ಕಂಪ್ಯೂಟರ್ ಭಾಷಾ ಪರಿಣಿತಿ ಭವಿಷ್ಯದ ಜಗತ್ತನ್ನು ಆಳಲಿದೆ

ತುಮಕೂರು: ಇಂದಿನ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದಲ್ಲಿ ಕಂಪ್ಯೂಟರ್ ಭಾಷೆಗಳನ್ನು ಸಮರ್ಥವಾಗಿ ಕಲಿತು, ವಿಶ್ಲೇಷಿಸಿ, ಪರಿಣಿತಿ ಸಾಧಿಸಿದಲ್ಲಿ ಭವಿಷ್ಯದ ಜಗತ್ತು ಅವರದಾಗಲಿದೆ. ಕಂಪ್ಯೂಟರ್ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸುವರೂ ಅವರಿಗೆ ವೃತ್ತಿ ಮತ್ತು ಉದ್ಯಮಗಳಲ್ಲಿ ಭಾರಿ ಬೇಡಿಕೆಯಿರುತ್ತದೆ ಮತ್ತು ಕಾಲಕಾಲಕ್ಕೆ ಕೌಶಲ್ಯಗಳ ಅಳವಡಿಕೆ ಮಾಡಿಕೊಂಡಲ್ಲಿ ಉಜ್ವಲ ಭವಿಷ್ಯವಿರುತ್ತದೆ ಎಂದು ಬೆಂಗಳೂರಿನ ವ್ಯವಹಾರ ಪ್ರಕ್ರಿಯೆ ಲೀಡ್ ಇಂಡಿಜೆನ್ ಪ್ರೈ.ಲಿಮಿಟೆಡ್‌ನ ಶ್ರೀಮತಿ ಟಿ.ಎಂ.ವೇದಾವತಿರವರು ತಿಳಿಸಿದರು.


ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗದ ವತಿಯಿಂದ ಶ್ರೀದೇವಿ ಎಂ.ಬಿ.ಎ. ಕಾಲೇಜಿನ ಸಭಾಂಗಣದಲ್ಲಿ ಎಂ.ಎಸ್.ಎಕ್ಸೆಲ್ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮಕ್ಕೆ ಹೆಚ್ಚುವರಿಯಾಗಿ ತಮ್ಮ ಕೌಶಲ್ಯವನ್ನು ಸುಧಾರಿಸಲು ಇಂತಹ ಕಾರ್ಯಾಗಾರಗಳು ನಡೆಯಬೇಕು ಎಂದು ತಿಳಿಸಿದರು. ಹಾಗೂ ಶ್ರೀದೇವಿ ಸಂಸ್ಥೆಯೂ ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ತನ್ನ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ತಿಳಿಸಿದರು. ಈ ಕಾರ್ಯಾಗಾರಕ್ಕೆ ಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಂ.ಆರ್.ಹುಲಿನಾಯ್ಕರ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಯರಾದ ಡಾ.ಕೆ.ಎಸ್.ರಾಮಕೃಷ್ಣರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಜೊತೆ ಕಂಪ್ಯೂಟರ್ ಜ್ಞಾನವೂ ಅವಶ್ಯಕವಾಗಿದ್ದು, ಮತ್ತು ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ ಉಜ್ವಲ ಭವಿಷ್ಯವನ್ನು ರೂಪಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಎಂ.ಎಸ್.ಎಕ್ಸೆಲ್ ವಿಷಯದ ಬಗ್ಗೆ ವಿಶೇಷ ಕಾರ್ಯಾಗಾರವನ್ನು ನಡೆಸಿಕೊಟ್ಟ ಬೆಂಗಳೂರಿನ ವ್ಯವಹಾರ ಪ್ರಕ್ರಿಯೆ ಲೀಡ್ ಇಂಡಿಜೆನ್ ಪ್ರೈ.ಲಿಮಿಟೆಡ್‌ನ ಶ್ರೀಮತಿ ಟಿ.ಎಂ.ವೇದಾವತಿರವರಿಗೆ ಸನ್ಮಾನಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರೊ.ಬಿ.ಎನ್.ಪ್ರತಾಪ್, ಪ್ರೊ.ಗ್ರೇಸ್ ಹೇಮಲತಾ, ಪ್ರೊ.ಟಿ.ಎಂ.ಪ್ರವೀಣ್ ಕುಮಾರ್, ಪ್ರೊ. ಅಮುತಲ್ ನಸೀಭ್, ಪ್ರೊ.ಶ್ರೀಚರಣ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!