ಬೆಂಗಳೂರು : ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳು ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ತಮ್ಮ ಕಾರ್ಯಾಚರಣೆಗಳನ್ನು ಮತ್ತೆ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳ ದೇಶದ ಮೂಲೆ ಮೂಲೆಯಿಂದ ಹಾಗೂ ವಿದೇಶಗಳಿಂದ ಕಾರವಾನ್‌ಗಳು, ದೀರ್ಘ ಅವಧಿಯ ವಸತಿ ಮತ್ತು ಕಸ್ಟಮೈಸ್ ಮಾಡಿದ ವೆಕೇಷನ್‌ಗಳ ಮೂಲಕ ಹೊಸ ಅನುಭವಗಳ ಗುಚ್ಛ ಹಾಗೂ ಉತ್ಪನ್ನಗಳೊಂದಿಗೆ ಪ್ರವಾಸಿಗರನ್ನು ಸ್ವೀಕರಿಸಲು ಸಜ್ಜಾಗಿದೆ.
ರಾಜ್ಯದ ಸಮುದ್ರತೀರಗಳು, ಗಿರಿಧಾಮಗಳು, ಹಿನ್ನೀರು ಮತ್ತು ಹೌಸ್‌ಬೋಟ್‌ಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಅತ್ಯಂತ ಗರಿಗೆದರಿದ್ದು ಈ ವರ್ಷ ಅತಿಥಿಗಳಿಗೆ ವೈವಿಧ್ಯಮಯ ಆಯ್ಕೆಗಳ ಭರವಸೆ ನೀಡುತ್ತದೆ, ಕೇರಳ ಪ್ರವಾಸೋದ್ಯಮ ನಿರ್ದೇಶಕ ಶ್ರೀ ಡಾ. ಮನೋಜ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ರಜಾದಿನದ ತಾಣಕ್ಕೆ ಆಕರ್ಷಿಸುವ ವಿಧಾನದಿಂದ ಬದಲಾವಣೆ ಹೊಂದಿದ್ದು ಇಡೀ ಕೇರಳ ವಿಸ್ತರಿಸಿದ ರಜಾದಿನಗಳಿಗೆ ಸೂಕ್ತ ತಾಣವಾಗಿ ಮರು ಆವಿಷ್ಕರಿಸಿಕೊಳ್ಳುತ್ತಿದ್ದು ಹೋಮ್‌ಸ್ಟೇಗಳು, ಡ್ರೆöÊವ್ ಹಾಲಿಡೇಗಳು, `ಚೇಂಜ್ ಆಫ್ ಏರ್’ ಆಧರಿತ ವೆಲ್‌ನೆಸ್ ವೆಕೇಷನ್‌ಗಳು ಮತ್ತು ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ಒದಗಿಸುತ್ತದೆ ಎಂದರು.
ಪ್ರಯಾಣ ಹಾಗೋ ಪ್ರವಾಸೋದ್ಯಮ ಕ್ಷೇತ್ರವು ಕೇರಳ ಪ್ರವಾಸೋದ್ಯಮದ ಹೊಸ ಉತ್ಪನ್ನಗಳ ಕುರಿತು ಅಪಾರ ಆಸಕ್ತಿ ಉಂಟು ಮಾಡಿದೆ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂದೆ ಒತ್ತಡದ ವರ್ಷವಾಗಲಿದೆ.
ಕೇರಳಕ್ಕೆಎ 2022 ಹಲವಾರು ಕಾರ್ಯಕ್ರಮಗಳು ಮತ್ತು ಉತ್ಸವಗಳು ಮೇ ತಿಂಗಳಲ್ಲಿ ಕೇರಳ ಟ್ರಾವೆಲ್ ಮಾರ್ಟ್, ಆಗಸ್ಟ್-ನವೆಂಬರ್‌ನಲ್ಲಿ ಚಾಂಪಿಯನ್ಸ್ ಬೋಟ್ ಲೀಗ್(ಸಿಬಿಎಲ್) ಮತ್ತು ಡಿಸೆಂಬರ್-ಮಾರ್ಚ್ನಲ್ಲಿ ಕೊಚ್ಚಿ ಮುಜಿ಼ರಿಸ್ ಬೈಎನ್ನೇಲ್ ಆಯೋಜಿಸಿರುವುದೇ ಅಲ್ಲದೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವಗಳು ಮತ್ತು ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದು ಶ್ರೀ ತೇಜ ಹೇಳಿದರು.
ಕೇರಳವು ಸಂದರ್ಶಕರಿಗೆ ದೋಣಿಮನೆಗಳು, ಕಾರವಾನ್ ವಾಸ, ಜಂಗಲ್ ಲಾಡ್ಜ್ಗಳು, ಪ್ಲಾಂಟೇಷನ್ ಭೇಟಿ, ಹೋಮ್ ಸ್ಟೇ ಮತ್ತು ನಗರ ಜೀವನ, ಆಯುರ್ವೇದ ಆಧರಿತ ಸ್ವಾಸ್ಥ್ಯ ಪರಿಹಾರಗಳು, ಗ್ರಾಮಗಳ ನಡೆದಾಟ ಮತ್ತು ಕಡಿದಾದ ಬೆಟ್ಟಗಳ ಮೇಲೆ ಚಾರಣದಂತಹ ಸಾಹಸ ಚಟುವಟಿಕೆಗಳನ್ನು ಒಳಗೊಂಡು ವೈವಿಧ್ಯಮಯ ಅನುಭವಗಳನ್ನು ನೀಡುತ್ತದೆ.
ರಾಜ್ಯದ ಕಾರವಾನ್ ಪ್ರವಾಸೋದ್ಯಮ ಉಪಕ್ರಮ `ಕೆರವಾನ್ ಕೇರಳ’ ಅತ್ಯಂತ ಅಲ್ಪ ಅವಧಿಯಲ್ಲಿಯೇ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದ್ದು ಕೇರಳ ಪ್ರವಾಸೋದ್ಯಮದ ಪ್ರಮುಖ ಉತ್ಪನ್ನವಾಗಿ ದಾಖಲಾಗಿದ್ದು ಮೂರು ದಶಕಗಳ ಹಿಂದಿನ ಹೌಸ್‌ಬೋಟ್ ಕ್ರೂಸ್ ರೀತಿಯಲ್ಲಿಯೇ ಅಪಾರವಾದ ಪ್ರಗತಿ ದಾಖಲಿಸಿದೆ.
ಇಡೀ ಕೇರಳ ರಾಜ್ಯವನ್ನು ಸುಸ್ಥಿರ ರೀತಿಯಲ್ಲಿ ಪ್ರವಾಸಿಗರಿಗೆ ತೆರೆಯುವ ಪ್ರಮುಖ ಉಪಕ್ರಮವನ್ನು ಕೂಡಾ ಪ್ರಾರಂಭಿಸಲಾಗಿದ್ದು ಇದು ಅಲ್ಲಿನ ಪರಿಸರ ವ್ಯವಸ್ಥೆಗೆ ಹಾಗೂ ಪ್ರದೇಶಗಳ ಸಾಂಸ್ಕೃತಿಕತೆ ಭಂಗ ತಾರದಂತೆ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಯೋಜನೆಯು ಕೇರಳದ ವಿಶ್ವದ ಪ್ರಶಂಸೆಗೆ ಒಳಗಾದ ಸಮುದಾಯ-ಕೇಂದ್ರಿತ ಮತ್ತು ಪರಂಪರೆ ಉಳಿಸುವ ಜವಾಬ್ದಾರಿಯುತ ಪ್ರವಾಸೋದ್ಯಮ ಚಳವಳಿಯನ್ನು ರೂಪಿಸುತ್ತಿದ್ದು ಇಲ್ಲಿಯವರೆಗೂ ಆವಿಷ್ಕಾರಗೊಳ್ಳದ ತಾಣಗಳನ್ನು ಇದರಲ್ಲಿ ಸೇರಿಸಲಾಗುತ್ತಿದೆ.
ರಾಜ್ಯವನ್ನು ಸುರಕ್ಷಿತ ಮತ್ತು ಆಕರ್ಷಕ ಹನಿಮೂನ್ ತಾಣವಾಗಿಸಲು ಕೇರಳ ಟೂರಿಸಂ ಭಾರತ ಹಾಗೂ ವಿದೇಶಗಳ ಹನಿಮೂನರ್‌ಗಳನ್ನು ಸೆಳೆಯಲು ಮೈಕ್ರೊ ವಿಡಿಯೋ ಗೀತೆಗಳನ್ನು ಬಿಡುಗಡೆ ಮಾಡಿದೆ.
ಪ್ರವಾಸ ಪ್ರಯಾಣದ ನೆಟ್‌ವರ್ಕಿಂಗ್ ಚಟುವಟಿಕೆಗಳ ಸರಣಿಯ ಭಾಗವಾಗಿ ವ್ಯಾಪಾರ ಮೇಳಗಳನ್ನು ಒಳಗೊಂಡು ಬಿ2ಬಿ ಪಾರ್ಟ್ನರ್‌ಶಿಪ್ ಸಭೆಗಳು ಮತ್ತು ರೋಡ್‌ಶೋಗಳ ಮೂಲ ಹೊಸ ಉತ್ಪನ್ನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಮೊದಲ ಎರಡು ಪಾಲುದಾರಿಕೆ ಸಭೆಗಳು ನವದೆಹಲಿ ಮತ್ತು ಅಹಮದಾಬಾದ್‌ಗಳಲ್ಲಿ ಈ ತಿಂಗಳ ಪ್ರಾರಂಭದಲ್ಲಿ ನಡೆದವು ಮತ್ತು ಮೂರನೆಯದು ಕಳೆದ ವಾರ ಹೈದರಾಬಾದ್‌ನಲ್ಲಿ ನಡೆದಿದ್ದು ಉದ್ಯಮಿಯಿಂದ ಉತ್ತೇಜಕಾರಕ ಫಲಿತಾಂಶ ಪಡೆಯಿತು.
ಪ್ರಮುಖ ಅಂತರಾಷ್ಟ್ರೀಯ ಪ್ರವಾಸೀ ಕಾರ್ಯಕ್ರಮಗಳಲ್ಲಿ ಕೇರಳವು ಮುಂದಿನ ಮೂರು ತಿಂಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಯೋಜನೆ ಹೊಂದಿದ್ದು ಅದರಲ್ಲಿ ಟೆಲ್ ಅವಿವ್(ಇಸ್ರೇಲ್)ನಲ್ಲಿ 28ನೇ ಇಂಟರ್‌ನ್ಯಾಷನಲ್ ಮೆಡಿಟರೇನಿಯನ್ ಮಾರ್ಕೆಟ್ ಮತ್ತು ಬಿಐಟಿ ಮಿಲನ್(ಇಟಲಿ)ಯಲ್ಲಿ ಭಾಗವಹಿಸಲಿದೆ. ಅಲ್ಲದೆ ಮ್ಯಾಡ್ರಿಡ್ ಮತ್ತು ಮಿಲನ್‌ನಲ್ಲಿ ಬಿ2ಬಿ ಸಭೆಗಳನ್ನು ನಡೆಸಲಾಗುತ್ತದೆ.
ರಾಜ್ಯದಲ್ಲಿ ಸ್ಥಳೀಯ ಮೇಳಗಳಾದ ಟಿಟಿಎಫ್ ಚೆನ್ನೈ ಮತ್ತು ಸೌಥ್ ಏಷ್ಯನ್ ಟ್ರಾವೆಲ್ ಅಂಡ್ ಟೂರಿಸಂ ಎಕ್ಸ್ಚೇಂಜ್(ಎಸ್‌ಎಟಿಟಿಇ), ನವದೆಹಲಿಯಲ್ಲಿ ಸದೃಢವಾದ ವ್ಯಾಪ್ತಿ ಹೊಂದಿದೆ.