ಪರಮಪೂಜ್ಯ, ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 115ನೇ ಜನ್ಮವರ್ಧಂತಿ ಮಹೋತ್ಸವದ ಪ್ರಯುಕ್ತ ಕೇಂದ್ರ ಗೃಹ ಸಚಿವರಾದ ಅಮಿತ್ ಷಾರವರು ಇಂದು ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭವ್ಯ ವೇದಿಕೆಯಲ್ಲಿ ಗಣ್ಯಾತಿ ಗಣ್ಯರು ಸೇರೆ ಪೂಜ್ಯ ಗುರುಗಳಿಗೆ ಗುರುವಂದನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು ಯುಗಾದಿ ಶುಭ ಕೋರಿ ತಮ್ಮ ಭಾಷಣವನ್ನು ಆರಂಭಿಸಿದರು, ಶ್ರೀ ಗಳ ಗುರುವಂದನೆಗೆ ಅಮಿತ್ ಶಾ ಉಪಸ್ಥಿತಿ ಅರ್ಥಪೂರ್ಣ ವೆನಿಸಿದ್ದು ಡಾ. ಶಿವಕುಮಾರ ಸ್ವಾಮೀಜಿ ಅವರು ಭಕ್ತಿ ವಿರಕ್ತಿ ಯ ಪ್ರತಿರೂಪ ವೆನಿಸಿದ್ದರು. ಭಕ್ತರ ಮನೆಯಿಂದ ಬೇಡಿ ತಂದು ಮಕ್ಕಳ ನ್ನು ಪೋಷಿಸುತ್ತಿದ್ದರು ಎಂದು ಹೇಳಿದರು.
ಅವರನ್ನು ಕಂಡಿರುವುದೇ ನಮ್ಮ ಪುಣ್ಯ. ದೇಶದ ಒಳಿತಿಗಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಡೆಯನ್ನುನಾವೆಲ್ಲ ಬೆಂಬಲಿಸಬೇಕಿದೆ. ಕೃಷಿಕರಿಗೆ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ಶ್ರೀ ಗಳ ಜೀವನ ಚರಿತ್ರೆ ಯನ್ನು ಪಠ್ಯ ಕ್ರಮ ಗಳಲ್ಲಿ ಅಳವಡಿಸಬೇಕೆಂದು ಮುಖ್ಯಮಂತ್ರಿ ಗಳಲ್ಲಿ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರರವರು ಶ್ರೀಗಳ ಹೆಸರಿನಲ್ಲಿ ಪ್ರಸ್ತುತ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟಕ್ಕೆ ಹೆಸರನ್ನು ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ಇಡುವುದರೊಂದಿಗೆ ಅವರ ಹೆಸರನ್ನು ಮಕ್ಕಳಲ್ಲಿ ಶಾಶ್ವತವಾಗಿ ಮೂಡಿಸಬೇಕೆಂದು ಸರ್ಕಾರಕ್ಕೆ ಮನವಿಯನ್ನು ಮಾಡಿದರು.
ಗುರುವಂದನಾ ಕರ್ಯಕ್ರಮಕ್ಕೆ ಯಾವುದೋ ಲೋಪದೋಷಗಳು ಆಗದಂತೆ ಸಕಲ ವ್ಯವಸ್ಥೆಯನ್ನು ಶ್ರೀ ಮಠದಿಂದ ಹಾಗೂ ವೈಯುಕ್ತಿಕವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈವಿಜಯೇಂದ್ರರವರು ನೋಡಿಕೊಂಡಿದ್ದು ವಿಶೇಷ ಅಲ್ಲದೇ ಶ್ರೀಮಠಕ್ಕೆ ಆಗಮಿಸುವ ಸಕಲ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಒಟ್ಟಾರೆಯಾಗಿ ಶಿವಕುಮಾರ ಸ್ವಾಮೀಜಿಗಳ ಅಗಲಿಕೆಯ ನೋವನ್ನು ಕಾಣದಂತೆ ಮಾಡಿರುವುದು ಶ್ಲಾಘನೀಯ ಸಂಗತಿ, ಅವರು ಎಂದೆಂದಿಗೂ ಅಜರಾಮರ, ಅವರು ನಡೆದಾಡಿದ ನೆಲದಲ್ಲಿ ಓಡಾಡುತ್ತಿರುವ ನಾವುಗಳೇ ಪುಣ್ಯವಂತರು ಎಂಬ ಭಾವನೆಯು ಜನರದ್ದಾಗಿದೆ. ಶ್ರೀಗಳ ಆಶೀರ್ವಾದ ಮತ್ತು ಆದರ್ಶ ಸಕಲ ಜೀವಿಗಳಲ್ಲಿ ಇರಲೆಂದು ನಮ್ಮ ಆಶಯ.