ಗುಣಮಟ್ಟದ ಶಿಕ್ಷಣದ ಜೊತೆ ಜೊತೆಯಲ್ಲಿ ಕಲಿಕೆಗೆ ಅತ್ಯವಶ್ಯಕ : ಡಾ.ಎಂ.ಆರ್.ಹುಲಿನಾಯ್ಕರ್

ತುಮಕೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕೋರ್ಸ್ಗಳಲ್ಲಿ ಪ್ರಯೋಗಾಲಯ, ಫಾಮರ್ಸಿ ಮತ್ತು ಫಿಸಿಯೋಥೆರಪಿ ಕೋರ್ಸ್ಗಳು ಅತ್ಯಂತ ಉಪಯುಕ್ತವಾಗುತ್ತಿದೆ. ಹಾಗೂ ಶಿಕ್ಷಣಕ್ಕೆ ತನ್ನದೇ ಆದ ಮೌಲ್ಯದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಹಾಗೂ ವೈದ್ಯಕೀಯ ಕೋರ್ಸ್ಗಳನ್ನು ತೆಗೆದುಕೊಳ್ಳುವುದರಿಂದ ಉನ್ನತವಾದ ಹುದ್ದೆಗೆ ಆಯ್ಕೆಯಾಗಬಹುದು. ನೂತನ ತಾಂತ್ರಿಕತೆ ಪರಿಣಿತಿವುಳ್ಳ ಸಿಬ್ಬಂದಿಗಳ ಅವಶ್ಯಕತೆ ಹೊಂದಿದೆ. ರೋಗಿಗಳಿಗೆ ಉತ್ತಮ ಸೇವೆ ನೀಡಲು ಬಹು ಅವಶ್ಯಕವಾಗಿದೆ ಇದನ್ನು ಪರಿಗಣಿಸಿ ನಮ್ಮ ಸಂಸ್ಥೆಯಲ್ಲಿ ಫಾಮರ್ಸಿ, ಫಿಸಿಯೋಥೆರಪಿ ಕೋರ್ಸ್ಗಳನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣದ ಜೊತೆ ಜೊತೆಯಲ್ಲಿ ಕಲಿಕೆಗೆ ಅತ್ಯವಶ್ಯಕವಾಗಿ ಉತ್ತಮವಾದ ಕೋರ್ಸ್ಗಳಾದ ಫಾಮರ್ಸಿ ಮತ್ತು ಫಿಸಿಯೋಥೆರಪಿ ಕೋರ್ಸ್ಗಳು ಹೊಂದಿದೆ ಎಂದು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಂ.ಆರ್. ಹುಲಿನಾಯ್ಕರ್‌ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಶ್ರೀದೇವಿ ಫಾರ್ಮಸಿ ಮತ್ತು ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಏ.8 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಮಲ್ಲಿಗೆ ಶಿಕ್ಷಣ ಸಂಸ್ಥೆಯ ಫೌಂಡೇಷನ್‌ನ ನಿರ್ದೇಶಕರು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ.ಶಿವಕುಮಾರ್‌ಸ್ವಾಮಿರವರು ಮಾತನಾಡುತ್ತಾ ವೈದ್ಯರು ನೆರವಾಗುವ ಕೋರ್ಸ್ಗಳ ಬಗ್ಗೆ ಶ್ರದ್ಧೆ, ಧೈರ್ಯದಿಂದ ಮುಂದೆ ಇಟ್ಟು ಕೊಂಡು ಕಲಿಯುವುದು ಉತ್ತಮವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯೊಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಹಾಗೂ ಉಜ್ವಲ ಭವಿಷ್ಯವನ್ನು ರೂಪಿಸಲು ಅವಶ್ಯಕವಾಗಿರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಾವ ಯಾವ ರೀತಿಯಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷ್ಣ ಕಾಲೇಜ್ ಆಫ್ ಫೆಸಿಯೋಥೆರಪಿ ಡೀನ್ ಮತ್ತು ಮಹಾರಾಷ್ಟç ಫೆಸಿಯೋಥೆರಪಿಸ್ಟ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಡಾ.ಜಿ.ವರದರಾಜುರವರು ಮಾತನಾಡುತ್ತಾ ತ್ಯಾಗ, ಸಹನೆ, ಪ್ರೀತಿಯ ವಿಶ್ವಾಸವನ್ನು ವೃತ್ತಿ ಜೀವನದಲ್ಲಿ ಮುಂದುವರೆಸಿ ಕೊಂಡು ಹೋಗಬೇಕು. ಶ್ರದ್ದೆಯಿಂದ, ಪ್ರೀತಿ ವಿಶ್ವಾಸದಿಂದ ವಿದ್ಯಾಭ್ಯಾಸವನ್ನು ಮಾಡಿದರೆ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‌ರವರು ಮಾತನಾಡುತ್ತಾ ಆತ್ಮವಿಶ್ವಾಸದಿಂದಲೇ ವಿದ್ಯಾರ್ಥಿಗಳು ಗೆಲುವಿನ ಮೆಟ್ಟಿಲು ಏರಬಹುದು. ವಿದ್ಯಾರ್ಥಿಗಳು ಪ್ರೀತಿ ವಿಶ್ವಾಸದಿಂದ ವಿದ್ಯಾಭ್ಯಾಸವನ್ನು ಮಾಡಿದರೆ ವಿದ್ಯಾರ್ಥಿಗಳ ಅತ್ಯುತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ದೇಶ – ವಿದೇಶಗಳಲ್ಲಿಯೂ ಫಾಮರ್ಸಿ ಕೋರ್ಸ್ ಮತ್ತು ಫಿಸಿಯೋಥೆರಪಿ ಕೋರ್ಸ್ಗಳಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಲಿದೆ, ಫಿಸಿಯೋಥೆರಪಿ ಕೋರ್ಸ್ಗಳಿಗೆ ಅತ್ಯುತ್ತಮವಾದ ನಮ್ಮ ಸಂಸ್ಥೆಯಲ್ಲಿ ಅತ್ಯುತ್ತಮ ಕೋರ್ಸ್ಗಳ ಆಯ್ಕೆ ಮಾಡಿಕೊಂಡಿದ್ದೀರಾ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಪ್ರೊ.ಟಿ.ವಿ.ಬ್ರಹ್ಮದೇವಯ್ಯ, ನೇತ್ರ ತಜ್ಞರಾದ ಡಾ.ಲಾವಣ್ಯರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು.
ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ಗೋಪಾಲಕೃಷ್ಣ, ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎ.ಆನಂದಿ, ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!