ತುಮಕೂರು: ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ, ವಿದ್ಯಾರ್ಥಿಗಳು ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸಲು ಐ.ಟಿ.ಐ. ಕೋರ್ಸ್ ಅಗತ್ಯವಾದ ಕ್ಷೇತ್ರವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾಗಿ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೌಶಲ್ಯ ಹಾಗೂ ಸೌಜನ್ಯವನ್ನು ಬೆಳಸಿಕೊಳ್ಳಬೇಕು ಹಾಗೂ ಜ್ಞಾನ, ಕೌಶಲ್ಯ, ಶಿಸ್ತು, ಯಾವ ರೀತಿಯ ಉತ್ತೇಜನ ಪಡೆಯುವುದು ಹೀಗೆ, ಪ್ರಾಮಾಣಿಕತೆ, ನೈಪುಣ್ಯತೆ, ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ದೊಡ್ಡ ದೊಡ್ಡ ಗುರಿ ಮತ್ತು ಕನಸ್ಸುಗಳನ್ನು ಇಟ್ಟುಕೊಂಡು ಮುಂದೆ ನಡೆಯಬೇಕು ಎಂದು ಶ್ರೀದೇವಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಪ್ರೊ.ಟಿ.ಎ.ಶಿವಶಂಕರ್ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಕೈಗಾರಿಕಾ ತರಬೇತಿ ಕೇಂದ್ರದ ವತಿಯಿಂದ ನೆಲಮಂಗಲದ ಬಿಲ್ಲನಕೋಟೆಯ ಎಸ್ಕಾನ್ ಜನ್ಸೆಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಡಿಸೇಲ್ ಜನರೇಟರ್ ತಯಾರಿಸುವ ಟೆಕ್ನಾಲಜಿ ಬಗ್ಗೆ ಏ.೧೩ ರಂದು ಬಿಲ್ಲನಕೋಟೆಯ ಕಂಪನಿಯಲ್ಲಿ ಮಾಹಿತಿ ತರಬೇತಿಯನ್ನು ನೀಡಲಾಗಿತ್ತು.
ಶ್ರೀದೇವಿ ಕೈಗಾರಿಕಾ ತರಬೇತಿಯ ಕಿರಿಯ ತರಬೇತಿ ಅಧಿಕಾರಿಯಾದ ಹೆಚ್.ಎಸ್.ಗಿರೀಶ್ಕುಮಾರ್ರವರು ಮಾತನಾಡುತ್ತಾ ಉತ್ತಮ ಕೌಶಲ್ಯವಿದ್ದರೆ ಉತ್ತಮ ಜ್ಞಾನಪಡೆಯಲು ಸಾಧ್ಯವೆಂದು ಹಾಗೂ ಐ.ಟಿ.ಐ. ವಿದ್ಯಾರ್ಥಿಗಳು ಕೋರ್ಸ್ ಮುಗಿದ ಕ್ಷಣ ಯಾವ ಯಾವ ಉದ್ಯೋಗಾವಕಾಶಗಳು ಲಭಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಐ.ಟಿ.ಐ. ತೇರ್ಗಡೆಯಾದವರಿಗೆ ಉದ್ಯೋಗ ಲಭಿಸುತ್ತದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಕಾರ್ಯಾಗಾರಕ್ಕೆ ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿಯಾದ ಟಿ.ವಿ. ಬ್ರಹ್ಮದೇವಯ್ಯರವರು ಕಾರ್ಯಾಗಾರಕ್ಕೆ ಶುಭಹಾರೈಸಿದರು.
ಈ ಕಾರ್ಯಾಗಾರದಲ್ಲಿ ಪ್ರೊ.ಅಬ್ದುಲ್ಭಾಷಿಂತ್ರವರು ಮಾತನಾಡುತ್ತಾ ಐ.ಟಿ.ಐ ವಿದ್ಯಾರ್ಥಿಗಳಿಗೆ ಡಿಸೇಲ್ ಜನರೇಟರ್ ತಯಾರಿಸುವ ಟೆಕ್ನಲಾಜಿಯ ಬಗ್ಗೆ ಕಂಪನಿಯ ಬಿಡಿಭಾಗಗಳು, ಜನರೇಟರ್ ಕಾರ್ಯವೈಖರಿ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಅರ್ಥಪೂರ್ಣವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಸನ್ನಕುಮಾರ್, ಅಬ್ದುಲ್ಭಾಷಿಂತ್, ಪ್ರಜ್ವಲ್, ಶ್ರೀಕಾಂತ್, ಅನಿಲ್, ಮಾರುತಿ, ಚಂದ್ರಶೇಖರ್, ವಿಜಯ್ ಹಾಗೂ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ವರ್ಗದವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.