಾಟ ಇದಾಗಿತ್ತು. ದ್ವಿತಿಯ ಕ್ಷೇತ್ರವಾದ ಕೈಗಾರಿಕೆಗಳಲ್ಲಿ ಬೃಹತ್ ಕೈಗಾರಿಕೆಗಳು ಸರ್ಕಾರದ ಒಡೆತನದಲ್ಲಿರಬೇಕು. ಮಧ್ಯಮ ಹಾಗು ಸಣ್ಣ ಕೈಗಾರಿಕೆಗಳಲ್ಲಿ ಖಾಸಗಿ ಸಹಭಾಗಿತ್ವ ನೀಡಬೇಕೆಂದಿದ್ದರು. ಅದರ ಜೊತೆಗೆ ಕೈಗಾರಿಕೆಗಳಲ್ಲಿ ದಯಡಿಯುವ ಕಾರ್ಮಿಕರಿಗೆ ಏಷ್ಯಾದಲ್ಲೇ ಪ್ರಪ್ರಥಮ ಬಾರಿ ಆರೋಗ್ಯ ವಿಮೆ ಮತ್ತು ವೇತನ ಭಧ್ರತೆಗೆ ಒತ್ತು ಕೊಟ್ಟರು. ಆದರೆ ಈಗಿನ ಸರ್ಕಾರಗಳು ಅದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿವೆ. ಮೂರನೆ ಆದ್ಯತೆಯ ಕ್ಷೇತ್ರ ಆರೋಗ್ಯ ಹಾಗು ಆಹಾರ, ನೆರೆಹೊರೆಯ ಸಣ್ಣಪುಟ್ಟ ರಾಷ್ಟ್ರಗಳು ನೀಡುವಷ್ಟು ಅನುದಾನವನ್ನು ನಾವು ನೀಡುತ್ತಿಲ್ಲ. ಅಂದ ಮೇಲೆ ಸಾಮಾಜಿಕ ಸ್ವಾಸ್ಥ್ಯ ಹೇಗಿದೆಯೆಂಬುದನ್ನು ಮೊನ್ನೆ ಕೋವಿಡ್ ಸಾಂಕ್ರಾಮಿಕ ಸಂದರ್ಭ ಅರ್ಥವಾಗಿದೆ.
ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ವಿವರಿಸುತ್ತಾ ಪರಿಸರದ ಬಗ್ಗೆನೂ ಕೂಡಾ ಅಪಾರ ಖಾಳಜಿಯಿಂದ ಅಭಿವೃದ್ಧಿ ಮಾದರಿಯನ್ನು ಕೊಡುಗಯಾಗಿ ನೀಡಿದ್ದಾರೆ. ಈ ಅಭಿವೃದ್ಧಿ ಮಾದರಿಗಳನ್ನು ಅನುಸರಿಸದೇ ಎಂದು ಸಂಪನ್ಮೂಲ ವ್ಯೆಕ್ತಿಗಳಾದ ಪ್ರೊ. ಜೀವನ್ ಕುಮಾರ್ ಅಂಬೇಡ್ಕರ್ ರವರ ಅಭಿವೃದ್ಧಿ ಮಾದರಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ಉಪನ್ಯಾಸ ನೀಡಿದರು.
ಪ್ರೊ. ಸುದರ್ಶನ್ ರೆಡ್ಡಿ ನಿರ್ಗಮಿತ ಕುಲಪತಿಗಳು ಅಧ್ಯಕ್ಷತೆ ವಹಿಸಿದ್ದರು, ಕುಲಸಿವರಾದ ಪ್ರೊ. ಶಿವಚಿತ್ತಪ್ಪ, ಪರೀಕ್ಷಾಂಗ ಕುಲಸಚಿವರಾದ ಪ್ರೊ.ನಿರ್ಮಲ್ ರಾಜು, ಹಣಕಾಸು ಅಧಿಕಾರಿಗಳು ಉಪಸ್ಥಿತರಿದ್ದರು, ಡಾ. ಮಹಾಲಿಂಗ ಸ್ವಾಗತಿಸಿದರು. ಸಂಶೋಧನಾರ್ಥಿ ಕಾಂಬ್ಳೆ ವಂದಿಸಿದರು ಮಂಜುನಾಥ ನಿರೂಪಣೆ ಮಾಡಿದರು.